Categories
ತೀರ್ಥಹಳ್ಳಿ ನಮ್ಮೂರ್ ಸಹಾಯ ಹಸ್ತ ಮಲ್ನಾಡ್ ಮಾಹಿತಿ ಸುದ್ದಿ

ಸ್ವಾತಂತ್ರ್ಯ ಹಬ್ಬಕ್ಕೆ ಮತ್ತಷ್ಟು ಹೊಸ ಬಸ್ ನಿಲ್ದಾಣ! – ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನ: ಮಂಜುನಾಥ ಗೌಡರ ಸಾರಥ್ಯ – ಆಗುಂಬೆ ವೃತ್ತ, ಮೇಳಿಗೆ, ಬಸವಾನಿಯಲ್ಲಿ ನೂತನ ಬಸ್ ನಿಲ್ದಾಣಗಳ ಉದ್ಘಾಟನೆ

ತೀರ್ಥಹಳ್ಳಿ: ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಅನುದಾನದಲ್ಲಿ ಈಗಾಗಲೇ ತೀರ್ಥಹಳ್ಳಿ ಸೇರಿ ಮಲೆನಾಡ ಅನೇಕ ಕಡೆ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗೊಳ್ಳುತ್ತಿವೆ. ಇದೀಗ ಸ್ವಾತಂತ್ರ ಹಬ್ಬದ ದಿನ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮ ಆಗುಂಬೆ ವೃತ್ತ, ಮೇಳಿಗೆ, ಬಸವಾನಿಯಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಮಧ್ಯಾಹ್ನ 4 ಗಂಟೆಗೆ ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಸಮೀಪ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಸಂಜೆ 5 ಗಂಟೆಗೆ ಬಸವಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಹಾಗೂ ಬಸವಾನಿ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಅನುಕೂಲಕರ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ವಿಶೇಷ ಅನುದಾನದಲ್ಲಿ ಈ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಸರ್ವರನ್ನು ಈ ಕಾರ್ಯಕ್ರಮಗಳಿಗೆ ಸ್ವಾಗತಿಸಲಾಗಿದೆ.

Categories
ತೀರ್ಥಹಳ್ಳಿ ನಮ್ಮೂರ್ ಸಹಾಯ ಹಸ್ತ ವಿಶೇಷ ಸುದ್ದಿ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ
– ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿ ನಮನ
– ಸಮಾಜ ಸೇವಕ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್, ಸುಧನ್ವ, ನಮನ ಅವರಿಗೆ ಸನ್ಮಾನ

ತೀರ್ಥಹಳ್ಳಿ: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಅ.29ರ ಸಂಜೆ ಸರಳವಾಗಿ ಪುನೀತ್ ನಮನ-2025 ಕಾರ್ಯಕ್ರಮ ಆಚರಣೆ ಮಾಡಲಾಯಿತು.
ತೀರ್ಥಹಳ್ಳಿ ಸಮಾಜ ಸೇವಕರು, ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪ್ರಶಾಂತ್ ಕುಮಾರ್, ಶ್ರೀಕಾಂತ್ ಬೆಟ್ಟಮಕ್ಕಿ, ರಾಘವೇಂದ್ರ ಚಿಡುವ, ಶಿರುಪತಿ ಮಂಜುನಾಥ್ ಸೇರಿ ಅನೇಕರು, ನಮ್ಮೂರ್ ಎಕ್ಸ್ ಪ್ರೆಸ್ ಸಿಬ್ಬಂದಿ, ಪುನೀತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸೊಪ್ಪುಗುಡ್ಡೆ ರಾಘವೇಂದ್ರ ಅವರು, ಪುನೀತ್ ಅವರ ಸೇವೆ ಎಲ್ಲರಿಗೂ ಪ್ರೇರಣೆ. ನಾವೆಲ್ಲರೂ ಸೇವೆಗೆ ಕೈ ಜೋಡಿಸೋಣ ಎಂದರು. ನಮ್ಮೂರ್ ಎಕ್ಸ್ಪ್ರೆಸ್ ಸಂಸ್ಥೆಯ ರಾಘವೇಂದ್ರ ತೀರ್ಥಹಳ್ಳಿ ನಿರೂಪಿಸಿ, ಪ್ರಾಸ್ತವಿಕ ಮಾತನಾಡಿದರು. ಇದೇವೇಳೆ ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು.

ಸೇವಕರು, ಸಾಧಕರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ

ಸಮಾಜ ಸೇವಕರು, ತೀರ್ಥಹಳ್ಳಿಯ ಹತ್ತಾರು ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ಹಾಲಿ ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಹಾಗೂ ಪತ್ರಕರ್ತೆ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್ ಶ್ರೇಯನ್, ಸುಧನ್ವ ಗಡಿಕಲ್, ಗಾಯಕಿ ನಮನ ಕ್ಯಾದಿಗೆರೆ ಅವರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ ನೀಡಲಾಯಿತು.

Categories
ನಮ್ಮೂರ್ ಸಹಾಯ ಹಸ್ತ

ನಮ್ಮೂರ್ ಪ್ರಾಬ್ಲಮ್ ಇನ್ಮೇಲೆ ನಿಮ್ಮ ಸಮಸ್ಯೆಗೆ ನಮ್ಮ ದನಿ!

ನಮ್ಮೂರ್ ಪ್ರಾಬ್ಲಮ್ ಇನ್ಮೇಲೆ ನಿಮ್ಮ ಸಮಸ್ಯೆಗೆ ನಮ್ಮ ದನಿ!

– ಬಿದರಗೋಡು ಗ್ರಾಮದಲ್ಲಿ ಕಾಡಾನೆಗಳ ಭಯ!
– ಎಲ್ಲಿಂದ ಬಂದವು ಕಾಡಾನೆಗಳು? ಹೋರಾಟಕ್ಕೆ ಸಿದ್ದವಾದ ಜನರು
– ಕನ್ನಂಗಿಯ ಬೈರುಗುಂಡಿ ರಸ್ತೆ ಸಮಸ್ಯೆ ಕೇಳುವವರಾರು?
– ಹೊದಲದಲ್ಲಿ ನೀರಿನ ಪೈಪ್ ಕಾಮಗಾರಿ: ಜನರಿಗೆ ತೊಂದರೆ
– ದಬ್ಬಣಗದ್ದೆ ಬಳಿ ರಸ್ತೆ ಕುಸಿತ: ಅಧಿಕಾರಿಗಳ ನಿರ್ಲಕ್ಷ್ಯ..!

NAMMUR EXPRESS NEWS
ತೀರ್ಥಹಳ್ಳಿ: ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮಕ್ಕೆ ಮಂಗಳವಾರ ಕಾಡಾನೆ ನುಗ್ಗಿದ್ದು ರೈತರು ಬೆಳೆದ ಬಹುಪಾಲು ಭತ್ತದ ಗದ್ದೆ ಹಾಳು ಮಾಡಿವೆ. ವರ್ಷದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಆನೆಯ ಅವಾಂತರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಅನೇಕ ವರ್ಷಗಳಿಂದ ಕಾಡಾನೆ ಸಾಗಾಣೆ ಮಾಡಬೇಕೆಂಬ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಆಡಳಿತ ಪಕ್ಷವಾಗಲಿ, ಶಾಸಕರಾಗಲಿ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ.

ಸೋಮೇಶ್ವರ ಅಭಯಾರಣ್ಯ ಪ್ರದೇಶದಲ್ಲಿ ಹಿಂದೆಂದೂ ಕಾಡಾನೆ ವಾಸವಾಗಿದ್ದ ಉದಾಹರಣೆಗಳು ಇರಲಿಲ್ಲ. ಸುತ್ತಮುತ್ತಲ ಪ್ರದೇಶದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ, ಬೃಹತ್ ಯೋಜನೆ ಕಾರಣದಿಂದ ದಾರಿ ತಪ್ಪಿ ಆಗುಂಬೆ ಕಾಡಿಗೆ ನುಗ್ಗುತ್ತಿದೆ. ಆನೆ ಹೆಜ್ಜೆಗುರುತು ಇಲ್ಲದ ಕಾಡಿನಲ್ಲಿ ಕಾರಿಡಾರ್ ಮಾಡಲು ಸಂಚು ರೂಪಿಸುತ್ತಿದೆ. ಆನೆಯನ್ನು ಗ್ರಾಮಕ್ಕೆ ಬಿಟ್ಟು ಜನರ ಜೀವನ ಮಾಡದ ಸ್ಥಿತಿಯನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಹೀಗೆ ಮುಂದುವರೆಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬೇಕು ಎಂಬ ಪಿತೂರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕನ್ನಂಗಿಯ ಬೈರುಗುಂಡಿ ರಸ್ತೆ ಸಮಸ್ಯೆ ಕೇಳುವವರಾರು?

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಕ್ಕೇರಿ ಗ್ರಾಮದ ಬೈರುಗುಂಡಿ ಎಂಬ ಗ್ರಾಮದವರ ಪರಿಸ್ಥಿತಿ ಯಾರೂ ಕೇಳುವವರಿಲ್ಲ ಎಂಬಂತಾಗಿದೆ. ಈ ಗ್ರಾಮದಲ್ಲಿ ಮೂರು ಕುಟುಂಬಗಳು ಸುಮಾರು ನಲವತ್ತು ವರ್ಷಗಳಿಂದ ವಾಸವಾಗಿದ್ದು, ಈ ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕ ಇರುವುದಿಲ್ಲ.
ಸುಮಾರು 2.8 ಮೀ. ನಡೆದುಕೊಂಡೆ ಸಾಗಬೇಕಾಗಿದೆ. ಗ್ರಾಮದಲ್ಲಿ ಶಾಲೆಗೆ ತೆರಳುವ ಮಕ್ಕಳು, ವಯಸ್ಸಾದವರು, ಗರ್ಭಿಣಿ ಸ್ತ್ರೀಯರು ಇದ್ದು ಎರಡು ಹಳ್ಳಗಳನ್ನು ದಾಟಿ ಮಳೆಗಾಲದಲ್ಲಿ ತೆರಳಬೇಕಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ನಮ್ಮನ್ನಾರು ಕೇಳುವವರಿಲ್ಲ! ಎಂಬ ಗೋಳು,ಜನಸಾಮಾನ್ಯರ ಸ್ಥಿತಿ ಕಷ್ಟಕರವಾಗಿದೆ. ಇದರ ಬಗ್ಗೆ ಹಲವು ಬಾರಿ ಶಾಸಕರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಕೂಡಲೇ ಈ ಬಗ್ಗೆ ಗಮನಿಸಬೇಕಿದೆ.

ಹೊದಲದಲ್ಲಿ ನೀರಿನ ಪೈಪ್ ಕಾಮಗಾರಿ: ಜನರಿಗೆ ತೊಂದರೆ

ತೀರ್ಥಹಳ್ಳಿ : ಚರಂಡಿಗೆ ಪೈಪ್ ಲೈನ್ ಅಳವಡಿಸುವ ನಿಟ್ಟಿನಲ್ಲಿ ದೊಡ್ಡದಾದ ಪೈಪ್ ಗಳನ್ನು ತುಂಬಿರುವ ಲಾರಿಯೊಂದು ಮದ್ಯ ರಸ್ತೆಯಲ್ಲಿ ನಿಂತ ಪರಿಣಾಮ ಶಾಲಾ ವಾಹನ ಸೇರಿ ಇತರ ವಾಹನಗಳಿಗೆ ತೊಂದರೆಯಾಗಿರುವ ಘಟನೆ ಹೊದಲ ಸಮೀಪ ಬುಧವಾರ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಹೊದಲ ಸಮೀಪದಲ್ಲಿ ಮದ್ಯ ರಸ್ತೆಯಲ್ಲಿ ಪೈಪ್ ಇಳಿಸುವ ನಿಟ್ಟಿನಲ್ಲಿ ಅಡ್ಡ ನಿಂತಿರುವುದರಿಂದ ಪಟ್ಟಣಕ್ಕೆ ಆಗಮಿಸುವ ಹಲವರಿಗೆ ತೊಂದರೆ ಉಂಟಾಗಿದೆ. ಶಾಲಾ ವಾಹನ ಸಹ ಸಿಲುಕಿಕೊಂಡಿದ್ದು ಇತರ ವಾಹನಗಳ ಓಡಾಟಕ್ಕೆ ಅನುವು ಮಾಡಿ ಕೊಡುತ್ತಿಲ್ಲ ಎಂದು ದೂರು ಕೇಳಿ ಬಂದಿದೆ.

ರಸ್ತೆ ಇಳಿಸಿದ್ರೆ ಹಳ್ಳಕ್ಕೆ ಬೀಳುತ್ತೆ ಬಸ್!

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಬ್ಬಣಗದ್ದೆ ಸಮೀಪದ ಬೈನೆಸರ ಬಲ್ಲಿ ರಸ್ತೆ ಒಂದು ಬದಿ ಕುಸಿದು ಹೋಗಿದ್ದು, ವಾಹನಗಳು ರಸ್ತೆ ಕೆಳಗಿನ ಹಳ್ಳಕ್ಕೆ ಬೀಳುವ ಅಪಾಯವಿದೆ. ಎದುರು ಇನ್ನೊಂದು ವಾಹನ ಬಂದ್ರೆ ಜಾಗ ಬಿಡದ ಸ್ಥಿತಿ ಇದೆ. ಬೈನೇಸರ, ಭೀಮನಕೊಂಡ ಸೇರಿ ಮೂರು ನಾಲ್ಕು ಕಡೆ ಇಂತಹ ಸಮಸ್ಯೆ ಇದೆ. ಕೂಡಲೇ ಲೋಕೋಪಯೋಗಿ ಇಲಾಖೆ ಗಮನ ವಹಿಸಿಬೇಕು ಎಂದು ಜನತೆ ಅಗ್ರಹಿಸಿದ್ದಾರೆ. ಇತ್ತೀಚಿಗೆ ಸರ್ಕಾರಿ ಬಸ್ ಮತ್ತು ಪಿಕಪ್ ವಾಹನ ನಡುವೆ ಇದೇ ಜಾಗದಲ್ಲಿ ಸೈಡ್ ಕೊಡಲು ಆಗದೆ ಅಪಘಾತವಾಗಿದ್ದು,ಚಾಲಕನಿಗೆ ಗಂಭೀರ ಗಾಯವಾಗಿತ್ತು.

Categories
ನಮ್ಮೂರ್ ಸಹಾಯ ಹಸ್ತ

ಕಿಡ್ನಿ ವೈಫಲ್ಯದಿಂದ ಮಗುವಿನ ಹೊಟ್ಟೆಯಲ್ಲಿ ನೀರು..!

ಕಿಡ್ನಿ ವೈಫಲ್ಯದಿಂದ ಮಗುವಿನ ಹೊಟ್ಟೆಯಲ್ಲಿ ನೀರು..!

– ತುರ್ತಾಗಿ ಮಗುವಿನ ಆಪರೇಷನ್ ಸಹಾಯ ಹಸ್ತ ಚಾಚಿದ ತಾಯಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತೂದುರಿನ ಸುಮಾ ಎನ್ನುವವರ ಮಗುವಿಗೆ 2 ಕಿಡ್ನಿ ವೈಫಲ್ಯದಿಂದ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದ್ದು, ಮಗುವಿಗೆ ತುರ್ತಾಗಿ ಆಪರೇಷನ್ ಆಗಬೇಕಿದೆ. ಸುಮಾ ಅವರ ಮನೆಯ ಪರಿಸ್ಥಿತಿ ತುಂಬಾ ಕಷ್ಟದಲ್ಲಿ ಇದ್ದು, ಆಪರೇಷನ್ ಗೆ ಎರಡು ಲಕ್ಷ ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ಕೈಲಾದಷ್ಟು ಹಣವನ್ನು ಕೊಡುವ ಮೂಲಕ ಮಗುವಿನ ಆಪರೇಷನ್ ಗೆ ಸಹಕರಿಸಬೇಕಾಗಿ ವಿನಂತಿ.

ನಿಸಾರ್ ಅಹಮದ್
Google pay / phone pay : 9480409449