ಗೋಬಿ ಮಂಚೂರಿಯನ್ ನಿಷೇಧ!
– ಇನ್ಮುಂದೆ ಮಾರಾಟ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್
– ಗೋವಾದಲ್ಲಿ ಗೋಬಿ ನಿಷೇಧಿಸಲು ಕಾರಣ ಏನು?
NAMMUR EXPRESS NEWS
ನವದೆಹಲಿ: ಗೋಬಿ ಮಂಚೂರಿಯನ್ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಆಹಾರ ಪದಾರ್ಥವಾಗಿದೆ. ಹೂಕೋಸು ನಿಂದ ಮಾಡುವ ಈ ಆಹಾರವನ್ನು ಗೋಬಿ ಮಂಚೂರಿಯನ್ ಎಂದು ಕರೆಯಲಾಗುತ್ತದೆ. ಭಾರತೀಯ ಅಭಿರುಚಿಗೆ ತಕ್ಕಂತೆ ಚೀನೀ ಅಡಿಗೆ ಇದೆ. ಹೀಗಾಗಿ ಇದು ಸಖತ್ ಫೆಮಸ್ ಕೂಡಾ ಆಗಿದೆ.
ಆದರೆ ಇನ್ಮುಂದೆ ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಯಾಕೆ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಭಾರತದ ಯಾವುದೇ ನಗರ, ಪಟ್ಟಣಕ್ಕೆ ತೆರಳಿದರೂ ಗೋಬಿ ಮಂಚೂರಿಯನ್ ಬಾರಿ ಬೇಡಿಕೆ ಇದೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.
ಗೋಬಿ ನಿಷೇಧಿಸಲು ಕಾರಣ:
ನಗರದ ಆಡಳಿತ ವಿಭಾಗವೇ ಈ ಆದೇಶ ಹೊರಡಿಸಿದೆ. ಗೋವಾದ ಮಪುಸಾ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ನಗರ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್ ಸೆಂಟರ್, ಸ್ಟಾಲ್ಗಳಿಗೆ ನೋಟಿಸ್ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ. ಗೋಬಿಗೆ ಬಳಸುತ್ತಿರುವ ರಾಸಾಯನಿಕ, ಬಣ್ಣ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ದಾಖಲಾಗಿತ್ತು.
ಈ ಕುರಿತು ಆಹಾರ ಇಲಾಖೆ ದಾಳಿಗಳನ್ನು ನಡೆಸಿ ನೋಟಿಸ್ ನೀಡಿತ್ತು. ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಸಭೆ ನಡೆಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್ ರದ್ದು: ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿ ಗೋಬಿ ಮಂಚೂರಿಯನ್ ಮಾರಾಟ ಮಾಡಿದರೆ, ದುಬಾರಿ ದಂಡದ ಜೊತೆಗೆ ವ್ಯಾಪಾರದ ಲೈಸೆನ್ಸ್ ಕೂಡ ರದ್ದಾಗಲಿದೆ. ಇತ್ತ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿಗಳನ್ನು ನಡೆಸುತ್ತಿದ್ದಾರೆ.