ಹೊಸ ಸರ್ಕಾರದ ಮೊದಲ ಕೇಂದ್ರ ಬಜೆಟ್!
– ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್
– ಕ್ಯಾನ್ಸರ್ ಔಷಧಿಗೆ ಶುಲ್ಕ ವಿನಾಯಿತಿ
– – ಯಾವ ವಸ್ತು ದುಬಾರಿ, ಯಾವುದು ಅಗ್ಗ?
NAMMUR EXPRESS NEWS
ನವದೆಹಲಿ : ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್ ಡಿಎ ಸರ್ಕಾರದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಆ ಮೂಲಕ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್.
ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉಚಿತ ಸೌರ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಅನುವು ಮಾಡಿಕೊಡಲು ಮೇಲ್ಪಾವಣಿ ಸೌರ ಫಲಕಗಳನ್ನು ಸ್ಥಾಪಿಸಲು ಪಿಎಂ ಸೂರ್ಯಘರ್ ಮುಫ್ಟ್ ಬಿಜ್ಜಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಅದನ್ನು ಮತ್ತಷ್ಟು ಉತ್ತೇಜಿಸುತ್ತದೆ ಅಂತ ಅವರು ಇದೇ ವೇಳೆ ತಿಳಿಸಿದರು.ವೀಕ್ಷಿತ್ ಭಾರತ್ 2047 ವಿಷನ್ಗೆ ಅನುಗುಣವಾಗಿ ಆರ್ಥಿಕತೆಯ ವಿವಿಧ ವಿಭಾಗಗಳಲ್ಲಿನ ಉಪಕ್ರಮಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಸ್ಟ್ಯಾಂಡರ್ಡ್ ಡಿಡಕ್ಷನ್
ಸಂಬಳ ಪಡೆಯುವ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 75 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಕ್ಯಾನ್ಸರ್ ಔಷಧಿಗೆ ಶುಲ್ಕ ವಿನಾಯಿತಿ
ಆಮದು ಸುಂಕ ಎಂದರೆ ಆಮದು ಸುಂಕವು ಒಂದು ದೇಶದ ಕಸ್ಟಮ್ಸ್ ಅಧಿಕಾರಿಗಳು ಆಮದು ಮಾಡಿಕೊಳ್ಳುವ ಉತ್ಪನ್ನಗಳು ಅಥವಾ ಸೇವೆಗಳ ಮೇಲೆ ವಿಧಿಸುವ ಶುಲ್ಕವಾಗಿದೆ. 3 ಕ್ಯಾನ್ಸರ್ ಔಷಧಗಳಿಗೆ ಆಮದು ಸುಂಕಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.
ಯಾವುದು ಅಗ್ಗ:
ಕ್ಯಾನ್ಸರ್ ಔಷಧ
ಪೆಟ್ರೋಲ್ ದರ 2 ರೂ. ಇಳಿಕೆ
ಮೊಬೈಲ್ ಫೋನ್
ಆಮದು ಚಿನ್ನ
ಆಮದು ಬೆಳ್ಳಿ
ಚರ್ಮದ ವಸ್ತು
ಸೀ ಫುಡ್
ವಿದ್ಯುತ್ ತಂತಿ
ಎಕ್ಸರೇ ಮೆಷಿನ್
ಸೋಲಾರ್ ಪ್ಯಾನಲ್
ಯಾವುದು ದುಬಾರಿ:
ವಿದ್ಯುತ್ ಉಪಕರಣ
ಪ್ಲಾಸ್ಟಿಕ್
ಬಟ್ಟೆ
ಮೊಬೈಲ್ ಟವರ್