- ನಿಮ್ಮ ಮತ್ತು ನಿಮ್ಮೂರ್ ಜತೆ ನಮ್ಮೂರ್ ಎಕ್ಸ್ಪ್ರೆಸ್
ಪ್ರತಿಯೊಬ್ಬರಿಗೂ ಅವರು ಹುಟ್ಟಿ ಬೆಳೆದು ಆಡಿ ಕಲಿತ ಊರು ಅಂದ್ರೆ ಇಷ್ಟ!. ಜೊತೆಗೆ ಅಲ್ಲಿನ ಸಂಬಂಧ ಬಿಡಿಸಲಾರದ್ದು. ಅಲ್ಲಿನ ಬಂಧ ಜನ್ಮ ಜನ್ಮದ ಅನುಬಂಧದಂತೆ. ಹೀಗಿರುವಾಗ ನಮ್ಮ ಊರು ನಮಗೆ ಯಾವಾಗಲೂ ಹೆಮ್ಮೆ.
ಹೀಗಾಗಿ ನಿಮ್ಮೂರ್ ವಿಭಾಗದಲ್ಲಿ ನಿಮ್ಮ ಊರಿನ ಹಿರಿಮೆ, ಗರಿಮೆ, ಇತಿಹಾಸ, ಮಹತ್ವದ ಅಂಶ, ಸಾಧಕರ ಪುಟಗಳು, ಪ್ರತಿಭೆಗಳಿಗೆ ವೇದಿಕೆ, ಕಷ್ಟದಲ್ಲಿರುವವರಿಗೆ ನೆರವು, ಉದ್ಯೋಗಕ್ಕೆ ಸಹಾಯ, ಬದುಕಿಗೆ ಊರುಗೋಲು ಕೊಡುವ ಸಣ್ಣ ಪ್ರಯತ್ನ ಇದು. ಹೀಗಾಗಿ ಈ ಕಾಲಂ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆಯ ಕನಸಿನ ಕೂಸು.
ಗ್ರಾಮೀಣ ಭಾಗವೇ ದೇಶದ ಆಸ್ತಿ. ಇದು ರಾಜಕಾರಣಿಗಳ ಬರೀ ಭಾಷಣಕ್ಕೆ ಸೀಮಿತವಾಗಿದೆ. ನಾವೆಲ್ಲಾ ಸೇರಿ ನಮ್ಮೂರ್ ಅಭಿವೃದ್ಧಿಗೆ ಕೈಜೋಡಿಸೋಣ. ಇದು ನಮ್ಮೂರ್ ಎಕ್ಸ್ಪ್ರೆಸ್ ನಿಮ್ಮೂರ್ ಅಭಿಯಾನ!.
ನಿಮ್ಮ ಊರಿನ ಬಗ್ಗೆ ಪ್ರತಿಯೊಬ್ಬರು ಬರೆಯಬಹುದು, ದುಡಿಯಬಹುದು, ಗಳಿಸಬಹುದು, ಹೇಗೆ..? ಶೀಘ್ರದಲ್ಲಿ ನಿರೀಕ್ಷಿಸಿ..!