ಯುಎಇ ಯಲ್ಲಿ ಬೃಹತ್ ಹಿಂದೂ ದೇವಸ್ಥಾನ
– ಅಬುಧಾಬಿಯಲ್ಲಿ ನಿರ್ಮಾಣಗೊಂಡ ನೂತನ ಹಿಂದೂ ದೇವಾಲಯ!
– ಪ್ರಧಾನಿ ಮೋದಿಯವರಿಂದ ಫೆ.14ರ ಇಂದು ಉದ್ಘಾಟನೆ
NAMMUR EXPRESS NEWS
ಫೆಬ್ರವರಿ 14ರ ಈ ದಿನ ಮುಸ್ಲಿಮ್ ರಾಷ್ಟ್ರವಾದ ಅಬುಧಾಬಿಯಲ್ಲಿ ಬೃಹತ್ ಹಿಂದೂ ದೇವಾಲಯದ ಉದ್ಘಾಟನೆಯ ಸಮಾರಂಭವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಡೆಸಿಕೊಡಲಿದ್ದಾರೆ. ಗಲ್ಫ್ ದೇಶಗಳಲ್ಲಿ ಹಿಂದೂ ದೇವಸ್ಥಾನಗಳು ಅತೀ ವಿರಳವಾಗಿದ್ದು ಅಲ್ಲೊಂದು ಇಲ್ಲೊಂದು ಕೇವಲ ಬೆರಳೆಣಿಕೆಯಷ್ಟಿವೆ. ದೇವಸ್ಥಾನಗಳೂ ಕೂಡ ಪೂರ್ತಿ ಭಾರತೀಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಿರಲಿಲ್ಲ. ಅಬುಧಾಬಿಯಲ್ಲಿ ನೂತನವಾಗಿ ನಿರ್ಮಾಣವಾದ ದೇವಸ್ಥಾನಕ್ಕೆ ಸ್ಥಳವನ್ನು 2014ರಲ್ಲೇ ಯುಎಇ ಸರ್ಕಾರ ನಿಗದಿ ಪಡಿಸಿತ್ತು.
ಭಾರತಕ್ಕೆ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗಲೇ ಯುಎಇ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪವಿಡಲಾಗಿತ್ತು. ಮಹಾಂತ್ ಮಾಹಾರಾಜರು 1997 ರಲ್ಲೇ ಈ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಇದು ಯುಎಇ ಯಲ್ಲಿ ವಾಸಿಸುತ್ತಿರುವ ಎಲ್ಲ ಹಿಂದೂಗಳ ಬಯಕೆಯೂ ಹೌದು. ಬಹು ನಿರೀಕ್ಷಿತ ಹಿಂದೂ ದೇವಾಲಯವು ವಿದೇಶದಲ್ಲಿ ಇಂದು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ.