-ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷರಿಂದ ಪರಿಶೀಲನೆ.
-11ತಿಂಗಳ ಒಳಗಾಗಿ ಕನ್ನಡನಾಡಿಗೆ ವಿಷ್ಣು ಸ್ಮಾರಕ ಸಮರ್ಪಣೆ.
ಮೈಸೂರು,ಜ.9 : ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರ್ ಅಂತರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊಂಡಿದ್ದು, ವಿಶ್ವದರ್ಜೆಯ ಸ್ಮಾರಕ ಸ್ಥಳ ಇದಾಗಬೇಕು, ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದರು.
ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವು
ಸುಮಾರು 11 ಕೋಟಿ ರೂ.ಗಳ ಯೋಜನೆಯಾಗಿದ್ದು, ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸ್ಟ್ರಕ್ಷನ್ ಕಂಪನಿ ಮಾಡುತ್ತಿದೆ.
11 ತಿಂಗಳ ಒಳಗಾಗಿ ಕನ್ನಡ ನಾಡಿಗೆ ಈ ಕಾರ್ಯವನ್ನುಸಮರ್ಪಣೆ ಮಾಡಲಿದೆ. ವಾರ್ತಾ ಆಯುಕ್ತರ ಈ ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಎಂಜಿನಿಯರ್ಗಳಾದ ಮಂಜುನಾಥ್ ಸ್ಮಾರಕದ ರೂಪು- ರೇಷೆಗಳನ್ನು ನಕ್ಷೆಯೊಂದಿಗೆ ವಿವರಿಸಿದ್ದಾರೆ ಈ ಸಮಯದಲ್ಲಿ ವಾರ್ತಾ ಅಧಿಕಾರಿ ವಿಜಯಾನಂದ್ ಹಾಗೂ ಅಶೋಕ್ ಕುಮಾರ್ ಹಾಜರಿದ್ದರು.