10 ಲಕ್ಷ ಸಾಲಕ್ಕೆ 3 ಲಕ್ಷ ರೂ ಸಬ್ಸಿಡಿ..!
– ಅತ್ಯಂತ ಕಡಿಮೆ ಬಡ್ಡಿಗೆ ಪಿಎಂ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ!
NAMMUR EXPRESS NEWS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅದರಲ್ಲೂ ಸಣ್ಣ ವ್ಯವಹಾರ ನಡೆಸುವವರಿಗಾಗಿಯೇ ಮೋದಿ ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಪ್ರಕಟಿಸಿದೆ. ಯೋಜನೆಯ ಅಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಾಲ ದೊರೆಯುವುದು ಮಾತ್ರವಲ್ಲ, 10 ಲಕ್ಷದ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜಯನ್ನು ಸ್ವತಃ ವ್ಯವಹಾರ ಮಾಡುವವರಿಗಾಗಿಯೇ ಜಾರಿಗೆ ತರಲಾಗಿದೆ.
ಪ್ರಮುಖವಾಗಿ ಸೂಕ್ಷ್ಮ, ಸಣ್ಣ ವ್ಯವಹಾರಗಳಿಗಾಗಿ ಈ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಮುದ್ರಾ ಯೋಜನೆಯಡಿ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ದೊರೆಯುತ್ತದೆ. ಸರಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಈ ಯೋಜನೆಗೆ ಸಾಲವನ್ನು ಪಡೆಯಬಹುದಾಗಿದೆ. ಶಿಶು, ಕಿಶೋರ್, ತರುಣ್ ಸೇರಿದಂತೆ ಒಟ್ಟು ಮೂರು ಯೋಜನೆಗಳ ಮೂಲಕ ಸಾಲ ಪಡೆಯಬಹುದಾಗಿದೆ.
ಶಿಶು ಮುದ್ರಾ ಯೋಜನೆಯಡಿ 50000 ಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 8, 2015 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಲು ವಾಣಿಜ್ಯ ಬ್ಯಾಂಕುಗಳು, ಆರ್ಆರ್ಬಿ, ಸಣ್ಣ ಹಣಕಾಸು ಬ್ಯಾಂಕುಗಳು, ಎಂಎಫ್ ಐ ಗಳು ಮತ್ತು ಎನ್ ಬಿಎಫ್ ಸಿ ಗಳ ಮೂಲಕ ಪಡೆಯಬಹುದಾಗಿದೆ.
ನೇರವಾಗಿ ಬ್ಯಾಂಕುಗಳನ್ನು ಸಂಪರ್ಕಿಸಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಾಲ ಪಡೆಯುವವರು ನೇರವಾಗಿ ಆನ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಲು ಅವಕಾಶ Ad. www.udyamimitra.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಮುದ್ರಾ ಯೋಜನೆಯ ಮೂಲಕ 2015-2016ನೇ ಸಾಲಿನಲ್ಲಿ 3,48,80,924 ಮಂದಿಗೆ ಸಾಲವನ್ನು ವಿತರಣೆ ಮಾಡಲಾಗಿದೆ. ಒಟ್ಟು 137449.27 ಕೋಟಿ ರೂಪಾಯಿ ಸಾಲ ಮಂಜೂರಾತಿಯಾಗಿದ್ದು, ಈ ಪೈಕಿ 132954.73 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ.