ಕೇಂದ್ರದ ಬಜೆಟ್ ಕ್ಷಣಗಣನೆ ಶುರು!
– 11 ಗಂಟೆಯಿಂದ ಬಜೆಟ್ ಮಂಡನೆ ಮಾಡ್ತಾರೆ ನಿರ್ಮಲಾ ಮೇಡಂ
– ಕೃಷಿ, ಉದ್ಯೋಗ ಸೃಷ್ಟಿಗೆ ಒತ್ತು: ಹೊಸ ಯೋಜನೆ ಇಲ್ಲ
– ಸತತವಾಗಿ 6ನೇ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ
NAMMUR EXPRESS NEWS
ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ 2024–25ನೇ ಹಣಕಾಸು ವರ್ಷದ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಅಲ್ಲಿ ಹೊಸ ಘೋಷಣೆ ಇರುವುದಿಲ್ಲ. ನಿರ್ಮಲಾ ಅವರು ಮಂಡಿಸುತ್ತಿರುವ ಆರನೇ ಬಜೆಟ್ ಇದಾಗಿದೆ. ಆ ಮೂಲಕ ಆರು ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಮಧ್ಯಂತರ ಬಜೆಟ್ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಪ್ರಕಟಿಸುವುದಿಲ್ಲ ಎಂದು ಈಗಾಗಲೇ ಅವರು ಹೇಳಿದ್ದಾರೆ. ಹಾಗಾಗಿ, ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಡಿ ತೆರಿಗೆದಾರರಿಗೆ ಯಾವುದೇ ವಿನಾಯಿತಿ ಪ್ರಕಟಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಪೂರ್ಣ ಬಜೆಟ್ ಮಂಡಿಸಲಿದೆ ಎಂದು ಆ ಮೂಲಗಳು ತಿಳಿಸಿವೆ.