- ನೀವೂ ಕಳುಹಿಸಿ..ನಿಮ್ಮವರಿಗೂ ತಿಳಿಸಿ..!
- ನಿಮ್ಮ ಸಮಸ್ಯೆಗೆ ನಮ್ಮೂರ್ ಎಕ್ಸ್ಪ್ರೆಸ್ ದನಿ
- ಸುದ್ದಿಯ ಜತೆಗಾರನಾಗಿ ನಿಮ್ಮ ಜೊತೆ ನಾವಿದ್ದೇವೆ…
ನಮ್ಮೂರ್ ಎಕ್ಸ್ಪ್ರೆಸ್. ಕಳೆದ 3 ವರ್ಷದಿಂದ ಕರ್ನಾಟಕ ಗ್ರಾಮೀಣ ಮಾಧ್ಯಮ ಕ್ಷೇತ್ರದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆ. 25,000ಕ್ಕೂ ಅಧಿಕ ಸುದ್ದಿಗಳನ್ನು ಈವರೆಗೆ ಪ್ರಕಟ ಮಾಡಿದೆ. ಸಾವಿರಾರು ಸುದ್ದಿಗಳ ಮೂಲಕ ಜನರ ಸಮಸ್ಯೆಗೆ ದನಿಯಾಗಿದೆ. ನೂರಾರು ಸಾಧಕರು, ಪ್ರತಿಭೆಗಳ ಜತೆ ಜತೆಗೆ ಕೈಹಿಡಿದು ನಡೆದುಕೊಂಡು ಬಂದಿದೆ.
ಆರ್ಥಿಕ ಸಮಸ್ಯೆ, ಕರೋನಾ ಎಫೆಕ್ಟ್ ನಡುವೆಯೂ ಒಂದು ದಿನವೂ ಎದೆಗುಂದದೆ ಸಂಸ್ಥೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತನ್ನ ಕೆಲಸ ಮಾಡಿದೆ. ಈಗ ಮುಂದಿನ ದಿನಗಳಲ್ಲಿ ನಿಮ್ಮ ದನಿಯಾಗಿ ಕೆಲಸ ಮಾಡಲು ಪ್ರತಿ ಜಿಲ್ಲೆಗೆ ಬಂದಿದ್ದೇವೆ.
ಸುದ್ದಿ ಅಂದರೆ ಬರೀ ರಾಜಕೀಯ ಅಲ್ಲ. ಜನರ ದನಿಯಾಗಬೇಕು ಎಂಬ ಹಂಬಲದೊಂದಿಗೆ ಪತ್ರಿಕೋದ್ಯಮ, ನವೋದ್ಯಮ ಹಾಗೂ ಇತರೆ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ಯುವ ಸಮುದಾಯ ಕಟ್ಟಿದ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್.
ನಿಮ್ಮೂರ್ ಎಂಬ ಕಾಲಂನಲ್ಲಿ ನೀವೂ ನಿಮ್ಮ ಊರಿನ ಸಮಸ್ಯೆ, ಅಭಿವೃದ್ಧಿ, ಸಲಹೆ, ಮಾಹಿತಿ, ಸಾಧನೆಯನ್ನು ನಮಗೆ ಕಳುಹಿಸಬಹುದು. ಅದನ್ನು ನಾವು ಪ್ರಕಟಿಸುತ್ತೇವೆ. ನಿಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಲೇಖನಗಳಿಗೂ ಆಹ್ವಾನವಿದೆ.
ಜನವರಿಗೆ ಸಂಸ್ಥೆ 4ನೇ ವರ್ಷಕ್ಕೆ ಕಾಲಿಡಲಿದ್ದು, ಹೊಸ ಹೊಸ ಮಾಧ್ಯಮ ಅನ್ವೇಷಣೆ ಮೂಲಕ ನಿಮ್ಮ ಮನೆ ಮನೆ ತಲುಪಲಿದೆ. ಒಂದು ವೇಳೆ ನೀವು ಲಾಗಿನ್ ಆಗದಿದ್ದಲ್ಲಿ ನಿಮ್ಮ ಊರಿನ ಎಲ್ಲಾ ಸುದ್ದಿಗೆ ನಮ್ಮೂರ್ ಎಕ್ಸ್ಪ್ರೆಸ್.ಕಾಂ ವೀಕ್ಷಿಸಿ.