- ಪ್ರವೀಣ್ ಸಾವಿನ ದುಃಖದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದ ನಾಯಕ
- ಕುಟುಂಬದ ನೋವಲ್ಲಿ ಜತೆಯಾಗೋಣ ಎಂದು ಕರೆ
- ಸರಳ ನಾಯಕನ ನಡೆಗೆ ಎಲ್ಲೆಡೆ ಮೆಚ್ಚುಗೆ
NAMMUR EXPRESS NEWS
ಕೊಪ್ಪ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಮಿಟಿಯ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆಗೆ ನಾಡು ಮರುಗಿದೆ. ಎಲ್ಲಾ ಕಡೆ ಕಂಬನಿ ವ್ಯಕ್ತವಾಗುತ್ತಿದೆ.
ಇತ್ತ ಪ್ರಜ್ಞಾವಂತ ಶಾಸಕ ಎಂದೇ ರಾಜ್ಯದಲ್ಲಿ ಹೆಸರು ಮಾಡಿರುವ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸದೆ ಪ್ರವೀಣ್ ಅವರಿಗೆ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಕಾರ್ಯಕರ್ತರಿಗೂ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಮನವಿ ಮಾಡಿದ್ದಾರೆ. ರಾಜೇಗೌಡ ಅವರ ನಡೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಜುಲೈ 28ರಂದು ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರು, ಪಕ್ಷದ ಪದಾಧಿಕಾರಿಗಳಿಗೆ ಹುಟ್ಟು ಹಬ್ಬ ಆಚರಣೆ ಬೇಡ ಎಂದು ತಿಳಿಸಿದ್ದಾರೆ.
ಕುಟುಂಬದ ನೋವಲ್ಲಿ ನಾವು ನಿಲ್ಲೋಣ
ಮನೆ ಮಗನ ಕಳೆದುಕೊಂಡ ಪೋಷಕರ ಹಾಗೂ ಮನೆಯವರ ನೋವು ಭರಿಸಲಾರದ್ದು. ಕೇವಲ ಮನೆಯವರಿಗಷ್ಟೇ ಮಾತ್ರ ಈ ನೋವು ಕಾಡಬಾರದು ಅವರ ನೋವಿನೊಂದಿಗೆ ನಾವು ನಿಲ್ಲೋಣ ತನ್ಮೂಲಕ ಕುಟುಂಬಕ್ಕೆ ಸಾಂತ್ವಾನ ಹಾಗೂ ಧೈರ್ಯವನ್ನು ತುಂಬುತ್ತಾ ಕುಟುಂಬದವರೊಂದಿಗೆ ಭಾಗಿಯಾಗೋಣ.
ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಪ್ರವೀಣ ನೆಟ್ಟಾರು ಹಂತಕರಿಗೆ ತೀವ್ರ ಶಿಕ್ಷೆಯಾಗಬೇಕು. ಮಗನನ್ನು ಕಳೆದುಕೊಂಡ ತಂದೆ, ತಾಯಿ ಹಾಗೂ ಆತನ ಪತ್ನಿಗೆ ನ್ಯಾಯ ದೊರೆಯಬೇಕು. ಬೇರೊಬ್ಬರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಟಿಡಿಆರ್ ಆಗ್ರಹಿಸಿದ್ದಾರೆ.