ನಂ.1 ಸಹಕಾರ ಬ್ಯಾಂಕ್ ಪ್ರಶಸ್ತಿ ಪಡೆದ ಶಿವಮೊಗ್ಗ ಡಿಸಿಸಿ ಬ್ಯಾಂಕ್!
– 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಭಾಜನ
– ಪ್ರಶಸ್ತಿ ಸ್ವೀಕಾರ ಮಾಡಿದ ಡಾ.ಆರ್.ಎಂ.ಮಂಜುನಾಥ ಗೌಡ, ಸುಧೀರ್
NAMMUR EXPRESS NEWS
ಶಿವಮೊಗ್ಗ: ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಭಾಜನವಾಗಿದ್ದು ಸೆ. 13ರಂದು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಹಾಗೂ ನಿರ್ದೇಶಕರಾದ ಸುಧೀರ್ ಅವರು ಸ್ವೀಕರಿಸಿದರು.
ಸಹಕಾರ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗವನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇದರ ವಾರ್ಷಿಕ ಮಹಾ ಸಭೆಯಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ, ನಾಯಕರು ಆದ ಬೆಳ್ಳಿ ಪ್ರಕಾಶ್ ನಿರ್ದೇಶಕರುಗಳಾದ ಸಚಿವ ಶಿವಾನಂದ್ ಪಾಟೀಲ್ ಬಿಜಾಪುರ, ರಾಜಂದ್ರಕಮಾರ್ ಮಂಗಳೂರ,ಅಶ್ವಥ್ ಮಂಡ್ಯ, ಸಿದ್ದು ಸೌದಿ ಬಾಗಲಕೋಟೆ, ಪಾಂಡುಗಣಪತಿ ಕೊಡಗು, ಸಿಇಒ ದೇವರಾಜ್ ಸಿ ಎನ್ ವೇದಿಕೆಯಲ್ಲಿ ಇದ್ದರು.
ಡಾ.ಆರ್.ಎಂ.ಮಂಜುನಾಥಗೌಡ ಅವರು ಅಧ್ಯಕ್ಷರಾದ ಬಳಿಕ ರಾಜ್ಯದ ನಂಬರ್ 1 ಬ್ಯಾಂಕ್ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಇಂದ ಪ್ರಶಸ್ತಿ ಪಡೆದಿದೆ.