ಅಯೋಧ್ಯೆ ಶುಭ ಘಳಿಗೆ!
– ಸುಮಾರು 500 ವರ್ಷದ ಕನಸು ಇಂದು ನನಸು!
– ಜ.23 ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ
– ರಾಮನ ವಿಗ್ರಹ ನಿರ್ಮಿಸಿದ ಹೆಮ್ಮೆ ಕರುನಾಡಿಗೆ
– 7000ಕ್ಕೂ ಹೆಚ್ಚು ಗಣ್ಯರ ಆಗಮನ
NAMMUR EXPRESS NEWS
ಅಯೋಧ್ಯೆಯ ಸಂಭ್ರಮ ಇಡೀ ದೇಶದಲ್ಲಿಯೇ ಮನೆ ಮಾಡಿದ್ದು ಅಯೋಧ್ಯೆಗೆ ಗಣ್ಯರ ಆಗಮನವಾಗಿದೆ. ತ್ರೇತಾಯುಗದ ರಾಮನ ಪಟ್ಟಾಭಿಷೇಕದ ವರ್ಣನೆಯನ್ನು ನೆನಪಿಸುವಂತೆ ಅಯೋಧ್ಯೆ ಕಂಗೊಳಿಸುತ್ತಿದೆ. ಮಧ್ಯಾಹ್ನ 12.30 ಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು ಇದು ಕೇವಲ 82 ಸೆಕೆಂಡ್ ಘಳಿಗೆಯಲ್ಲಿ ನಡೆಯಲಿದೆ. ದೇಶದ ಸಾಧು ಸಂತರು, ಕಲಾವಿದರು, ಪುರೋಹಿತರು, ಸಿನಿಮಾ ಕಲಾವಿದರು, ಸಂಗೀತಗಾರರು, ವಾಸ್ತು ಶಿಲ್ಪಿಗಳು, ಸೇವಕರು, ಸಾವಿರಾರು ಭಕ್ತರು ಆಗಮಿಸಿದ್ದಾರೆ. ಇಡೀ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಅಯೋಧ್ಯೆ ಸಹಸ್ರಾರು ಭಕ್ತರಿಂದ ಒಂದು ಕಡೆ ತುಂಬಿ ತುಳುಕುತ್ತಿದ್ದರೆ ಇನ್ನೊಂದು ಕಡೆ ದೀಪಾಲಂಕಾರ, ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಸುಮಾರು ಇಪ್ಪತ್ತೈದು ಸಾವಿರ ಪೋಲಿಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.