ಡಾ. ಸುಬ್ರಮಣಿಯನ್ ಸ್ವಾಮಿ ಶೃಂಗೇರಿ ಪ್ರವಾಸ
– ಸೆ.14 ರಂದು ಶೃಂಗೇರಿಗೆ ತೆರಳಲಿದ್ದಾರೆ
– 85ನೇ ವರ್ಷದ ಜನ್ಮದಿನಾಚರಣೆ ಹಾಗೂ ವಿಎಚ್ ಎಸ್ ಪ್ರತಿನಿಧಿಗಳ ಸಮಾವೇಶ ಶೃಂಗೇರಿಯಲ್ಲಿ ಆಯೋಜನೆ
NAMMUR EXPRESS NEWS
ಮಂಗಳೂರು: ವಿರಾಟ್ ಹಿಂದೂಸ್ತಾನ್ ಸಂಗಮ್ (VHS) ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಶೃಂಗೇರಿ ಭೇಟಿ ಹಿನ್ನೆಲೆಯಲ್ಲಿ ಸೆ.13ರಂದು ರಾತ್ರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಸೆ.13ರಂದು ಸಂಜೆ ದಿಲ್ಲಿಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ.14ರಂದು ಬೆಳಗ್ಗೆ 8 ಗಂಟೆಗೆ ರಸ್ತೆ ಮಾರ್ಗವಾಗಿ ಶೃಂಗೇರಿಗೆ ತೆರಳಲಿದ್ದಾರೆ.
ಸೆ.14 ಮತ್ತು 15ರಂದು ಡಾ. ಸುಬ್ರಮಣಿಯನ್ ಸ್ವಾಮಿ ಅವರ 85ನೇ ವರ್ಷದ ಜನ್ಮದಿನಾಚರಣೆ ಹಾಗೂ ವಿಎಚ್ ಎಸ್ ಪ್ರತಿನಿಧಿಗಳ ಸಮಾವೇಶ ಶೃಂಗೇರಿಯ ಅಭಿನವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸೆ.14ರಂದು ಸಂಜೆ 5 ರಿಂದ 7 ರವರೆಗೆ ಎರಡು ಅಧಿವೇಶನ ಮತ್ತು ಸೆ.15ರಂದು ಬೆಳಗ್ಗೆ 9 ರಿಂದ 11 ರ ವರೆಗೆ ಕೊನೇಯ ಅಧಿವೇಶನ ನಡೆಯಲಿದೆ. ಡಾ.ಸ್ವಾಮಿ ಅವರು ವಿಎಚ್ ಎಸ್ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾರೋಪದಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಅಭಿನನಾ ಕಾರ್ಕ್ರ ನಡೆಯಲಿದೆ.
ಈ ಎರಡು ದಿನಗಳಲ್ಲಿ ಬೆಳಗ್ಗೆ ಡಾ.ಸ್ವಾಮಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಅವರು ಪವಿತ್ರ ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲದೆ ತಮ್ಮ ಜನ್ಮದಿನದಂದು ಆಯೋಜಿಸಲಾದ ಕೆಲವು ಧಾರ್ಮಿಕ ಕಾರ್ಯಕ್ರಮ ಮತ್ತು ಹೋಮಗಳಲ್ಲಿ ಭಾಗವಹಿಸಲಿದ್ದಾರೆ. ಸೆ.15ರಂದು ಮಧ್ಯಾಹ್ನ 3 ಗಂಟೆಗೆ ಡಾ.ಸ್ವಾಮಿ ಅವರು ಶೃಂಗೇರಿಯಿಂದ ನಿರ್ಗಮಿಸಲಿದ್ದು, ರಾತ್ರಿ 8 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದಿಲ್ಲಿಗೆ ಮರಳಲಿದ್ದಾರೆ.