ರಾಜಕೀಯ ದಾಳಿ: ಅರ್.ಎಂ ಅಭಿಮಾನಿಗಳ ಆಕ್ರೋಶದ ಕಿಚ್ಚು!
– ತೀರ್ಥಹಳ್ಳಿ ಸೇರಿ ಹಲವೆಡೆ ಡಾ. ಅರ್.ಎಂ. ಮಂಜುನಾಥ ಗೌಡರ ಮನೆ ಮೇಲೆ ದಾಳಿ
– ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷರಾದ ನಾಗೇಶ್ ಮೊಗವೀರ, ವಿಶ್ವನಾಥ್ ಕೌರಿ ಆಕ್ರೋಶ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್ ಎಂ ಮಂಜುನಾಥ್ ಗೌಡ ಅವರ ತೀರ್ಥಹಳ್ಳಿ, ಕರಕುಚ್ಚಿ ಮನೆ ಮೇಲೆ ಇಡಿ ದಾಳಿ ನಡೆದಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ. ವಿರೋಧ ಪಕ್ಷ ಬಿಜೆಪಿ ರಾಜ್ಯದಲ್ಲಿ ಪ್ರಬಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಆರ್ ಎಂಎಂ ಅವರನ್ನು ಮಟ್ಟ ಹಾಕಲು ಇಡಿ ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ಅ.6ಕ್ಕೆ ಅವರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂತಹ ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಮಂಜುನಾಥ ಗೌಡ ಎಲ್ಲರಿಗೂ ಸಹಕಾರ ಮಾಡಿದ್ದಾರೆ ಎಂದು ಡಿಕೆಶಿ ಅಭಿಮಾನಿ ಬಳಗದ ತೀರ್ಥಹಳ್ಳಿ ಅಧ್ಯಕ್ಷ ನಾಗೇಶ್ ಮೊಗವೀರ, ಹೊಸನಗರ ಅಧ್ಯಕ್ಷ ವಿಶ್ವನಾಥ ಕೌರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ನಡೆದ ಇ ಡಿ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯವಾಗಿ ಅವರನ್ನು ಎದುರಿಸಲು ಸಾಧ್ಯವಾಗದೆ ಇಂತಹ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಸಾವಿರಾರು ಜನ ಇವರ ಬೆಂಬಲಕ್ಕೆ ನಿಲ್ಲುವುದರ ಜೊತೆಗೆ ಕೆಲವು ತಾಲ್ಲೂಕುಗಳಲ್ಲಿ ಇವರಿಗೆ ಅಭಿನಂದನೆಗಳ ಮಹಾಪೂರ ಒದಗಿರುವುದನ್ನು ನೋಡಿ ವಿರೋಧ ಪಕ್ಷದವರು ಆರ್ ಎಂಎಂ ರನ್ನು ಮಟ್ಟ ಹಾಕಲು ಇಡಿ ದಾಳಿ ನಡೆಸಿದ್ದಾರೆ ಎಂದರು.
ಡಾ. ಮಂಜುನಾಥ ಗೌಡ ಅವರು ಇಂತಹ ದಾಳಿಗೆ ಬಗ್ಗುವುದು ಇಲ್ಲ ಕುಗ್ಗುವುದು ಇಲ್ಲ. ಕೆಲ ವರ್ಷಗಳ ಹಿಂದೆ ಸುಳ್ಳು ಆರೋಪಗಳನ್ನು ಹೊರಿಸಿ ಅವರ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿತ್ತು ಅದನ್ನು ಸಮರ್ಥವಾಗಿ ಎದುರಿಸಿ ನ್ಯಾಯಲಯದಲ್ಲಿಕ್ಲೀನ್ ಚಿಟ್ ಪಡೆದು ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದಿರುವ ಗೌಡರ ಅಭೂತಪೂರ್ವ ಜನಬೆಂಬಲಕ್ಕೆ ಬೆದರಿರುವ ವಿರೋಧಿಗಳು ಇಂತಹ ದಾಳಿಯ ಮೂಲಕ ಮಟ್ಟ ಹಾಕಲು ಯತ್ನಿಸುತಿದ್ದಾರೆ ಎಂದು ಆರೋಪಿಸಿದ್ದಾರೆ.