- ಜಲಧಾರೆ ಮೂಲಕ ರಾಜ್ಯದಲ್ಲಿ ಸಂಚಲನ
- ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್
- ರಾಮನಗರದಿಂದ ನಿಖಿಲ್, ಹಾಸನದಿಂದ ಪ್ರಜ್ವಲ್?
NAMMUR EXPRESS NEWS
ಬೆಂಗಳೂರು: ಭಾರತೀಯ ರಾಜಕೀಯದಲ್ಲಿ ಮಹತ್ವ ಪಡೆದಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ವರ್ಷ ಬಾಕಿ ಇದೆ. ಈ ನಡುವೆ ರಾಜಕೀಯದ ರಣಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿರುವ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಮ್ಯಾಜಿಕ್ ಮಾಡಲು ಹೊರಟಿದೆ.
ಮತ್ತೊಮ್ಮೆ ಸಿಎಂ ಆಗುವ ಕನಸಿನೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕುಮಾರಸ್ವಾಮಿ ಇದೀಗ
ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ.
ರಾಜ್ಯದ ಕ್ಷೇತ್ರವೊಂದರಿಂದ ಕಣಕ್ಕಿಳಿದು ಗೆದ್ದು ಬಂದರೇ, ಸಿಎಂ ಆಗೋ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದೇ ಹೋದಲ್ಲಿ ಪಕ್ಷ ವಿಸರ್ಜನೆ ಮಾಡೋದಾಗಿ ಪಣತೊಟ್ಟಿದ್ದಾರೆ. ಹೀಗಾಗಿ ದೇವಮೂಲೆ ಇರುವ ವಿಧಾನಸಭಾ ಕ್ಷೇತ್ರದ ಮೊರೆ ಹೋಗಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಪ್ರಸ್ತುತ ಜೆಡಿಎಸ್ ತೆಕ್ಕೆಯಲ್ಲಿದೆ. ಇದು ದೇವಮೂಲೆಯ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಿಂದ ಕಣಕ್ಕಿಳಿದು ಶಾಸಕರಾದರೇ ಸಿಎಂ ಆಗೋ ಅವಕಾಶ ಇದೆಯಂತೆ. ಇದೇ ಕಾರಣಕ್ಕೆ ಎಚ್ಚಿಕೆ ತಮ್ಮ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಮಾಗಡಿಯಿಂದ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ.
ಕುಮಾರಸ್ವಾಮಿ ರಾಮನಗರದಲ್ಲಿ ಮೂರು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲಿ ಗೆದ್ದು ಒಂದು ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ನಾಲ್ಕನೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಗಡಿಯಿಂದ ಕಣಕ್ಕಿಳಿದು ಗೆದ್ದಿರುವ ಮಂಜುನಾಥ್ ಅವರನ್ನು ಎಂಎಲ್ಸಿ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ರಾಮನಗರದಿಂದ ನಿಖಿಲ್ ಸ್ಪರ್ಧೆ?
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು, ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ.
ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ?
ಜೆಡಿಎಸ್ ಭದ್ರಕೋಟೆ ಹಾಸನದಿಂದ ಪ್ರಜ್ವಲ್, ಹೊಳೆಸಿಪುರದಿಂದ ರೇವಣ್ಣ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.