- ಸೂಚನಾ ಫಲಕ ಇಲ್ಲ… ಕೇಳೋರು ಇಲ್ಲ..
- ಇನ್ನಷ್ಟು ಬಲಿ ಬೇಕು… ಅಧಿಕಾರಿಗಳೇ..?
NAMMUR EXPRESS NEWS
ಯಡೂರು: ಯಡೂರು ಸಮೀಪದ ಸುಳುಗೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಕರೆಕತ್ತಲು ಸೇತುವೆ ಬಳಿ ಪುನಃ ಪುನಃ ಅಪಘಾತ ಸಂಭವಿಸುತ್ತಿವೆ.
ಟಿಂಬರ್ ಲಾರಿಯೊಂದು ಕರೆ ಕತ್ತಲೆ ಸೇತುವೆ ಬಳಿ ಅಪಘಾತವಾಗಿ ಬಾರಿ ಅನಾಹುತ ಆಗುವುದು ತಪ್ಪಿದೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದ 15ರಿಂದ 20 ದಿನಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ. ಕಡಿದಾದ ತಿರುವು ಹಾಗೂ ಯಾವುದೇ ಮುನ್ನೆಚ್ಚರಿಕಾ ಫಲಕ ಇಲ್ಲದೆ ಏಳೆಂಟು ವರ್ಷಗಳಿಂದ ಈ ಪ್ರದೇಶದಲ್ಲಿ 30 ರಿಂದ 40 ವಾಹನಗಳ ಅಪಘಾತವಾಗಿದೆ. ಒಂದು ತಿಂಗಳ ಹಿಂದೆ ಆದ ಬಸ್ ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಈ ಸ್ಥಳದಲ್ಲಿ ಹತ್ತು ಹಲವು ಸಾರಿ ಅಪಘಾತಗಳಾದರೂ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಭಾಗದಲ್ಲಿ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ.
ಸೂಕ್ತ ಸೂಚನಾ ಫಲಕ ಅಳವಡಿಸಿ ರಸ್ತೆಯ ತಿರುವುಗಳನ್ನು ಸರಿಪಡಿಸಿ ಅಪಘಾತ ತಡೆಯಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿದೆ.
ಹೊಸನಗರ ಭಾಗದ ನಿರ್ಲಕ್ಷ್ಯ!
ತೀರ್ಥಹಳ್ಳಿ ಹಾಗೂ ಸಾಗರ ಕ್ಷೇತ್ರಕ್ಕೆ ಸೇರಿರುವ ಹೊಸನಗರದ ಬಗ್ಗೆ ಎಲ್ಲಾ ಶಾಸಕರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಹೊಸ ನಗರ ಜನ ಹೋರಾಟಕ್ಕೆ ಇಳಿದಿದ್ದಾರೆ.
ರಾಜ್ಯದ ಹಾಗೂ ನಿಮ್ಮ ಊರಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್(Nammur express)ಸುದ್ದಿಗಳನ್ನು nammur express ಫೇಸ್ಬುಕ್ ಪೇಜ್ ಲೈಕ್ ಮಾಡಿ ಸುದ್ದಿ ಪಡೆಯಿರಿ.
ವಾಟ್ಸಪ್ ಅಲ್ಲಿ ಸುದ್ದಿ ಪಡೆಯಲು ಕೆಳಗಿನ ಲಿಂಕ್ ಬಳಸಿ ಕ್ಲಿಕ್ ಮಾಡಿ ಜಾಯಿನ್ ಆಗಿರಿ.