SDPI ಹೆಸರಿನಲ್ಲಿ ನಕಲಿ ಫೇಸ್ಬುಕ್ ಪೇಜ್ ಅಡ್ಮಿನ್ ಮೇಲೆ ಜಿಲ್ಲಾಧ್ಯಕ್ಷರಿಂದ ದೂರು
– ilsupport ಪೇಸ್ ಬುಕ್ ಪೇಜ್ ಮೇಲೆ ಪೊಲೀಸ್ ದೂರು
NAMMUR EXPRESS NEWS – ಮಂಗಳೂರು : SDPIನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅದ ಅನ್ವ ಸಾದತ್ ಬಜತ್ತೂರು ಅವರು ಪಾಂಡೇಶ್ವರ ಠಾಣೆಯಲ್ಲಿ “ilsupport “ಹೆಸರಿನಲ್ಲಿ ನಕಲಿ ಫೇಸ್ಬುಕ್ ಪೇಜ್ ಖಾತೆ ತೆರೆದ ಅಡ್ಮಿನ್ ಮೇಲೆ ದೂರು ನೀಡಿದ್ದರೆ ಕಿಡಿಗೇಡಿಗಳು ಪಕ್ಷದ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಪೇಜ್ ಒಂದನ್ನು ರಚಿಸಿ ಅದರಲ್ಲಿ ಪಕ್ಷದ ಕೆಲವು ಕಾರ್ಯಚಟುವಟಿಕೆಗಳ ವೀಡಿಯೋಗಳನ್ನು ಅಪ್ಲೋಡ್ ಮಾಡುವುದರೊಂದಿಗೆ ಅಶ್ಲೀಲ ವೀಡಿಯೋಗಳನ್ನು ನಿರಂತರವಾಗಿ ಅಪ್ಲೋಡ್ ಮಾಡುವ ಮೂಲಕ ಸಮಾಜದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ.
ಈಗಾಗಲೇ ಪಾಂಡೇಶ್ವರ ಠಾಣೆಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಆ ಬಳಿಕ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರನ್ನು ಜಿಲ್ಲಾವಿಯೊಳಗವು ಚೀಟಿಯಾಗಿ ಈ ವಿಚಾರದಲ್ಲಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪ ಆಯುಕ್ತರು ಹಾಗೂ ಪಾಂಡೇಶ್ವರ ಠಾಣೆಯ ಸಬ್ ಇನ್ಸೆಕ್ಟರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.