- ವೈಯಕ್ತಿಕ ಕೆಲಸಕ್ಕಾಗಿ ತೆರಳಿದ್ದೆ ಎಂದ ಆರಗ ಜ್ಞಾನೇಂದ್ರ
NAMMUR EXPRESS NEWS
ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ದೆಹಲಿ ಭೇಟಿ ಹಲವು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ, ಗೃಹಸಚಿವ ಆರಗ ಜ್ಞಾನೇಂದ್ರರವರುಕೂಡ ದೆಹಲಿಗೆ ತೆರಳಿದ್ದರು. ಇದು ನಾನಾ ಬಗೆಯ ಚರ್ಚೆಗೆ ಕಾರಣವಾಗಿತ್ತು. ಒಂದು ಕಡೆ ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ತಮ್ಮ ಖಾಸಗಿ ಕೆಲಸವೊಂದು ದೆಹಲಿ ಮಟ್ಟದಲ್ಲಿ ಆಗಬೇಕಿದ್ದರಿಂದ ಅದಕ್ಕಾಗಿ ಸಮಯ ಕೇಳಿದ್ದ ಗೃಹಸಚಿವರಿಗೆ ದೆಹಲಿ ನಾಯಕರು ಭೇಟಿಗೆ ಅವಕಾಶ ನೀಡಿದ್ದರಿಂದ ದಿಢೀರ್ ದೆಹಲಿಗೆ ತೆರಳಿದ್ದರು ಎಂದು ಹೇಳಲಾಗಿದೆ.
ಆರಗ ಹೇಳಿದ್ದೇನು?
” ನಾನು ದೆಹಲಿಗೆ ಹೋಗಿದ್ದು ಖಾಸಗಿ ಕೆಲಸಕ್ಕಾಗಿ, ಅಲ್ಲಿ ಸಿಎಂ ಬೊಮ್ಮಾಯಿ ಅಲ್ಲಿ ಅವರು ಇದ್ದರು ಅವರನ್ನ ಭೇಟಿಯಾಗಿದ್ದೇನೆ ಅಷ್ಟೆ. ಆದರೆ ಹೈಕಮಾಂಡ್ ನಾಯಕರನ್ನು, ಪ್ರಹ್ಲಾದ್ ಜೋಶಿ ಅವರ ಭೇಟಿ ಮಾಡಿಲ್ಲ. ನಾನು ದೆಹಲಿಗೆ ಹೋಗುವ ಹೊತ್ತಿಗೆ, ಪ್ರಹ್ಲಾದ್ ಜೋಶಿಯವರು ಈ ಕಡೆಗೆ ವಾಪಸ್ ಬರುತ್ತಿದ್ದರು. ಇದು ಖಾಸಗಿ ಭೇಟಿ ಅಷ್ಟೇ.
- ಆರಗ ಜ್ಞಾನೇಂದ್ರ
ಗೃಹ ಸಚಿವ