ಟೊಮೆಟೊ ಆಯ್ತು, ಈರುಳ್ಳಿ ದುಬಾರಿ!?
– ಆಲೂ, ಬೆಳೆ, ಅಕ್ಕಿ ಎಲ್ಲವೂ ಹೆಚ್ಚಾಯ್ತು
– ದೇಶದಲ್ಲಿ ಈಗ ಜನರಿಗೆ ಬೆಲೆ ಏರಿಕೆ ಬರೆ
– ಈರುಳ್ಳಿ ಕೆಜಿಗೆ 70 ರೂ. ಆಗುವ ಸಾಧ್ಯತೆ
NAMMUR EXPRESS NEWS
ಹೊಸದಿಲ್ಲಿ: ದೇಶದಲ್ಲಿ ಟೊಮೆಟೊ ಮಾತ್ರವಲ್ಲ, ಆಲೂಗಡ್ಡೆ ಹೊರತಾಗಿ ಅಡುಗೆ ಮನೆಯ ಬಹುತೇಕ ಆಹಾರ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಜನರ ಊಟವೂ ದುಬಾರಿ ಆಗಿದೆ.
ಯಾವುದು ಹೆಚ್ಚಳ?: ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿ ಬೇಳೆ ದರ ಶೇ.28ರಷ್ಟು ಹೆಚ್ಚಾಗಿದ್ದರೆ, ಅಕ್ಕಿ ದರ ಶೇ. 10.5ರಷ್ಟು ಏರಿಕೆ ಕಂಡಿದೆ. ಉದ್ದಿನ ಬೇಳೆ ಮತ್ತು ಗೋಧಿ ಹಿಟ್ಟಿನ ದರ ತಲಾ ಶೇ. 8ರಷ್ಟು ಹೆಚ್ಚಳವಾಗಿದೆ. ಬೆಲೆ ಏರಿಕೆ ಕುರಿತಾಗಿ ಸಂಸತ್ತಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯವು ಈ ವಿವರ ನೀಡಿದೆ. ವರ್ಷದ ಹಿಂದೆ ಅಕ್ಕಿ ಚಿಲ್ಲರೆ ದರ ಸರಾಸರಿ 37 ರೂಪಾಯಿ ಇತ್ತು. ಈಗ ಇದೇ ಅಕ್ಕಿ ದರ 41 ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ತೊಗರಿ ಬೇಳೆ ದರ ಕೆ.ಜಿಗೆ 106.5 ರೂ. ಇದ್ದರೆ, ಈಗ 136 ರೂ.ಗೆ ಏರಿಕೆ ಕಂಡಿದೆ. ಉದ್ದಿನ ಬೇಳೆ ದರ ಕಳೆದ ವರ್ಷ 106.5 ರೂ. ಇತ್ತು. ಅದೀಗ 114 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚಾಗಿದೆ.
ಮಳೆಯ ಅತಿವೃಷ್ಟಿ – ಅನಾವೃಷ್ಟಿಗಳು ದೇಶೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ತೊಗರಿ ಇಳುವರಿ ಕಡಿಮೆಯಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈರುಳ್ಳಿ ಕಣ್ಣೀರು ತರಿಸುತ್ತೆ!
ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳು ಸರಬರಾಜು ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದ ಪ್ರತಿ ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ಆಗಸ್ಟ್ 4 ರಂದು ವರದಿಯೊಂದು ತಿಳಿಸಿದೆ. ಆದರೂ, ಬೆಲೆಗಳು 2020 ರಲ್ಲಿ ಏರಿಕೆಯಾಗಿದ್ದಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ. “ಸರಬರಾಜು ಮತ್ತು ಬೇಡಿಕೆ ಅಸಮತೋಲನದಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಅಂದಾಜಿನ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಿಂದ ಬೆಲೆಗಳು ಗಮನಾರ್ಹ ಏರಿಕೆಯನ್ನು ತೋರಿಸುತ್ತಿವೆ. ಕಡಿಮೆ ಎಂದರೆ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗೆ ತಲುಪುತ್ತದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023