ಅಯೋಧ್ಯೆ ಶ್ರೀ ರಾಮನಿಗೆ 400 ಕೆ.ಜಿ ಬೀಗ!
– ಕೈಯಿಂದ ತಯಾರಾದ ಜಗತ್ತಿನ ದೊಡ್ಡ ಬೀಗ
– ರಾಮನ ಭಕ್ತನಿಂದ ಕೈಯಲ್ಲೇ ತಯಾರಿ
– ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!
– ಪಾಕ್ ಉಗ್ರರ ಎದೆಗೆ ಗುಂಡಿಕ್ಕಿದ ಯೋಧರು
– ಇನ್ನು ಭಾರತದಲ್ಲೇ ತಯಾರಾಗಲಿದೆ ಲ್ಯಾಪ್ ಟಾಪ್ , ಕಂಪ್ಯೂಟರ್
NAMMUR EXPRESS NEWS
ನವ ದೆಹಲಿ: ಅಯೋಧ್ಯೆ ರಾಮಮಂದಿರಕ್ಕೆ ರಾಮ ಭಕ್ತನೊಬ್ಬ 400 ಕೆ.ಜಿ ಬೀಗ ತಯಾರಿಸಿದ್ದಾನೆ.
ಅಲಿಗಢದ ಸತ್ಯ ಪ್ರಕಾಶ ಶರ್ಮ ಎಂಬುವವರು ಒಂದು ತಿಂಗಳ ಅವಧಿಯಲ್ಲಿ ಈ ಬೀಗವನ್ನು ತಯಾರಿಸಿದ್ದಾರೆ.
ಹಿರಿಯ ಕುಶಲಕರ್ಮಿಯೊಬ್ಬರು ಕೈಯಿಂದಲೇ 400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಇದು ಕೈಯಿಂದ ತಯಾರಿಸಿದ ಜಗತ್ತಿನ ಅತಿದೊಡ್ಡ ಬೀಗ ಎಂದು ಹೇಳಲಾಗಿದ್ದು, ರಾಮ ಮಂದಿರ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ. ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿರುವ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ತಯಾರಿಸಿದ್ದಾರೆ. ಬೀಗವನ್ನು ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶರ್ಮಾ ಹೇಳಿದ್ದಾರೆ.
‘ಸತ್ಯ ಪ್ರಕಾಶ್ ಶರ್ಮಾ ಅವರಿಂದ ಬೀಗವನ್ನು ಪಡೆದು, ಯಾವ ಜಾಗಕ್ಕೆ ಅಳವಡಿಸಬಹುದು ಎಂದು ನಿರ್ಧರಿಸಲಾಗುವುದು” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಜನವರಿ 21, 22, ಮತ್ತು 23 ರಂದು ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭವನ್ನುನಡೆಸಲು ದೇವಾಲಯದ ಟ್ರಸ್ಟ್ ನಿರ್ಧರಿಸಿದ್ದು, ಈ ವೇಳೆ ಬೀಗವನ್ನು ಪಡೆಯಲು ಸಿದ್ಧತೆ ನಡೆದಿದೆ.
ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!
ರಾಜಸ್ಥಾನದ ಜೋದ್ಪುರ ಮೂಲದ ಅರ್ಬಾಜ್ ಹಾಗೂ ಪಾಕಿಸ್ತಾನದ ಮೂಲದ ವಧು ಅಮೀನಾ ವರ್ಚುವಲ್ ಮೂಲಕ ಮದ್ವೆ ಆಗಿದ್ದಾರೆ. ಅರ್ಬಾಜ್ ಹಾಗೂ ಅಮೀನಾ ಕುಟುಂಬ ಸಂಬಂಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಹಿನ್ನೆಲೆ ಎರಡು ಕುಟುಂಬದ ನಡುವೆ ಮದುವೆ ಮಾತುಕತೆ ನಡೆದು, ವಿಡಿಯೋ ಕಾಲ್ ನಲ್ಲೇ ವಿವಾಹ ನಡೆದುಹೋಗಿದೆ.
ಅರ್ಬಾಜ್ ಮದುವೆ ದಿಬ್ಬಣ ಜೋದ್ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕಿಸ್ತಾನದಲ್ಲಿರುವ ವಧು ಅಮೀನಾರೊಂದಿಗೆ ವಿವಾಹವಾಗಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.
ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ, ವರ್ಚುವಲ್ ವಿವಾಹ ನೆರವೇರಿದೆ. ಪಾಕಿಸ್ತಾನಕ್ಕೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ಅರ್ಬಾಜ್ ಹೇಳಿದ್ದಾರೆ.
ಇಬ್ಬರು ಉಗ್ರರು ಸೇನೆ ಗುಂಡಿಗೆ ಬಲಿ!
ಜಮ್ಮುಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಸೇನಾ ಪಡೆಗಳು ಸೋಮವಾರ ಗಡಿಯಾಚೆಯಿಂದ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ದಗ್ವಾರ್ ಸೆಕ್ಟರ್ನಲ್ಲಿ ಕೆಲವು ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ಭಯೋತ್ಪಾದಕರ ಬಗ್ಗೆ ಸುಳಿವು ಸಿಕ್ಕಿ ಗುಂಡಿನ ದಾಳಿ ನಡೆಸಿರುವುದಾಗಿ ರಕ್ಷಣಾ ಪಿಆರ್ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ತಿಳಿಸಿದ್ದಾರೆ. ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ದೇಶದಲ್ಲೇ ಸಿದ್ಧಗೊಳ್ಳಲಿವೆ ಲ್ಯಾಪ್ಟಾಪ್, ಕಂಪ್ಯೂಟರ್
ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಪ್ರಮುಖ ಕಂಪೆನಿಗಳ ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ದೇಶದಲ್ಲೇ ಉತ್ಪಾದನೆಯಾಗಲಿದೆ. ಲೆನೊವೋ, ಎಚ್ ಪಿ, ಡೆಲ್, ಆ್ಯಪಲ್ ಸೇರಿದಂತೆ 44 ಸಂಸ್ಥೆಗಳು ದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಲು ನೋಂದಾಯಿಸಿಕೊಂಡಿವೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಸರಕಾರದ 17 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನ ಆಧರಿತ ಪ್ರೋತ್ಸಾಹ ಯೋಜನೆ ಇದಾಗಿದೆ. (ಪಿಎಲ್ ಐ) ಅನ್ವಯ ಈ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಹಲವಾರು ಮೊಬೈಲ್ ತಯಾರಿಕ ಸಂಸ್ಥೆಗಳು ಕ್ಷೇತ್ರದಲ್ಲಿ ಯಶಸ್ಸನ್ನು ದಾಖಲಿಸಿವೆ. ಇದೇ ಮಾದರಿಯಲ್ಲಿ ಐಟಿ ಹಾರ್ಡ್ ವೇರ್ ಗಳ ತಯಾರಿಕೆಯಲ್ಲೂ ಯಶಸ್ಸು ಗಳಿಸುವ ಉದ್ದೇಶದಿಂದ ಹಲವಾರು ಸಂಸ್ಥೆಗಳು ತಮ್ಮ ಹಾರ್ಡ್ ವೇರ್ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಕೋರಿ ನೋಂದಣಿ ಮಾಡಿಕೊಂಡಿವೆ. ಅದಕ್ಕೆ ಆ.30 ಕೊನೆಯ ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳ ದೇಶದಲ್ಲಿ ಪೈಕಿ, ಕೆಲವು ಸಂಸ್ಥೆಗಳು ಕೇವಲ ಅನುಮತಿಗಾಗಿ ಕಾಯುತ್ತಿದ್ದು, ಯಾವುದೇ ಸಮಯದಲ್ಲೂ ಉತ್ಪಾದನಾ ಘಟಕ ತೆರೆಯಲು ತಯಾರಾಗಿವೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಷ್ಟೇ ಅಲ್ಲದೆ ವಿದೇಶಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೂ ತಪ್ಪಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023