ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಪ್ಲಾನ್?
– ಒಟ್ಟಿಗೆ ಚುನಾವಣೆ: ಯೋಜನೆ ಜಾರಿಗೆ ಸಿದ್ಧತೆ
– ಮೋದಿ ಸರ್ಕಾರ 100 ದಿನ ಪೂರೈಸಿದ ಸಂಭ್ರಮ
NAMMUR EXPRESS NEWS
ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಜಾರಿಗೆ ತರಲಿದೆ. ಈ ಸುಧಾರಣೆಗೆ ಎಲ್ಲ ಪಕ್ಷಗಳ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ-3ನೇ ಅವಧಿಯ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದೆ. ಆಡಳಿತಾರೂಢ ಮೈತ್ರಿಕೂಟದ ಒಗ್ಗಟ್ಟು ಇನ್ನು ಉಳಿದ ಅಧಿಕಾರಾವಧಿಯವರೆಗೆ ಮೋದಿ ಮುಂದುವರಿಯುತ್ತಾರೆ.ಈ ಅಧಿಕಾರಾವಧಿಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ನಿಂತು ಮಾತನಾಡಿದ ಪ್ರಧಾನಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಪ್ರತಿಪಾದಿಸಿದರು. ಹಲವಾರು ಚುನಾವಣೆಗಳು ನಡೆಯುತ್ತಿದ್ದರೆ ದೇಶದ ಪ್ರಗತಿಯಲ್ಲಿ ಉಂಟಾಗುತ್ತವೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ಗಾಗಿ ರಾಷ್ಟ್ರವು ಮುಂದೆ ಬರಬೇಕಿದೆ ಎಂದು ೇಳಿದ್ದರು.
ರಾಷ್ಟ್ರೀಯ ಸಪನ್ೂಲಗಳು ಜನಸಾಮಾನ್ಯರಿಗೆ ಬಳಕೆಯಾಗುವಂತೆ ಪಕ್ಷಗಳನ್ನು ಕೋರಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕನಸನ್ನು ನನಸಾಗಿಸಲು ನಾವು ಮುಂದಾಗಬೇಕು ಎಂದಿದ್ದರು. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬುದು ಬಿಜೆಪಿ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆ ಆಗಿದೆ. ಹೀಗಾಗಿ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ.