ಕುಕ್ಕೆ ಸೇರಿ ಕರಾವಳಿಯಲ್ಲಿ ನಾಗನಿಗೆ ವಿಶೇಷ ಪೂಜೆ
– ದೇಗುಲಗಳಲ್ಲಿ ಜನವೋ ಜನ: ನಾಗ ಬನಗಳಲ್ಲಿ ಪೂಜೆ
– ಕುಕ್ಕೆ ಸುಬ್ರಮಣ್ಯದಲ್ಲಿ ನಾಗ ದೇವನಿಗೆ ಭಕ್ತರ ಪೂಜೆ
NAMMUR EXPRESS NEWS
ಮಂಗಳೂರು: ನಾಗಾರಾಧನೆಗೆ ವಿಶೇಷ ಸ್ಥಾನಮಾನ ಇರುವ ತುಳುನಾಡಿನಲ್ಲಿ ನಾಗರ ಪಂಚಮಿಯ ಸಂಭ್ರಮ ಕಂಡು ಬಂತು. ರಾಜ್ಯದ ಪ್ರಮುಖ ದೇವಾಲಯವಾದ ಕುಕ್ಕೆ ಸುಬ್ರಮಣ್ಯ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ, ಕುಟುಂಬದ ನಾಗಬನದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುವುದು, ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು.ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಸಂತಾನ ಪ್ರಾಪ್ತಿ ನಾಗ ದೋಷ ನಿವಾರಣೆ ಸಹಿತ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಳಿಯ ಕಟ್ಟು ಸಂಪ್ರದಾಯ ಪಾಲಿಸುವ ತುಳುನಾಡಿನ ಅನೇಕ ಕುಟುಂಬಗಳು ತಮ್ಮ ಕುಟುಂಬದ ನಾಗ ಬನದಲ್ಲಿ ನಾಗ ದೇವರ ಕಲ್ಲಿಗೆ ಹಾಲಿನ ಅಭಿಷೇಕ, ಸಿಯಾಳಭಿಷೇಕ ಹಾಗೂ ಹಿಂಗಾರವನ್ನು ಅರ್ಪಿಸಲಾಯಿತು.