Categories
ಮಲ್ನಾಡ್

ಬೆಂಗಳೂರು ಬಸ್ ಸೇರಿ ಎಲ್ಲೆಡೆ ರಶ್ ರಶ್!

ಬೆಂಗಳೂರು ಬಸ್ ಸೇರಿ ಎಲ್ಲೆಡೆ ರಶ್ ರಶ್!
– ಖಾಸಗಿ ಬಸ್ ದರ ಹೆಚ್ಚಿದ್ರೂ ಜನವೋ ಜನ
– ರೈಲು, ಬಸ್ ಅಲ್ಲಿ ಕಾಲು ಇಡಲು ಜಾಗ ಇಲ್ಲ
– ಸೋಮವಾರ ಕೂಡ ರಶ್ ಇರುತ್ತೆ…?!

NAMMUR EXPRESS NEWS
ಮಲೆನಾಡು: ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಜನ ಮತ್ತೆ ತಮ್ಮ ತಮ್ಮ ಊರುಗಳಿಗೆ ಹೊರಟ ಕಾರಣ ಭಾನುವಾರ ಮತ್ತು ಶನಿವಾರ ಎಲ್ಲೆಡೆ ಬಸ್ ರಶ್ ಆಗಿದ್ದವು. ಸೋಮವಾರವೂ ರಶ್ ಆಗುವ ಸಾಧ್ಯತೆ ಇದೆ.
ಶುಕ್ರವಾರ ಬೆಂಗಳೂರಿಂದ ಬರುವಾಗ ಅನೇಕರಿಗೆ ಬಸ್ ಸಿಗದೆ ಪರದಾಟ ನಡೆಸಿದ್ದರು. ಅದರಲ್ಲೂ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ ಭಾಗಕ್ಕೆ ಜನರ ದಂಡು ಕಂಡು ಬಂದಿತ್ತು.. ಭಾನುವಾರ ಕೂಡ ಖಾಸಗಿ ಬಸ್ ಫುಲ್ ಆಗಿ ಹೊಸ ಬಸ್ ಸೇವೆ ಇತ್ತು. ಸರ್ಕಾರಿ ಬಸ್, ರೈಲು ಕಾಲು ಹಾಕದಷ್ಟು ತುಂಬಿ ಹೋಗಿದ್ದವು. ಇನ್ನು ಖಾಸಗಿ ಬಸ್ ದರ ಕೂಡ 1000-2000 ಆಗಿತ್ತು. ಕೆಎಸ್ಆರ್ಟಿಸಿ ಕೂಡ ವಿಶೇಷ ಬಸ್ ಸೇವೆ ನೀಡಿತ್ತು. ಆದರೂ ಎಲ್ಲಾ ಕಡೆ ರಶ್ ಕಂಡು ಬಂತು.

ಹಬ್ಬದ ದಿನದಿಂದ ಸ್ಥಳೀಯ ಬಸ್ ಇರಲಿಲ್ಲ!

ಗೌರಿ ಗಣೇಶ ಬ್ಬದಿಂದ ಭಾನುವಾರದವರೆಗೂ ತಾಲೂಕು ಕೇಂದ್ರಗಳಲ್ಲಿ ಖಾಸಗಿ ಬಸ್ ಸೇವೆ ವ್ಯತ್ಯಯ ಕಂಡು ಬಂತು. ಅನೇಕ ಮಾರ್ಗಗಳಲ್ಲಿ ಬಸ್ ಇಲ್ಲದೆ ಜನ ಪರದಾಟ ನಡೆಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.