ಕರಾವಳಿಯಲ್ಲಿ ದಸರಾ ಸಡಗರ!
– ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಂಭ್ರಮ
– ಹುಲಿ ವೇಷದ ರಂಗು: ದೇಗುಲದಲ್ಲಿ ಪೂಜೆ
– ಬೂತಾಯಿ ಮೀನಿನ ಚಿನ್ನದ ಹಾರ ಅರ್ಪಣೆ!
NAMMUR EXPRESS NEWS
ಮಂಗಳೂರು/ಉಡುಪಿ: ದಸರಾ ಹಬ್ಬದ ಬೆಳಕಿನ ಅಲಂಕಾರದಲ್ಲಿ ಕರಾವಳಿಯ ದೇವಾಲಯಗಳು ಕಂಗೊಳಿಸುತ್ತಿವೆ. ದೇವಾಲಯದಲ್ಲಿ ದಸರಾ ಅಲಂಕಾರ, ಪೂಜೆ ಶುರುವಾಗಿದೆ. ಮಂಗಳೂರು ಪಟ್ಟಣದ ಕುದ್ರೋಳಿಯಲ್ಲಿ ಸಂಭ್ರಮದ ದಸರಾ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕೃಷ್ಣ ಮಠ, ಕೊಲ್ಲೂರು, ಮಂದಾರ್ತಿ, ಆನೆಗುಡ್ಡೆ, ಕಮಲ ಶಿಲೆ ಸೇರಿ ಎಲ್ಲಾ ದೇವಾಲಯಗಳಲ್ಲೂ ದಸರಾ ಶುರುವಾಗಿದೆ.
ಬೂತಾಯಿ ಮೀನಿನ ಚಿನ್ನದ ಹಾರ ಅರ್ಪಣೆ!
ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಿಗೆ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ವಿಶೇಷ ಉಡುಗೊರೆ ಕೊಟ್ಟ ನಾಡದೋಣಿ ಮೀನುಗಾರರ ಸಂಘ ಗಮನ ಸೆಳೆದಿದೆ. ಬೂತಾಯಿ ಮೀನಿನ ಚಿನ್ನದ ಹಾರ ಅರ್ಪಣೆ ಮಾಡಲಾಗಿದೆ. ಪಡುಬಿದ್ರಿ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರದಿಂದ ಉಚ್ಚಿಲ ದಸರಾ ಉತ್ಸವ ಸಂಭ್ರಮಕ್ಕೆ ಚಾಲನೆ ದೊರೆತಿದ್ದು, ಆ ಪ್ರಯುಕ್ತ ಮಲ್ಪೆ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಿಗೆ ಚಿನ್ನದ ಬೂತಾಯಿ ಮೀನಿನ ಹಾರವನ್ನು ಅರ್ಪಿಸಲಾಯಿತು.
ಮಂಗಳೂರು ಪಟ್ಟಣ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಶ್ರೀ ಮಂಗಳಾದೇವಿ ಸನ್ನಿಧಿ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ದೇವಸ್ಥಾನಗಳಷ್ಟೇ ಅಲ್ಲ, ಇಡೀ ಮಂಗಳೂರಿಗೆ ವಿದ್ಯುದ್ದೀಪಗಳ ಬೆಳಕಿನ ತೋರಣ ಕಟ್ಟಲಾಗಿದೆ.ರಾತ್ರಿ ಇಡೀ ಮಂಗಳೂರು ದಸರಾ ವೈಭವದಲ್ಲಿದೆ ಕಂಗೊಳಿಸುತ್ತಿದೆ.
ಹುಲಿವೇಷದ ಸಂಭ್ರಮ!
ಕರಾವಳಿಯಲ್ಲಿ ದಸರಾ ಹಬ್ಬದಲ್ಲಿ ಹುಲಿವೇಷದ ಸಂಭ್ರಮ ಮನೆ ಮಾಡಿದೆ. ಪ್ರತಿ ತಾಲೂಕಲ್ಲೂ ಹುಲಿ ವೇಷ ತಂಡಗಳು ಅಂಗಡಿ, ಮನೆ ಬಳಿ ಕಾಣಿಸುತ್ತಿವೆ.