ಶಿವಮೊಗ್ಗ ಚುನಾವಣೆಗೆ ಬೆಂಗಳೂರಿನಿಂದ 50 ಸಾವಿರ ಮತದಾರರು!
– ಬಸ್, ಸಾರಿಗೆ ವ್ಯವಸ್ಥೆಯನ್ನು ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು
– ತೀರ್ಥಹಳ್ಳಿಗೂ ಸುಮಾರು 10,000 ಮತದಾರರ ಆಗಮನ
NAMMUR EXPRESS NEWS
ಶಿವಮೊಗ್ಗ /ತೀರ್ಥಹಳ್ಳಿ : ಶಿವಮೊಗ್ಗ ಲೋಕಸಭಾ ಚುನಾವಣೆ ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದೆ. ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ರಾಜಧಾನಿಯಲ್ಲಿರುವ ಸುಮಾರು 50,000ಕ್ಕೂ ಹೆಚ್ಚು ಮತದಾನರು ಬೆಂಗಳೂರಿನಿಂದ ಮತದಾನ ಮಾಡಲು ಆಗಮಿಸಿದ್ದಾರೆ. ರಾಜಧಾನಿಯಲ್ಲಿದ್ದು ತಮ್ಮ ಊರಿನಲ್ಲಿ ಮತ ಇರುವಂತಹ ಮತದಾರರು ಮತವನ್ನು ಚಲಾಯಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ಬೈಂದೂರು ಕ್ಷೇತ್ರದ ಮತದಾನರು ಕೂಡ ಆಗಮಿಸುತ್ತಿದ್ದಾರೆ. ಈಗಾಗಲೇ ಕಳೆದ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶೇಷದ ಸಭೆಯನ್ನು ಮಾಡಿರುವ ರಾಘವೇಂದ್ರ ಹಾಗೂ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ನಾಯಕರು, ಬೆಂಗಳೂರು ಬಿಜೆಪಿ ಸಮಿತಿ ಈಗ ತಾಲೂಕು ವಾರು ಬೆಂಗಳೂರು ಮಲೆನಾಡು ಮತದಾರರನ್ನು ಮತದಾನಕ್ಕೆ ಕರೆಸಿದೆ.
ನೂರಾರು ಬಸ್, ಕಾರುಗಳಲ್ಲಿ ಆಗಮನ!
ಶಿವಮೊಗ್ಗ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ತಾಲೂಕಿನ ಬೆಂಗಳೂರು ನಿವಾಸಿಗರನ್ನು ಈಗಾಗಲೇ ಸಂಪರ್ಕಿಸಲಾಗಿದ್ದು ಅವರನ್ನು ಮತದಾನಕ್ಕೆ ಕರೆಸಲಾಗಿದೆ. ಬೆಂಗಳೂರಿಂದ ಸಾವಿರಾರು ಜನ ಬಸ್, ಸ್ವತಃ ಕಾರು ವಾಹನಗಳಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಗೆ ಬಂದಿದ್ದಾರೆ.
ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ, ಉಡುಪಿ ಜಿಲ್ಲೆಯ ಬೈಂದೂರು ಸೇರಿ ಎಲ್ಲಾ ತಾಲೂಕು ಬೆಂಗಳೂರಲ್ಲಿರುವ ಹಾಗೂ ರಾಜ್ಯದ ವಿವಿಧ ಕಡೆ ಇರುವ ಮತದಾರರು ಆಗಮಿಸಿದ್ದಾರೆ.
ತೀರ್ಥಹಳ್ಳಿಯೇ ಪವರ್ ಸೆಂಟರ್!
ಬೆಂಗಳೂರಿನಲ್ಲಿರುವ ತೀರ್ಥಹಳ್ಳಿ ಮೂಲದ ಬಿಜೆಪಿ ಮಹಾಮಂಡಲ ಕೂಡ ರಚನೆ ಮಾಡಿದ್ದು, ಯುವ ಸಂಘಟಕ ಅರುಣ್ ಶೆಟ್ಟಿ ನೇತೃತ್ವದಲ್ಲಿ ಈಗಾಗಲೇ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಆಯಾಯ ತಾಲೂಕಿನ ಬಿಜೆಪಿ ಸಂಘಟಕರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಇರುವಂತಹ ಮತದಾರರನ್ನ ಈ ಸಂಘಟನೆಯ ಜವಾಬ್ದಾರಿ ತೆಗೆದುಕೊಂಡಿದ್ದು ಸಾವಿರಾರು ಬಸ್ ಗಳು ಹಾಗೂ ಕಾರುಗಳು, ರೈಲುಗಳ ಮೂಲಕ ಮತದಾನರು ಆಗಮಿಸುತ್ತಿದ್ದಾರೆ. ಕಳೆದ ತೀರ್ಥಹಳ್ಳಿ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಗೆಲುವಿನಲ್ಲಿ ಈ ಮತದಾರರು ಪ್ರಮುಖ ಪಾತ್ರವಹಿಸಿದ್ದು, ಅಲ್ಲಿನ ಎಲ್ಲ ಬಿಜೆಪಿ ನಾಯಕರು ಮುಖಂಡರುಗಳು ಹಾಗೂ ಸಂಘಟಕರು ಕಾರ್ಯಕರ್ತರು ಕೂಡ ವಿಶೇಷವಾಗಿ ಆಸಕ್ತಿ ವಹಿಸಿ ಮತದಾನವನ್ನ ಮಾಡಿಸಿದ್ದರು. ಈ ರಾಘವೇಂದ್ರ ಅವರ ಚುನಾವಣೆಯಲ್ಲೂ ಕೂಡ ಇದೇ ರೀತಿಯ ಚಟುವಟಿಕೆ ನಡೆಯಲಿದೆ. ತೀರ್ಥಹಳ್ಳಿ ಭಾಗದ ಅತೀ ಹೆಚ್ಚು ಮತದಾರರು ಆಗಮಿಸಲಿದ್ದಾರೆ.