- ಕಸ್ತೂರಿ ರಂಗನ್ ವರದಿ ಜಾರಿಗೆ ಒಂದು ವರ್ಷ ಸಮಯ ಕೊಟ್ಟ ಕೇಂದ್ರ
- ಸಿಎಂ, ಗೃಹ ಸಚಿವ ಆರಗ ನೇತೃತ್ವದಲ್ಲಿ ನಿಯೋಗ
NAMMUR EXPRESS NEWS
ಬೆಂಗಳೂರು: ಮಲೆನಾಡಿನ ರೈತರ ಪಾಲಿಗೆ ತೂಗುಗತ್ತಿಯಾಗಿರುವ
ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡದಂತೆ ಹಾಗೂ ರೈತರ ಕೋರಿಕೆಯಂತೆ
ಪ್ರತ್ಯಕ್ಷ ಸರ್ವೇ ನಡೆಸುವಂತೆ ಕೇಂದ್ರ ಅರಣ್ಯ ಸಚಿವರಾದ ಭೂಪೆಂದ್ರ ಯಾದವ್ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ನಿಯೋಗದೊಂದಿಗೆ ಭೇಟಿಮಾಡಿ ಚರ್ಚೆ ನಡೆಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯ ರಾಘವೇಂದ್ರ, ಮಾಜಿ ಸಚಿವ ಸಿ.ಟಿ ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೈಸೂರು ಸಂಸದ ಪ್ರತಾಪ್ ಸಿಂಹ, ಸಾಗರ ಶಾಸಕ ಹಾಲಪ್ಪ ಮತ್ತಿತರರ ನಿಯೋಗದ ಮನವಿಯನ್ನು ಪುರಸ್ಕರಿಸಿದ ಭೂಪೆಂದರ್ ಯಾದವ್ ಅವರು ಸಮಿತಿ ರಚಿಸಿ, ಎಲ್ಲ ರಾಜ್ಯಗಳ ಸಲಹೆಗಳನ್ನು ಸ್ವೀಕರಿಸಿ, ರೈತರ ಹಿತ ಕಾಯುವ ವರದಿಯನ್ನು ಮುಂದಿನ ಒಂದು ವರ್ಷದ ಒಳಗಾಗಿ ಸಚಿವಾಲಯಕ್ಕೆ ಸಲ್ಲಿಸಲು ಸೂಚಿಸಿದ್ದಾರೆ. ಅಲ್ಲಿಗೆ ಈ ವರದಿಗೆ ಒಂದು ವರ್ಷ ತಡೆ ಬೀಳಲಿದೆ.
ಮಲೆನಾಡು ಸೇರಿ ರಾಜ್ಯದಲ್ಲಿ ಈ ವಿವಾದ ಬುಸುಗುಟ್ಟುವ ಹಿನ್ನೆಲೆ ಇದೀಗ ಕೇಂದ್ರ ರಾಜ್ಯದ ಮನವಿಗೆ ಸ್ಪಂದಿಸಿದೆ.
ರಾಜ್ಯದ ಹೊಣೆ ಇನ್ನಾದರೂ ಆಗುತ್ತಾ..?
ಪಶ್ಚಿಮ ಘಟ್ಟದ ಸುಮಾರು 1500 ಗ್ರಾಮಗಳು ಈ ವರದಿಯ ವ್ಯಾಪ್ತಿಯಲ್ಲಿದೆ. ಈಗಾಗಲೇ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡವರ ಬದುಕು ಬೀದಿಗೆ ಬೀಳಲಿದೆ. ಉದ್ಯಮ, ಪ್ರವಾಸ ಎಲ್ಲದಕ್ಕೂ ಬ್ರೇಕ್ ಬೀಳಲಿದೆ. ಇನ್ನಾದರೂ ರಾಜ್ಯ ಸರ್ಕಾರ ಜನರ ಕಣ್ಣು ಒರೆಸುವ ತಂತ್ರ ಬಿಟ್ಟು ಜನಹಿತ ವರದಿ ತಯಾರಿಸಿ ಕೇಂದ್ರಕ್ಕೆ ನೀಡಬೇಕಿದೆ.
ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಕೂಡ ಈ ವರದಿ ವಿರುದ್ಧ ಬಹು ದೊಡ್ಡ ಆಂದೋಲನ ಆಯೋಜಿಸುವ ನಿರ್ಧಾರ ಮಾಡಿತ್ತು.