- ರಾಜಧಾನಿಯಿಂದ ತೆರಳಿದ ಇಬ್ಬರ ಸಾವಿನ ಮಾಹಿತಿ
- ಚಿಕ್ಕಮಗಳೂರಿನ ಕಳಸದ 150 ಮಂದಿ ಸೇಫ್!
- ಜೂ.1ರಂದು ಜಾರ್ಕಂಡ್ ತೆರಳಿದ್ದ ಜನತೆ
NAMMUR EXPRESS NEWS
ಒಡಿಶಾ: ಕೋಲ್ಕತ್ತಾದಿಂದ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೋರ್ನ ಬಹನಾಗಾ ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದು ಮತ್ತೊಂದು ಡಿಕ್ಕಿಯಾದ ಪರಿಣಾಮ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಬೆಂಗಳೂರು ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾ ಹೊರಟಿದ್ದ ರೈಲು ಡಿಕ್ಕಿಯಾಗಿದೆ. ಘಟನೆಯಲ್ಲಿ ಬೆಂಗಳೂರಿಂದ ತೆರಳಿದ್ದ ಇಬ್ಬರು ಬೆಂಗಳೂರಿಗರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಳಾಸ ದೃಢವಾಗಿಲ್ಲ.
ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಳಸದವರು ಸೇಫ್!:ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಜಾರ್ಕಂಡ್ ಹೊರಟಿದ್ದ 150 ಮಂದಿ ಪ್ರವಾಸಿಗರು ಜೀವ ಅಪಾಯದಿಂದ ಪಾರಾಗಿದ್ದಾರೆ.
ಕಳಸದಿಂದ ಉತ್ತರದ ಜೈನ ದೇವಾಲಯಗಳಿಗೆ ತೆರಳಿದ್ದ 150 ಮಂದಿ ಕೊನೆ ಬೋಗಿಯಲ್ಲಿದ್ರೂ ಅಪಾಯದಿಂದ ಪಾರಾಗಿದ್ದಾರೆ.