200ರೂಪಾಯಿ ನೋಟ್ ಬ್ಯಾನ್?
– 2,000 ರೂಪಾಯಿ ಹಿಂಪಡೆದ ರಿಸರ್ವ್ ಬ್ಯಾಂಕ್
– ಮಾರುಕಟ್ಟೆಯಿಂದ 200 ರೂ.ಮುಖಬೆಲೆ 137 ಕೋಟಿ ಹಣ ವಾಪಾಸ್
NAMMUR EXPRESS NEWS
ಮುಬೈ: ರಿಸರ್ವ್ ಬ್ಯಾಂಕ್ ಆಫ್ ಮುಂಬೈ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಈಗ 200 ರೂ. ಮುಖಬೆಲೆ ನೋಟ್ ಹಿಂಪಡೆಯುವ ಕೆಲಸ ಆರ್ಬಿಐ ಮಾಡುತ್ತಿದೆ. ಕೆಲಗಳ ಪ್ರಕಾರ, ಆರ್ಬಿಐ ವರದಿ ಮಾರುಕಟ್ಟೆಯಿಂದ 200 ರೂ.
ಮುಖಬೆಲೆಯ ಅಂದಾಜು 137 ಕೋಟಿ ಮೌಲ್ಯದ ಹಣ ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್ಬಿಐ ಹಣ ಹಿಂಪಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಆರ್ಬಿಐ ಹಣ ಹಿಂಪಡೆಯುವುದು ಯಾಕೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್ಬಿಐ ನೋಟ್ ಬ್ಯಾನ್ ಮಾಡಲು ಹಣ ಹಿಂಪಡೆಯುತ್ತಿಲ್ಲ, ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್ ಪಡೆಯುತ್ತಿದೆ. ಆರ್ಬಿಐ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟುಗಳ ಗುಣಮಟ್ಟ ಇಳಿಕೆಯ ಪರಿಣಾಮ ಒಟ್ಟು 137 ಕೋಟಿಯನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 135 ಕೋಟಿ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತು. 200 ರೂ. ಮೌಲ್ಯದ ನೋಟುಗಳು ಹೆಚ್ಚು ಕೊಳಕು, ಹರಿದು ಡ್ಯಾಮೇಜ್ ಆಗಿವೆ. 500 ರೂಪಾಯಿ ಮೌಲ್ಯದ ನೋಟುಗಳೇ ಹೆಚ್ಚು ಹಾನಿಗೆ ಒಳಗಾಗಿವೆ. 200 ರೂಪಾಯಿ ನೋಟು ಬಂದ್ ಆದ ನಂತರ 200 ರೂ. ನೋಟ್ ಹೆಚ್ಚು ಚಲಾವಣೆಯಾಗುತ್ತಿರುವ ಕಾರಣ ನೋಟಿನ ಕಾಗದ ಹೆಚ್ಚು ಡ್ಯಾಮೇಜ್ ಆಗುತ್ತಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಪ್ರಕಾರ, ಹಾಳಾದ ಅಥವಾ ಹರಿದ ನೋಟುಗಳಲ್ಲಿ ದೊಡ್ಡ ಮೌಲ್ಯದ ನೋಟುಗಳು ಜೊತೆಯಲ್ಲಿ ಕಡಿಮೆ ಮೌಲ್ಯದ ಕರೆನ್ಸಿಯೂ ಸೇರಿದೆ. 5 ರೂ. ಮೌಲ್ಯದ 3.7 ಕೋಟಿ, 10 ರೂ ಮೌಲ್ಯದ 234 ಕೋಟಿ, 20 ರೂ ಮೌಲ್ಯದ 139 ಕೋಟಿ, 50 ರೂ ಮೌಲ್ಯದ 190 ಕೋಟಿ, 100 ರೂ ಮೌಲ್ಯದ 602 ಕೋಟಿ ರೂಪಾಯಿ ಹಿಂಪಡೆದುಕೊಳ್ಳಲಾಗಿದೆ.