ದೇಶದಲ್ಲಿ ಮತ್ತೆ ಬಿ.ಎಸ್.ಎನ್.ಎಲ್ ಹವಾ?
– ಒಂದೇ ದಿನಕ್ಕೆ 1 ಲಕ್ಷ ಸಿಮ್ ಬಿ.ಎಸ್.ಎನ್.ಎಲ್ ಪೋರ್ಟ್
– ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್!
– ಮೊಬೈಲ್ ಕರೆ ದರ ಏರಿಕೆ ವಿರುದ್ಧ ಸಿಟ್ಟು
NAMMUR EXPRESS NEWS
ನವದೆಹಲಿ: ದೇಶದಲ್ಲಿ ಮತ್ತೆ ಬಿ.ಎಸ್.ಎನ್.ಎಲ್ ಹವಾ ಮತ್ತೆ ಶುರುವಾಗಿದೆ. ಒಂದೇ ದಿನಕ್ಕೆ 1 ಲಕ್ಷ ಸಿಮ್ ಬಿ.ಎಸ್.ಎನ್.ಎಲ್ ಕಡೆಗೆ ಪೋರ್ಟ್ ಆಗಿರುವ ಬಗ್ಗೆ ವರದಿ ಆಗಿದೆ. ಈ ನಡುವೆ ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿ.ಎಸ್.ಎನ್.ಎಲ್ ಘೋಷಣೆ ಮಾಡಿದೆ.
ಇತ್ತ ಮೊಬೈಲ್ ಕರೆ ದರ ಏರಿಕೆ ವಿರುದ್ಧ ಗ್ರಾಹಕರು ಸಿಟ್ಟಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಿಯೋ ಬಾಯ್ಕಟ್ ಅಭಿಯಾನ ಆರಂಭವಾಗಿದ್ದು, ಬಿಎಸ್ಎನ್ಎಲ್ ಘರ್ ವಾಪಸಿ ಅಂತ ಬರೆದುಕೊಂಡಿದ್ದಾರೆ. ಯಾವಾಗ ಅಭಿಯಾನ ಆರಂಭವಾಯ್ತೋ ಎಚ್ಚೆತ್ತುಕೊಂಡ ಬಿಎಸ್ಎನ್ಎಲ್ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆ ಮಾಡಿದೆ.
ಪ್ರಮುಖ ಟೆಲಿಕಾಂ ಆಪರೇಟರ್ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದಿರುವುದಕ್ಕೆ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಿಎಸ್ಎನ್ಎಲ್ಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್ ಜಿಯೋನಿಂದ ಬಿಎಸ್ಎನ್ಎಲ್ಗೆ ಬಂದಿದ್ದಾರೆ ಅನ್ನುವುದು ವಿಶೇಷ.
ಸದ್ಯ BSNL ನೆಟ್ವರ್ಕ್ 4G ನೆಟ್ವರ್ಕ್ಗಳಿಗೆ ಸೀಮಿತವಾಗಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್ವರ್ಕ್ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್ವರ್ಕ್ಗೆ ಬಿಎಸ್ಎನ್ಎಲ್ ಸ್ಥಳಾತರಗೊಳ್ಳಲು ಕೂಡ ಯೋಚಿಸುತ್ತಿದೆ. ಇದೆಲ್ಲದರ ನಡುವೆ ಬಿಎಸ್ಎನ್ಎಲ್ 199 ರೂ ಪ್ಯಾಕ್ ನ ಆಫರ್ ನೀಡಿದ್ದು, 30 ದಿನದ ವ್ಯಾಲಿಡಿಟಿಗೆ ಒಟ್ಟು 60 GB ಡೇಟಾ ದಿನಕ್ಕೆ 2 GB, 100 ಮೆಸೇಜ್, ಅನಿಯಮಿತ ಕರೆ ನೀಡುತ್ತಿದೆ.
ಮೊಬೈಲ್ ರೀಚಾರ್ಜ್ ದರ ಏರಿಕೆ: ಆಕ್ರೋಶ
ಮೂರು ಖಾಸಗಿ ಮೊಬೈಲ್ ಆಪರೇಟರ್ ಕಂಪನಿಗಳು ತಮ್ಮ ಟ್ಯಾರೀಫ್ ನಲ್ಲಿ ಭಾರೀ ಏರಿಕೆ ಮಾಡಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ನರೇಂದ್ರ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿಪಕ್ಷಗಳು, ಯಾವುದೇ ಮೇಲ್ವಿಚಾರಣೆ ಮತ್ತು ನಿಯಂತ್ರಣವಿಲ್ಲದೆ ವಾರ್ಷಿಕವಾಗಿ ಬರೋಬ್ಬರಿ 34,824 ಕೋಟಿ ರೂ. ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಒಟ್ಟಾರೆಯಾಗಿ ಸರಾಸರಿ 15 ಪ್ರತಿಶತದಷ್ಟು ಸುಂಕವನ್ನು ಹೆಚ್ಚಿಸಿವೆ. ಹೆಚ್ಚಳವು 109 ಕೋಟಿ ಚಂದಾದಾರರ ಮೇಲೆ ಗಣನೀಯ ಪರಿಣಾಮ ಬೀರಲಿದ್ದು, ಅವರಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ.ಸಿಪಿಐ(ಎಂ) ಬೆಂಬಲಿತ ಸಿಐಟಿಯು ಕೂಡ ಕಳವಳ ವ್ಯಕ್ತಪಡಿಸಿದ್ದು, ಈ ದರ ಹೆಚ್ಚಳವು ನ್ಯಾಯಸಮ್ಮತವಲ್ಲ ಮತ್ತು ಸಾಮಾನ್ಯ ಜನರಿಗೆ ಅಸಮಾನವಾಗಿ ಹೊರೆಯಾಗುತ್ತದೆ ಎಂದು ಹೇಳಿದ್ದಾರೆ.
ರಿಲಯನ್ಸ್ ಜಿಯೊದ ದರ ಹೆಚ್ಚಳವು ಸರಾಸರಿ 20 ಪ್ರತಿಶತದಷ್ಟಿದೆ ಇದರಿಂದ ಪ್ರತಿ ಗ್ರಾಹಕನಿಗೆ ಮಾಸಿಕ ರೂ 30.51 ಗೆ ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದಾಗಿ ತಿಂಗಳಿಗೆ ಹೆಚ್ಚುವರಿ ರೂ. 1,464 ಕೋಟಿ ಅಥವಾ ಅದರ 48 ಕೋಟಿ ಚಂದಾದಾರರಿಂದ ವಾರ್ಷಿಕವಾಗಿ ರೂ 17,568 ಕೋಟಿಗಳನ್ನುಈ ಖಾಸಗಿ ಕಂಪನಿಗಳು ಉತ್ಪಾದಿಸುತ್ತದೆ ಎಂದು ಸುರ್ಜೆವಾಲ ಹೇಳಿದರು.
39 ಕೋಟಿ ಚಂದಾದಾರರನ್ನು ಹೊಂದಿರುವ ಏರ್ಟೆಲ್ ಶೇಕಡಾ 15 ರಷ್ಟು ದರ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ತಿಂಗಳಿಗೆ ಹೆಚ್ಚುವರಿ 892 ಕೋಟಿ ಅಥವಾ ವಾರ್ಷಿಕವಾಗಿ 10,704 ಕೋಟಿ ರೂ. ಅದೇ ರೀತಿ, ವೊಡಾಫೋನ್ ಐಡಿಯಾ ನ 16 ಪ್ರತಿಶತ ಹೆಚ್ಚಳವು ಅದರ 22.37 ಕೋಟಿ ಬಳಕೆದಾರರಿಂದ ಮಾಸಿಕ 546 ಕೋಟಿ ರೂಪಾಯಿ ಅಥವಾ ವಾರ್ಷಿಕ 6,552 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಿಗಲಿದೆ.