ಸಾಗರಕ್ಕೂ ಬಂತು ಗಾಂಜಾ ಗ್ಯಾಂಗ್!
– ತೀರ್ಥಹಳ್ಳಿ, ಹೊಸನಗರದಲ್ಲೂ ಮಾರಾಟ
– ಸಾಗರ ಪೊಲೀಸ್ ಕಾರ್ಯಚರಣೆ: ಓರ್ವ ಅರೆಸ್ಟ್
NAMMUR EXPRESS NEWS
ಸಾಗರ: ಸಾಗರ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ಸೇರಿದಂತೆ ಮಲೆನಾಡಿನ ಅನೇಕ ತಾಲೂಕುಗಳ ಬೀಡಾ ಅಂಗಡಿ, ದಿನಸಿ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಯುವ ಸಮುದಾಯ ಗಾಂಜಾ ಡ್ರಗ್ಸ್ ಹಿಂದೆ ಬಿದ್ದಿದೆ. ಈ ನಡುವೆ ಸಾಗರದಲ್ಲಿ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬೆಳಿಗ್ಗೆ 11.00 ಗಂಟೆಗೆ ಸಾಗರ ಟೌನ್ ಸೌಪರ್ಣಿಕ ಹೋಟೆಲ್ ಹತ್ತಿರ ವರದಹಳ್ಳಿ ಕ್ರಾಸ್ ಬಳಿ ಮಹಮ್ಮದ್ ಹುಸೇನ್ ಬಿನ್ ಮೆಹಬೂಬ ಸುಭಾನ ರಾಮನಗರ ಎಂಬಾತ ಅಕ್ರಮವಾಗಿ 53 ಗ್ರಾಂ ಒಣ ಗಾಂಜಾವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮಾಲನ್ನು ವಶಪಡಿಸಿಕೊಂಡು ಆರೋಪಿಯನ್ನು ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ನ್ಯಾಯಾಂಗ ವಶಕ್ಕೆ ನೀಡಲಾಯಿತು. ಕಾರ್ಯಾಚರಣೆಯಲ್ಲಿ ಎನ್ನಿ ಲೋಬಿ, ಗುರುಮೂರ್ತಿ ಅರುಣ್ ಜಿ ಎಂ, ದೀಪಕ್ ಯು ಪಿ , ಕನ್ನಯ್ಯ ವಾಹನ ಚಾಲಕರಾದ ಗಣಪತಿ ಮತ್ತು ಮಹಾಬಲೇಶ್ ಹಾಜರಿದ್ದರು.
ಮಲೆನಾಡಿನ ಎಲ್ಲಾ ತಾಲೂಕಿಗೂ ಹಬ್ಬಿದ ಗಾಂಜಾ ನಂಟು!
ಕರಾವಳಿಯಲ್ಲಿ ಹೆಚ್ಚಿದ್ದ ಗಾಂಜಾ ಝೆಡ್ ಡ್ರಗ್ಸ್ ಮಾಫಿಯಾ ಇದೀಗ ಮಲೆನಾಡಿನ ತಾಲೂಕುಗಳಲ್ಲಿ ಸಕ್ರಿಯವಾಗಿದೆ. ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರ ಸೇರಿ ಎಲ್ಲಾ ಕಡೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023