ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್…!
– ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆ..!
NAMMUR EXPRESS NEWS
ನವದೆಹಲಿ: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಜಗತ್ತಿನಾದ್ಯಂತ ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳಿಗೆ ಅವಶ್ಯಕವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನ. ಈ ಎರಡು ಇಂಧನಗಳಿಲ್ಲದಿದ್ದರೆ ಜಗತ್ತು ನಿಂತೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇಂದಿಗೂ ನಾವು ಆ ಇಂಧನಗಳ ಮೇಲೆ ಅವಲಂಬಿತರಾಗಿದ್ದೇವೆ.
ಮೂಲತಃ ತೈಲ ನಿಕ್ಷೇಪಗಳಿಂದ ದೊರೆಯುವ ಕಚ್ಚಾತೈಲದಿಂದ ಉತ್ಪಾದಿಸಲಾಗುವ ಪೆಟ್ರೋಲ್ ಅಥವಾ ಡೀಸೆಲ್ ನವೀಕರಿಸಲಾಗದ ಶಕ್ತಿಯ ರೂಪಗಳಾಗಿದ್ದು ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಇಂಧನ ಶಕ್ತಿಗಳಾಗಿವೆ. ಅಲ್ಲದೆ, ಕಚ್ಚಾತೈಲ ತನ್ನದ ಆದ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಅದರ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತವೆ.
ಇನ್ನು, ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ವಾಹನ ಸವಾರರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನಬಹುದು.