- ಒಕ್ಕಲಿಗರ ಕ್ಷಮೆ ಕೇಳುವಂತೆ ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಅಗ್ರಹ
NAMMUR EXPRESS NEWS
ತೀರ್ಥಹಳ್ಳಿ: ಶಾಸಕರಾದ ಜಮೀರ್ ಅಹಮದ್ ರವರು ಅನವಶ್ಯಕವಾಗಿ ಒಕ್ಕಲಿಗ ಜನಾಂಗದವರನ್ನು ರಾಜಕೀಯ ವಿಚಾರವಾಗಿ ಎಳೆದು ತರುತ್ತಿರುವುದು ವಿಷಾಧನೀಯ ಸಂಗತಿ, ನಮ್ಮ ಒಕ್ಕಲಿಗ ಸಮಾಜ ಹಿಂದಿನಿಂದಲೂ ಸಹ ಒಕ್ಕಲುತನವನ್ನು ಮಾಡಿ ಇಡೀ ದೇಶಕ್ಕೆ ಅನ್ನ ನೀಡುತ್ತಾ ದೇಶದಲ್ಲಿ ಕೃಷಿ ಪ್ರಧಾನ ಕಸುಬನ್ನಾಗಿ ಮಾಡಿಕೊಂಡು ದೇಶದ ಕೃಷಿ ಪ್ರಗತಿಗೆ ಅನನ್ಯ ನೆರವು ನೀಡಿದೆ. ಅಲ್ಲದೆ ಸಮಾಜದ ಹಲವು ಪ್ರಮುಖರು ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಆರ್ಥಿಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾತೃಗಳಾಗಿ ಇಂದಿಗೂ ಸಹ ಮಾದರಿ ನಗರವನ್ನಾಗಿ ಇಡೀ ಪ್ರಪಂಚದ ಭೂಪಟದಲ್ಲಿಯೇ ಬೆಂಗಳೂರು ನಗರ ಗುರುತಿಸುವಿಕೆಗೆ ಕಾರಣಕರ್ತರಾಗಿದ್ದಾರೆ. ಇಂತಹ ಒಕ್ಕಲಿಗ ಸಮುದಾಯದ ಬಗ್ಗೆ ಮಾನ್ಯ ಶಾಸಕರಾದ ಜಮೀರ್ ಆಹಮದ್ ರವರು ಕೇವಲವಾಗಿ ಮಾತನಾಡುವುದು ಅವರಿಗೆ ಶೋಭೆಯಲ್ಲ. ಇದನ್ನು ಸಮಾಜ ಖಂಡಿಸುತ್ತಾ ಮುಂದೆ ಸಮುದಾಯದ ವಿರುದ್ಧ ಇಂತಹ ಹೇಳಿಕೆ ನೀಡಿದ್ದು, ಸಮುದಾಯದ ವತಿಯಿಂದ ತಮ್ಮ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವೆಂದು ತೀರ್ಥಹಳ್ಳಿ ಒಕ್ಕಲಗರ ಸಂಘ ಹಾಗೂ ಸಮುದಾಯದ ವತಿಯಿಂದ ತಿಳಿಯಬಯಸುತ್ತೇವೆ. ಇದುವರೆಗೂ ಸಹ ನಮ್ಮ ಒಕ್ಕಲಿಗ ಸಮಾಜ ಜನಾಂಗ ಬೇಧವಿಲ್ಲದೇ, ಧರ್ಮ ಬೇಧವಿಲ್ಲದೆ ಸರ್ವರೊಂದಿಗೆ ಸಹಬಾಳ್ವೆ ನಡೆಸುತ್ತಿರುವುದನ್ನು ಅಮೀರ್ ಅಹಮದ್ರವರು ಗಮನಿಸದೇ ಇರುವುದು ಅವರ ತಪ್ಪುಕಲ್ಪನೆಯ ಪರಮಾವಧಿ ಎಂದು ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ ಭಾವಿಸುತ್ತದೆ ಹಾಗೂ ತಮ್ಮ ಹೇಳಿಕೆ ಬಗ್ಗೆ ಸಮಾಜದ ಕ್ಷಮೆ ಕೇಳಬೇಕೆಂದು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸುತ್ತಿದೆ.