ಈಶ್ವರಪ್ಪ ಬಿಜೆಪಿ ಬೆಂಬಲ ಸುಳ್ಳು: ಮಾಧ್ಯಮಗೋಷ್ಠಿ!
– ಮತದಾನದ ದಿನದಂದೇ ಹಳೆಯ ವಿಡಿಯೋ ವೈರಲ್
– ಅಪಪ್ರಚಾರದ ವಿರುದ್ಧ ಈಶ್ವರಪ್ಪ ಕೆಂಡಾಮಂಡಲ
NAMMUR EXPRESS NEWS
ಶಿವಮೊಗ್ಗ : ಮತದಾನದ ದಿನದಂದು ವೈರಲ್ ಆಗಿರುವ ವಿಡಿಯೋ ವಿರುದ್ಧ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದಿದ್ದಾರೆ. ಸಂಸದ ರಾಘವೇಂದ್ರನವರ ಪರ ಮತಯಾಚಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ಬಗ್ಗೆ ಮಾತನಾಡಿರುವ ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ರಾಘವೇಂದ್ರರಿಂದ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಎಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತದಾನದ ದಿನ ರಾಘವೇಂದ್ರ ಅವರ ಪರವಾಗಿ ಮಾತನಾಡಿದ ಹಳೆಯ ವಿಡಿಯೋವೊಂದನ್ನ ವೈರಲ್ ಮಾಡಲಾಗುತ್ತಿದೆ. ಆದರೆ ಜನ ತೀರ್ಮಾನಿಸಿದ್ದಾರೆ. ನಾನು ಕಣದಿಂದ ಹಿಂದೆ ಸರಿದಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಏನಿದು ಸುಳ್ಳು ಸುದ್ದಿ?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ ಸಾರಿ ಪಕ್ಷೇತರರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸರ್ಧೆ ಮಾಡಿ ಮಾಡಿರುವ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್ ಈಶ್ವರಪ್ಪ ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವಿಡಿಯೋ ಹಾಗೂ ಸುದ್ದಿಯನ್ನು ಎಲ್ಲೆಡೆ ಚುನಾವಣೆ ದಿನವೇ ವೈರಲ್ ಮಾಡಲಾಯಿತು. ಪ್ರಧಾನಿ ಮೋದಿಗಾಗಿ ತ್ಯಾಗಕ್ಕೆ ಸಿದ್ದ ಎನ್ನುವ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ. ಭಾರತದ ಹಿತ ದೃಷ್ಟಿಯಿಂದ ಮೋದಿಜಿ ಪ್ರಧಾನಿಯಾಗುವುದು ಅನಿವಾರ್ಯ ಹಾಗೂ ಅತ್ಯವಶ್ಯಕ, ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುವುದರಿಂದ ಲಾಭ ನೇರವಾಗಿ ಕಾಂಗ್ರೆಸ್ಗೆ ಆಗಲಿದೆ. ನಾನು ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡೆ ಬಂದವನು.
ಭಾರತ ವಿರೋದಿ ಜಿಹಾದಿ ಶಕ್ತಿಗಳನ್ನು ಬೆಂಬಲಿಸುವ ಕಾಂಗ್ರೆಸ್ ವಿರುದ್ಧ ನನ್ನ ಹೋರಾಟ ನಿತ್ಯ ನಿರಂತರ. ಈ ನಿಟ್ಟಿನಲ್ಲಿ ನಾನು ಈ ಚುನಾವಣೆಯಲ್ಲಿ ತಟಸ್ಥನಾಗುತ್ತಿದ್ದು ಶಿವಮೊಗ್ಗದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸೋಣ ಎಂದು ಕರೆ ನೀಡಿದ್ದಾರೆ ಎಂದು ವೈರಲ್ ಮಾಡಲಾಗಿತ್ತು. ಆದರೆ ಈಶ್ವರಪ್ಪ ಮಾಧ್ಯಮಕ್ಕೆ ಹೇಳಿಕೆ ನೀಡಿ ರಾಘವೇಂದ್ರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.