- ಏನಿದು ಹೊಸ ನಿಯಮ..? ಆದೇಶ ಏನು..?
- ಗೊಂದಲದ ಗೂಡು: ಪರಿಷ್ಕರಣೆ ಆಗುತ್ತಾ..?
NAMMUR EXPRESS NEWS
ಬೆಂಗಳೂರು: 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲುಹೊಸದಾಗಿ ವಯೋಮಿತಿ ನಿಗದಿ ಮಾಡಿರುವ ಸರ್ಕಾರದ
ಆದೇಶ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಸೇರ್ಪಡೆ ಆಗಬೇಕಾದರೆ ಕಡ್ಡಾಯವಾಗಿ ವಿದ್ಯಾರ್ಥಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ಹೊರಡಿಸಿತ್ತು. ಒಂದನೇ ತರಗತಿಗೆ ದಾಖಲಾತಿ ಆಗಬೇಕದರೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂದು ಆದೇಶದಲ್ಲಿ ಉಲ್ಲೇಖ ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ.
ಆದೇಶದಲ್ಲಿ ಆರ್ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ನ್ನು ಉಲ್ಲೇಖ ಮಾಡಲಾಗಿದೆ. ಈ ಆದೇಶದಲ್ಲಿ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಶಿಕ್ಷಣ ಇಲಾಖೆ ಸರಿಯಾಗಿ ಉತ್ತರ ನೀಡಿಲ್ಲ.
ಗೊಂದಲ ಏನು? 2022-23ನೇ ಸಾಲಿಗೆ ಈಗಾಗಲೇ ದಾಖಲಾತಿ ಪಕ್ರಿಯೆ ಮುಗಿದಿದ್ದು ಈ ವರ್ಷ ಹಿಂದಿನ ಆದೇಶದಂತೆ 5 ವರ್ಷ 10 ತಿಂಗಳ ವಯೋಮಿತಿಯಲ್ಲಿ ದಾಖಲು ಮಾಡಲಾಗಿದೆ.
ನಮ್ಮಲ್ಲಿ ಪೂರ್ವ ಪ್ರಾಥಮಿಕ ವ್ಯವಸ್ಥೆ ಎಲ್ಕೆಜಿ, ಯುಕೆಜಿ ಜಾರಿಯಲ್ಲಿದೆ. ಈ ವರ್ಷ 3 ವರ್ಷ 10 ತಿಂಗಳಿಗೆ ಎಲ್ಕೆಜಿಗೆ ದಾಖಲಾದರೆ ಆ ಮಗು 1ನೇ ತರಗತಿಗೆ ಬರುವಷ್ಟರಲ್ಲಿ 5 ವರ್ಷ 10 ತಿಂಗಳು ಆಗಿರುತ್ತದೆ. ಆಗ ಆ ವಿದ್ಯಾರ್ಥಿಗೆ 6 ವರ್ಷದ ನಿಯಮ ಅನ್ವಯ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ನಿಯಮ ಅನ್ವಯಿಸಿದರೆ 2 ವರ್ಷ ವಯೋಮಿತಿ ನಿಯಮ ಸಡಿಲಿಕೆ ಬಗ್ಗೆ ಉಲ್ಲೇಖಿಸಿಲ್ಲ. ಹೊಸ ನಿಯಮ ಅನ್ವಯವಾದರೆ ಮಗು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕಾಗುತ್ತಾ? 6 ವರ್ಷ ತುಂಬಿರದ ವಿದ್ಯಾರ್ಥಿಗೆ 1ನೇ ತರಗತಿಗೆ ದಾಖಲಾತಿ ನೀಡಲ್ವಾ? ಒಂದೆರಡು ತಿಂಗಳು, 15 ದಿನ.. ಕಡಿಮೆ ಬಂದರೂ ದಾಖಲಾತಿ ಸಿಗಲ್ವಾ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.