45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿ!
– ಅಯೋಧ್ಯೆ ರಾಮನಿಗೆ ತನ್ನ ಕಾಣಿಕೆ ನೀಡಿದ ಭಕ್ತ
– ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು!
NAMMUR EXPRESS NEWS
ಅಯೋಧ್ಯೆ: ದೇಶವೇ ಕಾಯುತ್ತಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ರಾಮಭಕ್ತರೊಬ್ಬರು ಐದೂವರೆ ಲಕ್ಷ ರೂಪಾಯಿ ವೆಚ್ಚ ವ್ಯಯಿಸಿ ತಯಾರಿಸಿದ ಬೃಹತ್ ಅಗರಬತ್ತಿ ಇದೀಗ ಗಮನ ಸೆಳೆಯುತ್ತಿದೆ. ಸುಮಾರು ಅಯೋಧ್ಯೆಗೆ ಸುಮಾರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿಯನ್ನು ಭಕ್ತನೊಬ್ಬ ಕಾಣಿಕೆಯಾಗಿ ನೀಡಿದ್ದಾನೆ. ವಡೋದರದ ರಾಮ ಭಕ್ತನೊಬ್ಬ ಮಾಡಿದ ಭವ್ಯವಾದ, ಭಾರವಾದ ಧೂಪದ್ರವ್ಯವು ತನ್ನ ಪರಿಮಳವನ್ನು ಅಯೋಧ್ಯೆಯಲ್ಲಿ ಹರಡಲು ಸಿದ್ಧವಾಗುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಈ ಧೂಪದ್ರವ್ಯವನ್ನು ಬಳಸಲಾಗುವುದು. ವಡೋದರದ ತರ್ಸಾಲಿ ಮೂಲದ ವಿಹಾಭಾಯಿ ಭರ್ವಾಡ್ ಅವರು ವೃತ್ತಿಯಲ್ಲಿ ಕೃಷಿಕರು ಮತ್ತು ಜಾನುವಾರು ಸಾಕಣೆದಾರರಾಗಿದ್ದಾರೆ.
ರಾಮನನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ರಾಮಮಂದಿರ ಉದ್ಘಾಟನೆ ನಿಮಿತ್ತ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸುತ್ತಿದ್ದಾರೆ. ಇದು 108 ಅಡಿ ಉದ್ದ ಮತ್ತು ನಾಲ್ಕೂವರೆ ಅಡಿ ಅಗಲದ ಬೃಹತ್ ಬತ್ತಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ವಡೋದರಾದಿಂದ ಅಯೋಧ್ಯೆಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. 108 ಅಡಿ ಉದ್ದದ ಈ ಧೂಪದ್ರವ್ಯವನ್ನು ಅಯೋಧ್ಯೆಗೆ ಸಾಗಿಸಲು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ವಡೋದರದ ತಾರ್ಸಾಲಿಯಲ್ಲಿರುವ ವಿಹಾಭಾಯಿ ಅವರ ಮನೆಯ ಸಮೀಪ ತೆರೆದ ಮೈದಾನದಲ್ಲಿ ನಿರ್ಮಿಸುತ್ತಿರುವ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸಿದ ನಂತರ ನವಲಖಿ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ವಡೋದರಾದಿಂದ ಅಯೋಧ್ಯೆಗೆ ಸುಮಾರು 1,800 ಕಿ.ಮೀ ದೂರವಿದೆ. ಅಗರಬತ್ತಿಗಳ ಸಾಗಣೆಗೆ ವಿಶೇಷ ಟ್ರೇಲರ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ 45 ದಿನಗಳ ಕಾಲ ನಿರಂತರವಾಗಿ ಸುಗಂಧ ಸೂಸುತ್ತದೆ.
ಅಗರಬತ್ತಿ ತಯಾರಿಸಲು ಬಳಸಲಾದ ವಸ್ತುಗಳು:
ಹಸುವಿನ ತುಪ್ಪ 91 ಕೆಜಿ, 376 ಕೆಜಿ ಗುಗ್ಗಿಲ್, 280 ಕೆಜಿ ಬಾರ್ಲಿ, 280 ಕೆಜಿ ಎಳ್ಳು, 376 ಕೆಜಿ ಒಣ ಕೊಬ್ಬರಿ ಪುಡಿ, 425 ಕೆಜಿ ಯಜ್ಞ ಸಾಮಗ್ರಿ ಬಳಸಲಾಗಿದೆ. ಒಟ್ಟು 3400 ಕೆ.ಜಿ ತೂಕದ ಈ ಅಗರಬತ್ತಿಯನ್ನು ಸಿದ್ಧಪಡಿಸಲಾಗಿದೆ. ಇದರ ತಯಾರಿಕೆಗೆ ಒಟ್ಟು 3428 ಕೆಜಿ ವಸ್ತುಗಳನ್ನು ಬಳಸಲಾಗಿದೆ. ಬಿಸಿಲು ಮತ್ತು ಬಿಸಿ ವಾತಾವರಣದಲ್ಲಿ ಹೊರಾಂಗಣದಲ್ಲಿ ತಯಾರಿಸಲಾಗುತ್ತಿದೆ.
ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು!
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಮೊದಲ 100 ದಿನಗಳ ಕಾಲ ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ 1000 ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.
ಜ.22ರಂದು ಮಂದಿರದ ಉದ್ಘಾಟನೆ ನಡೆಯಲಿದೆ.
ಜ.19ರಿಂದ ಈ ರೈಲುಗಳ ಕಾರ್ಯಾಚರಣೆ ಆರಂಭವಾಗಲಿದೆ. ಅಯೋಧ್ಯೆ ರೈಲು ನಿಲ್ದಾಣ ವನ್ನು ನವೀಕರಿಸಲಾಗುತ್ತಿದ್ದು, ದಿನಕ್ಕೆ 50 ಸಾವಿರ ಜನರು ಸಂಚರಿಸುವ ಸಾಮರ್ಥ ಹೊಂದಲಿದೆ.
ಎಲ್ಲೆಲ್ಲಿಂದ ರೈಲು?
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗುರ, ಲಖನೌ ಮತ್ತು ಜಮ್ಮು ಸೇರಿದಂತೆ ವಿವಿಧ ನಗರ ಗಳಿಂದ ಅಯೋಧ್ಯೆಗೆ ರೈಲುಗಳು ಸಂಚರಿ ಸಲಿವೆ. ರಾಮನ ದರ್ಶನ ಮಾಡಿ ಇದೇ ರೈಲುಗಳಲ್ಲಿ ಭಕ್ತರು ಮರಳಬಹುದು.