ನಮ್ಮೂರ್ ಪ್ರಾಬ್ಲಮ್ ಇನ್ಮೇಲೆ ನಿಮ್ಮ ಸಮಸ್ಯೆಗೆ ನಮ್ಮ ದನಿ!
– ಬಿದರಗೋಡು ಗ್ರಾಮದಲ್ಲಿ ಕಾಡಾನೆಗಳ ಭಯ!
– ಎಲ್ಲಿಂದ ಬಂದವು ಕಾಡಾನೆಗಳು? ಹೋರಾಟಕ್ಕೆ ಸಿದ್ದವಾದ ಜನರು
– ಕನ್ನಂಗಿಯ ಬೈರುಗುಂಡಿ ರಸ್ತೆ ಸಮಸ್ಯೆ ಕೇಳುವವರಾರು?
– ಹೊದಲದಲ್ಲಿ ನೀರಿನ ಪೈಪ್ ಕಾಮಗಾರಿ: ಜನರಿಗೆ ತೊಂದರೆ
– ದಬ್ಬಣಗದ್ದೆ ಬಳಿ ರಸ್ತೆ ಕುಸಿತ: ಅಧಿಕಾರಿಗಳ ನಿರ್ಲಕ್ಷ್ಯ..!
NAMMUR EXPRESS NEWS
ತೀರ್ಥಹಳ್ಳಿ: ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮಕ್ಕೆ ಮಂಗಳವಾರ ಕಾಡಾನೆ ನುಗ್ಗಿದ್ದು ರೈತರು ಬೆಳೆದ ಬಹುಪಾಲು ಭತ್ತದ ಗದ್ದೆ ಹಾಳು ಮಾಡಿವೆ. ವರ್ಷದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಆನೆಯ ಅವಾಂತರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಅನೇಕ ವರ್ಷಗಳಿಂದ ಕಾಡಾನೆ ಸಾಗಾಣೆ ಮಾಡಬೇಕೆಂಬ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಆಡಳಿತ ಪಕ್ಷವಾಗಲಿ, ಶಾಸಕರಾಗಲಿ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸೋಮೇಶ್ವರ ಅಭಯಾರಣ್ಯ ಪ್ರದೇಶದಲ್ಲಿ ಹಿಂದೆಂದೂ ಕಾಡಾನೆ ವಾಸವಾಗಿದ್ದ ಉದಾಹರಣೆಗಳು ಇರಲಿಲ್ಲ. ಸುತ್ತಮುತ್ತಲ ಪ್ರದೇಶದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ, ಬೃಹತ್ ಯೋಜನೆ ಕಾರಣದಿಂದ ದಾರಿ ತಪ್ಪಿ ಆಗುಂಬೆ ಕಾಡಿಗೆ ನುಗ್ಗುತ್ತಿದೆ. ಆನೆ ಹೆಜ್ಜೆಗುರುತು ಇಲ್ಲದ ಕಾಡಿನಲ್ಲಿ ಕಾರಿಡಾರ್ ಮಾಡಲು ಸಂಚು ರೂಪಿಸುತ್ತಿದೆ. ಆನೆಯನ್ನು ಗ್ರಾಮಕ್ಕೆ ಬಿಟ್ಟು ಜನರ ಜೀವನ ಮಾಡದ ಸ್ಥಿತಿಯನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಹೀಗೆ ಮುಂದುವರೆಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬೇಕು ಎಂಬ ಪಿತೂರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕನ್ನಂಗಿಯ ಬೈರುಗುಂಡಿ ರಸ್ತೆ ಸಮಸ್ಯೆ ಕೇಳುವವರಾರು?
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಕ್ಕೇರಿ ಗ್ರಾಮದ ಬೈರುಗುಂಡಿ ಎಂಬ ಗ್ರಾಮದವರ ಪರಿಸ್ಥಿತಿ ಯಾರೂ ಕೇಳುವವರಿಲ್ಲ ಎಂಬಂತಾಗಿದೆ. ಈ ಗ್ರಾಮದಲ್ಲಿ ಮೂರು ಕುಟುಂಬಗಳು ಸುಮಾರು ನಲವತ್ತು ವರ್ಷಗಳಿಂದ ವಾಸವಾಗಿದ್ದು, ಈ ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕ ಇರುವುದಿಲ್ಲ.
ಸುಮಾರು 2.8 ಮೀ. ನಡೆದುಕೊಂಡೆ ಸಾಗಬೇಕಾಗಿದೆ. ಗ್ರಾಮದಲ್ಲಿ ಶಾಲೆಗೆ ತೆರಳುವ ಮಕ್ಕಳು, ವಯಸ್ಸಾದವರು, ಗರ್ಭಿಣಿ ಸ್ತ್ರೀಯರು ಇದ್ದು ಎರಡು ಹಳ್ಳಗಳನ್ನು ದಾಟಿ ಮಳೆಗಾಲದಲ್ಲಿ ತೆರಳಬೇಕಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ನಮ್ಮನ್ನಾರು ಕೇಳುವವರಿಲ್ಲ! ಎಂಬ ಗೋಳು,ಜನಸಾಮಾನ್ಯರ ಸ್ಥಿತಿ ಕಷ್ಟಕರವಾಗಿದೆ. ಇದರ ಬಗ್ಗೆ ಹಲವು ಬಾರಿ ಶಾಸಕರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಕೂಡಲೇ ಈ ಬಗ್ಗೆ ಗಮನಿಸಬೇಕಿದೆ.
ಹೊದಲದಲ್ಲಿ ನೀರಿನ ಪೈಪ್ ಕಾಮಗಾರಿ: ಜನರಿಗೆ ತೊಂದರೆ
ತೀರ್ಥಹಳ್ಳಿ : ಚರಂಡಿಗೆ ಪೈಪ್ ಲೈನ್ ಅಳವಡಿಸುವ ನಿಟ್ಟಿನಲ್ಲಿ ದೊಡ್ಡದಾದ ಪೈಪ್ ಗಳನ್ನು ತುಂಬಿರುವ ಲಾರಿಯೊಂದು ಮದ್ಯ ರಸ್ತೆಯಲ್ಲಿ ನಿಂತ ಪರಿಣಾಮ ಶಾಲಾ ವಾಹನ ಸೇರಿ ಇತರ ವಾಹನಗಳಿಗೆ ತೊಂದರೆಯಾಗಿರುವ ಘಟನೆ ಹೊದಲ ಸಮೀಪ ಬುಧವಾರ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಹೊದಲ ಸಮೀಪದಲ್ಲಿ ಮದ್ಯ ರಸ್ತೆಯಲ್ಲಿ ಪೈಪ್ ಇಳಿಸುವ ನಿಟ್ಟಿನಲ್ಲಿ ಅಡ್ಡ ನಿಂತಿರುವುದರಿಂದ ಪಟ್ಟಣಕ್ಕೆ ಆಗಮಿಸುವ ಹಲವರಿಗೆ ತೊಂದರೆ ಉಂಟಾಗಿದೆ. ಶಾಲಾ ವಾಹನ ಸಹ ಸಿಲುಕಿಕೊಂಡಿದ್ದು ಇತರ ವಾಹನಗಳ ಓಡಾಟಕ್ಕೆ ಅನುವು ಮಾಡಿ ಕೊಡುತ್ತಿಲ್ಲ ಎಂದು ದೂರು ಕೇಳಿ ಬಂದಿದೆ.
ರಸ್ತೆ ಇಳಿಸಿದ್ರೆ ಹಳ್ಳಕ್ಕೆ ಬೀಳುತ್ತೆ ಬಸ್!
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಬ್ಬಣಗದ್ದೆ ಸಮೀಪದ ಬೈನೆಸರ ಬಲ್ಲಿ ರಸ್ತೆ ಒಂದು ಬದಿ ಕುಸಿದು ಹೋಗಿದ್ದು, ವಾಹನಗಳು ರಸ್ತೆ ಕೆಳಗಿನ ಹಳ್ಳಕ್ಕೆ ಬೀಳುವ ಅಪಾಯವಿದೆ. ಎದುರು ಇನ್ನೊಂದು ವಾಹನ ಬಂದ್ರೆ ಜಾಗ ಬಿಡದ ಸ್ಥಿತಿ ಇದೆ. ಬೈನೇಸರ, ಭೀಮನಕೊಂಡ ಸೇರಿ ಮೂರು ನಾಲ್ಕು ಕಡೆ ಇಂತಹ ಸಮಸ್ಯೆ ಇದೆ. ಕೂಡಲೇ ಲೋಕೋಪಯೋಗಿ ಇಲಾಖೆ ಗಮನ ವಹಿಸಿಬೇಕು ಎಂದು ಜನತೆ ಅಗ್ರಹಿಸಿದ್ದಾರೆ. ಇತ್ತೀಚಿಗೆ ಸರ್ಕಾರಿ ಬಸ್ ಮತ್ತು ಪಿಕಪ್ ವಾಹನ ನಡುವೆ ಇದೇ ಜಾಗದಲ್ಲಿ ಸೈಡ್ ಕೊಡಲು ಆಗದೆ ಅಪಘಾತವಾಗಿದ್ದು,ಚಾಲಕನಿಗೆ ಗಂಭೀರ ಗಾಯವಾಗಿತ್ತು.