ರಾಮ ಸೀತೆ ವಿಶೇಷ ಅವತಾರ!
– ಬಾಲಕಿ ಕೆನ್ನೆ ಮೇಲೆ ರಾಮನ ಚಿತ್ರ,!
– ಅಕ್ಕಿಯಲ್ಲಿ ಅರಳಿದ ಸೀತಾ ರಾಮ..!
– ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ
– ಅಯೋಧ್ಯೆ ಮಂದಿರ ಮಾದರಿಯಲ್ಲೆ ಸೆಟ್ ನಿರ್ಮಾಣ
– ಸಿಲಿಕಾನ್ ಸಿಟಿಯಲ್ಲಿ ಮೂಡಿದ ಅಯೋಧ್ಯೆ
– ಗದಗದ ಮಸೀದಿಯಲ್ಲಿ ಪೂಜೆ, ಹೋಮ
NAMMUR EXPRESS NEWS
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈಗಾಗಲೇ ರಾಮ ನಾಮ ಸ್ಮರಣೆಯು ಎಲ್ಲೆಡೆ ಮೊಳಗಿದ್ದು, ದೇಶದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಂದು ಊರುಗಳಲ್ಲೂ ಭಕ್ತರು ರಾಮನನ್ನು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಅದಲ್ಲೂ ಕಲಾವಿದರಂತೂ ತಮ್ಮ ಕಲೆಯ ಮೂಲಕವೇ ರಾಮನಿಗೊಂದು ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಹೌದು ಅದೆಷ್ಟೋ ಕಲಾವಿದರು ತಮ್ಮ ಕೈಯಾರೆ ರಾಮ ಮಂದಿರದ ಮೂರ್ತಿ ಹಾಗೂ ಶ್ರೀರಾಮ ಮೂರ್ತಿಯನ್ನು ತಯಾರಿಸಿ ಸುದ್ದಿಯಲ್ಲಿದ್ದಾರೆ.
ಬಾಲಕಿ ಕೆನ್ನೆ ಮೇಲೆ ಮೂಡಿಬಂದ ಶ್ರೀರಾಮಚಂದ್ರ !
ಕಲಾವಿದನೋರ್ವ ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಯಲ್ಲಪ್ಪ ವೈ.ಕುಂಬಾರ ಕಲೆಗೆ ಜನರು ಫಿದಾ ಆಗಿದ್ದಾರೆ.ಶ್ರೀರಾಮನ ಆಗಮನವನ್ನು ನಮ್ಮಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ. ಕಲಾವಿದರೊಬ್ಬರು ಅಕ್ಕಿಯನ್ನು ಬಳಸಿ ಸೀತಾ ರಾಮರ ಸುಂದರ ಮೂರ್ತಿಯನ್ನು ತಯಾರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ!
ರಾಮ ಮಂದಿರ ಪ್ರಾಣ ಪ್ರತಿಷ್ಠಪನೆ ಕಾರ್ಯ ನಡೆಯುತ್ತಿದ್ದು, ಭಕ್ತರು ವಿವಿಧ ರೀತಿಯಲ್ಲಿ ರಾಮ ಮಂದಿರ, ರಾಮನನ್ನು ರಚಿಸುತ್ತಿದ್ದಾರೆ. ದಾವಣಗೆರೆಯಲ್ಲಿ ನಾಣ್ಯದಲ್ಲಿಯೇ ಮಂದಿರ ರಚಿಸಿದ್ದು, ಪ್ರಧಾನಿ ಮೋದಿ ಅವರಿಗೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹರಿಹರ ನಗರದ ಆಕಾರ-ಆಧಾರ ಸಂಸ್ಥೆಯ ರಾಮು ಎಂ ಹಾಗೂ ಮಕ್ಕಳು ಒಂದು, ಎರಡು, ಐದು, 10, 20 ರೂ. ಮೌಲ್ಯದ ಒಟ್ಟು 12 ಸಾವಿರ ನಾಣ್ಯ ಬಳಸಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. 31,500 ರೂ. ವೆಚ್ಚದಲ್ಲಿ 30 ದಿನಗಳಲ್ಲಿ ಈ ಮಂದಿರ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.
ಅಯೋಧ್ಯೆ ಮಂದಿರ ಮಾದರಿಯಲ್ಲೆ ಸೆಟ್ ನಿರ್ಮಾಣ!
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಯೋಧ್ಯೆ ರಾಮಮಂದಿರ ಸೆಟ್ ಹಾಕಲಾಗಿದೆ. ಬಿಜೆಪಿ ಯುವಘಟಕ ರಾಜ್ಯಾಧ್ಯಕ್ಷ ಹಾಗೂ ಸ್ಥಳಿಯ ಶಾಸಕ ದೀರಜ್ ಮುನಿರಾಜು ಅವರು ರಾಮಮಂದಿರ ಸೆಟ್ ಅನ್ನು ನಿರ್ಮಾಣ ಮಾಡಿಸಿದ್ದಾರೆ. ಈ ಸೆಟ್ ಜನರ ಕಣ್ಮನ ಸೆಳೆಯುತ್ತಿದೆ. ರಾಮಮಂದಿರ ಸೆಟ್ ಮುಂದೆ ನಿಂತು ಸಾರ್ವಜನಿಕರು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಪೋಷಕರು ಮಕ್ಕಳಿಗೆ ರಾಮ, ಸೀತೆ ಮತ್ತು ಆಂಜನೇಯನ ವೇಷ ಹಾಕಿಸಿ ಸೆಟ್ ಮುಂದೆ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ ವೀಕ್ಷಿಸಲು ಬೃಹತ್ ಎಲ್ಇಡಿ ವಾಲ್ ಅಳವಡಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ!
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಮಾದರಿಯಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಗಿರಿನಗರದ ವಾಸವಿ ಕನ್ನಿಕಾ ಪರಮೇಶ್ವರ ದೇವಾಲಯದಲ್ಲಿ ಅಯೋಧ್ಯೆ ಮಾದರಿ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ 18 ಅಡಿ ಎತ್ತರದ ಅಯೋಧ್ಯೆ ರಾಮಮಂದಿರವನ್ನು ರಾಮಭಕ್ತರು ನಿರ್ಮಾಣ ಮಾಡಿದ್ದಾರೆ.
ಗದಗದ ಮಸೀದಿಯಲ್ಲಿ ಪೂಜೆ, ಹೋಮ!
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಹೋಮ-ಹವನ ಮಾಡುವ ಮೂಲಕ ಭಾವೈಕ್ಯತೆ ಮೆರೆಯಲಾಗಿದೆ. ಗ್ರಾಮದ ಹಿಂದೂ ಮುಸ್ಲಿಂ ಮುಖಂಡರು ಸೇರಿ ಕಾರ್ಯಕ್ರಮ ಪೂರ್ಣಗೊಳಿಸಿದ್ದಾರೆ. ಭಾರತ ಮಾತೆ ಚಿತ್ರದ ಜೊತೆಗೆ ಕಳಸವಿಟ್ಟು ರುದ್ರಾಭಿಷೇಕ, ಪೂಜೆ ನೆರವೇರಿಸಲಾಯಿತು.