ಕ್ರಾಂತಿಕಾರಿ ಕವಿ ‘ಗದ್ದರ್’ ಇನ್ನಿಲ್ಲ!
– ‘ನಕ್ಸಲಿಸಂ ಚಳವಳಿ’ಯಲ್ಲಿ ಭಾಗಿಯಾಗಿದ್ದ ಹೋರಾಟಗಾರ
– ರಾಜಕೀಯ ಪಾರ್ಟಿ ಕಟ್ಟಲು ಸಿದ್ಧತೆಯಲ್ಲಿರುವಾಗಲೇ ವಿಧಿವಶ
NAMMUR EXPRESS NEWS
ದೇಶದ ಇತಿಹಾಸದಲ್ಲಿ ಜಾನಪದ ಕಲೆ ಮೂಲಕ ಹೋರಾಟಗಾರನಾಗಿ ಹಲವು ಕ್ರಾಂತಿಗೆ ಕಾರಣವಾಗಿದ್ದ ತೆಲಂಗಾಣದ ‘ಗದ್ದರ್’ ಎಂದೇ ಹೆಸರುವಾಸಿಯಾದ ಖ್ಯಾತ ಜಾನಪದ ಕಲಾವಿದ ಗುಮ್ಮಡಿ ವಿಠಲ್ ರಾವ್ (77) ಇಹಲೋಕ ತ್ಯಜಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಭಾನುವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.1949ರಲ್ಲಿ ತೆಲಂಗಾಣದ ತುಪಾನ್ನಲ್ಲಿ ಜನಿಸಿದ ಗದ್ದರ್ ಅವರು ತಮ್ಮ ಕ್ರಾಂತಿಕಾರಿ ಕವಿತೆ ಮತ್ತು ಗಾಯನದ ಮೂಲಕ ಖ್ಯಾತಿ ಪಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದೇಶದ ಗಟ್ಟಿ ದನಿ ನಿಂತು ಹೋಗಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖ ಪಾತ್ರ!
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ ‘ತೆಲಂಗಾಣ ಚಳವಳಿಗೆ’ ಹೊಸ ಹುರುಪನ್ನೇ ನೀಡಿದ್ದರು. 2010ರವೆರೆಗೂ ‘ನಕ್ಸಲಿಸಂ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಗದ್ದರ್, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದ ಬೆಂಬಲಿಸಿದ್ದರು. ಭಾರತ್ ಜೋಡೊ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಿದ್ದರು.
ಚುನಾವಣೆ ಸ್ಪರ್ಧೆ ಕನಸು ನನಸು ಆಗಲಿಲ್ಲ!
ಅನಾರೋಗ್ಯಕ್ಕೂ ಮೊದಲು ಚುನಾವಣಾ ಅಖಾಡಕ್ಕೆ ಇಳಿಯುವ ಕನಸನ್ನು ಕಂಡಿದ್ದ ಗದ್ದರ್ ಅವರು ‘ಗದ್ದರ್ ಪ್ರಜಾ ಪಾರ್ಟಿ’ ಎಂಬ ಹೊಸ ಪಕ್ಷ ಸ್ಥಾಪನೆಗೂ ಹೊರಟಿದ್ದರು. ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಅವರುಹೇಳಿಕೊಂಡಿದ್ದರು. ಆದರೆ ಅವರ ರಾಜಕೀಯ ಕನಸು ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023