25 ಪೈಸೆ ಕಾಯಿನ್ ಅಲ್ಲಿ 7 ಅಡಿ ಶಿವಲಿಂಗ!
– ಕುಲಶೇಖರ ಕೈಕಂಬ ಗಣಪತಿ ರಜತ ಮಹೋತ್ಸವ
– 25ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ
NAMMUR EXPRESS NEWS
ಮಂಗಳೂರು: ಮಾಸ್ಟರ್ ಗೈಸ್ ಕೈಕಂಬ ಗಣಪತಿ ಈ ವರ್ಷ ವಿಶೇಷ ಗಣಪತಿಯಾಗಿ ಗಮನ ಸೆಳೆದಿದೆ. ಏಕೆಂದ್ರೆ ಗಣಪತಿ ಜತೆ ಶಿವಲಿಂಗ ಕೂಡ ಮಾಡಲಾಗಿದೆ.
ಮಂಗಳೂರಿನಲ್ಲಿ 25ನೇ ವಾರ್ಷಿಕೋತ್ಸವವನ್ನು ಹಬ್ಬದ ರೀತಿ ಆಚರಿಸಲಾಯಿತು. ಶ್ರದ್ಧಾ ಮತ್ತು ಸಮರ್ಪಣೆ ಸಾಧನೆಯ ವಿಶೇಷದಂತೆ 7 ಅಡಿ ಎತ್ತರದ ರೂ.25025ಗಳಿಂದ 25 ಪೈಸೆಗಳನ್ನ ಬಳಸಿ ನಿರ್ಮಿಸಲಾದ ಅಪರೂಪದ ಶಿವಲಿಂಗ ಮಾಡಲಾಗಿದೆ. ಈ ವಿಭಿನ್ನ ಕಲಾಕೃತಿಯು 25ನೇ ವರ್ಷದಲ್ಲಿಯೂ ಅಪರೂಪದ ಶಿವಲಿಂಗವನ್ನು ಕುಲಶೇಖರದ ಹಿಂದು ಸೇವಾಸಮಿತಿಯ ಶಕ್ತಿಗಣಪತಿಯ ಶೋಭಯತ್ರೆಗೆ ಸಮರ್ಪಸಲಾಯಿತು.
ಪರಿಕಲ್ಪೆಯು ವೈಶಿಷ್ಟ್ತೆ ಮತ್ತು ಕಲೆಯ ಸಂಘಟನೆಯು ಏಕೈಕವಾಗಿ ಸೃಷ್ಟಿಯಾಗಿದೆ, ಮತ್ತು ಇದು ಎಲ್ಲಾ ತಂಡದ ಸದಸ್ಯರ ಶ್ರಮ ಮತ್ತು ಕಲಾಪರಿಣಾಮದ ಫಲಿತಾಂಶವಾಗಿದೆ. ಸಮಾರಂಭದಲ್ಲಿ ಜನಪ್ರಿಯ ಕಲಾವಿದ, ಸಾಹಿತಿಗಳು ಮತ್ತು ಸ್ಥಳೀಯ ಗಣ್ಯರು ಭಾಗವಹಿಸಿದರು.