ಮತ್ತೆ ಭೂತಾನ್ ಭೂತ: ಅಡಿಕೆಗೆ ಕುತ್ತು ಬರುತ್ತಾ?
– ಕರ್ನಾಟಕ ಅಡಿಕೆ ಬೆಳೆದ ರೈತರಿಗೆ ದೊಡ್ಡ ಹೊಡೆತ
– ಅಡಿಕೆ ದರ ಇಳಿಯುತ್ತಾ…?,ಕೇಂದ್ರದ ನಿರ್ಧಾರ ಏನು?
NAMMUR EXPRESS NEWS
ನವ ದೆಹಲಿ: ಅಡಿಕೆಗೆ ಮತ್ತೆ ಕುತ್ತು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಭೂತಾನ್ನಿಂದ ಪ್ರತಿವರ್ಷ 17 ಸಾವಿರ ಟನ್ ತಾಜಾ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದು ದೇಶಿಯ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಕಳೆದ ನಾಲ್ಕು ವರ್ಷಗಳಿಂದ ಭೂತಾನ್ನಿಂದ ಅಡಿಕೆ ಆಮದು ಆಗಿರಲಿಲ್ಲ. ಕನಿಷ್ಠ ಬೆಂಬಲ ಬೆಲೆಯ ಯಾವುದೇ ಷರತ್ತುಗಳನ್ನು ವಿಧಿಸದೆ ಪ್ರತಿವರ್ಷ ತಾಜಾ ಅಡಿಕೆ ಅಮದು ಮಾಡಿಕೊಳ್ಳಲು ಜುಲೈ 3ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಮದನ್ನು ಪಶ್ಚಿಮ ಬಂಗಾಳದ ಜೈಗಾನ್ ಬಂದರು ಹಾಗೂ ಚಾಮುರ್ಚಿ ಬಂದರು ಮೂಲಕವೇ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಅಂತಹ ಅಮದುಗಳು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ನೀಡಿದ ಬಂದರು ನೋಂದಣಿ ಪ್ರಮಾಣ- ಪತ್ರಕ್ಕೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದ್ದಾರೆ. ಇದು ಭಾರತ, ಅದರಲ್ಲೂ ಕರ್ನಾಟಕ ರೈತರಿಗೆ ದೊಡ್ಡ ಹೊಡೆತ ನೀಡಲಿದೆ ಎನ್ನಲಾಗಿದೆ.
ಮ್ಯಾನ್ಮಾರ್, ಶ್ರೀಲಂಕಾ, ಇಂಡೊನೇಷ್ಯಾದಿಂದ ಅಡಿಕೆ ಆಮದು!
ಕಳೆದ ಎರಡು ವರ್ಷಗಳಿಂದ ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಇಂಡೊನೇಷ್ಯಾದಿಂದ ಅಡಿಕೆ ಆಮದು ಹೆಚ್ಚಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು, ಅಡಿಕೆಯ ಅಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ 7251ಯಿಂದ 7351ಕ್ಕೆ ಹೆಚ್ಚಿಸಿ ಈ ವರ್ಷದ ಫೆಬ್ರುವರಿ 14ರಂದು ಅಧಿಸೂಚನೆ ಹೊರಡಿಸಿತ್ತು, ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿ ತ್ತು. ಜತೆಗೆ, ಸುಪಾರಿಯ ಆಮದು ನೀತಿಯನ್ನು ಉಚಿತದಿಂದ ನಿಷೇಧಿತ ಎಂದೂ ಪರಿಷ್ಕರಿಸ ಲಾಗಿತ್ತು’ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಅಡಿಕೆ ದರ ಕುಸಿತ ಸಾಧ್ಯತೆ!
ಅಡಿಕೆಯ ಅಮದಿನಿಂದ ದೇಶೀಯ ಅಡಿಕೆಯ ಬೆಲೆ ಕುಸಿತವಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಹಾಗೂ ರೈತ ಸಂಘಟನೆಗಳು ಇಲಾಖೆಗೆ ಮನವಿ ಸಲ್ಲಿಸಿದ್ದವು. ಅಡಿಕೆಯ ಅಡೆತಡೆ ಇಲ್ಲದ ಅಮದು ನಿಯಂತ್ರಿಸಲು ಹಾಗೂ ಕಳಪೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಸಚಿವಾಲಯವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ತಿಳಿಸಿದ್ದಾರೆ.
ಮಲೆನಾಡಿಗೆ ಬದುಕಿಗೆ ಪೆಟ್ಟು!
ಅಡಿಕೆ ಆಮದು ಈಗಾಗಲೇ ಎಲೆ ಚುಕ್ಕಿ, ಬೇರುಳ, ತುಂಡೆ ರೋಗ ಸೇರಿ ಅನೇಕ ರೋಗಗಳಿಂದ ತತ್ತರವಾಗಿರುವ ಮಲೆನಾಡ ರೈತರ ಬದುಕು ಆತಂಕದಲ್ಲಿದೆ. ಈಗ ಅಡಿಕೆ ಅಮದಿನಿಂದ ಬೆಲೆ ಇಳಿಕೆಯಾದರೆ ರೈತರ ಬದುಕು ತೊಂದರೆಗೆ ಒಳಗಾಗಲಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023