ಬಿಜೆಪಿ, ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು!
– ನಾಗ ಮಂಗಲ ಘಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ
– ಕಾಂಗ್ರೆಸ್ ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ಹೇಳಿಕೆ
NAMMUR EXPRESS NEWS
ತೀರ್ಥಹಳ್ಳಿ: ಬಿಜೆಪಿ, ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು. ನಾಗ ಮಂಗಲ ಘಟನೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಛೇರಿ ಗಾಂಧಿ ಭವನದಲ್ಲಿ ಸೆ.14ರಂದು ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು.
ನಾಗಮಂಗಲ ಘಟನೆ ಬಗ್ಗೆ ಬಿಜೆಪಿಯವರ ಹೇಳಿಕೆ ಬೆಂಕಿ ಆರಿಸಲು ಬಂದವರಲ್ಲ ಎಂದು ತಿಳಿಯುತ್ತದೆ,. ಇದು ಪೂರ್ವಸಿದ್ಧತೆ ಕಾರ್ಯಕ್ರಮ.
ದೇಶದಲ್ಲಿ ಹಿಂಧೂಗಳನ್ನು ಎದುರು ಹಾಕಿಕೊಂಡು ರಾಜಕೀಯ ಮಾಡಲು ಸಾಧ್ಯವೇ? ಎಂದು ಳಿದು.
ೀರ್ಥಹಳ್ಳಿಯಲ್ಲಿ ನಡೆದ ಕೋಮು ಗಲಭೆಗೆ ಮುಖ್ಯ ಕಾರಣ ಬಿಜೆಪಿ ಪಕ್ಷ ಮತ್ತು ಜ್ಞಾನೇಂದ್ರ ಕೋಮು ಗಲಭೆಯ ಸೃಷ್ಟಿಕರ್ತರು ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ಎಲ್ಲಾ ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳಬೇಕು.ಕಾಂಗ್ರೆಸ್ ಹಿಂಧೂ ವಿರೋಧಿ ಪಕ್ಷವಲ್ಲ ಎಂದರು.
ಪಿ.ಎಸ್.ಐ ಹಗರಣ ಮತ್ತು ನಂದಿತಾ ಪ್ರಕರಣ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ಎಲ್ಲವೂ ತನಿಖೆ ಆಗಬೇಕು. ಸರ್ಕಾರಕ್ಕೆ ಇದರ ಬಗ್ಗೆ ಖುದ್ದಾಗಿ ತನಿಖೆ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್ ಡಿ ಎಸ್, ವಿಶ್ವನಾಥ್ ಶೆಟ್ಟಿ , ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗೀತಾ ರಮೇಶ್, ಮಂಜುಳಾ ನಾಗೇಂದ್ರ, ರತ್ನಾಕರ್ ಶೆಟ್ಟಿ, ವಿಲಿಯಂ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.