ಶಿವಮೊಗ್ಗ ಜಿಲ್ಲಾ ಟಾಪ್ ನ್ಯೂಸ್
ಶಿರಾಳಕೊಪ್ಪದಲ್ಲಿ ಚಾಲಾಕಿ ಲೇಡಿ ಅರೆಸ್ಟ್!
ಮಲೆನಾಡಿಗೆ ಕಾಡಾನೆಗಳು ಎಂಟ್ರಿ!: ಬೆಳೆ ನಾಶ!
– ಶಿಕಾರಿಪುರ: ಭೀಕರ ಅಪಘಾತ, ತೀರ್ಥಹಳ್ಳಿ ಮೂಲದ ವ್ಯಕ್ತಿ ಸಾವು
– ಹೊಸನಗರ : ಕಸಾಪ ಹಿರಿಯ ಸದಸ್ಯ ಎಚ್ ಆರ್ ಪ್ರಕಾಶ್ ಇನ್ನಿಲ್ಲ
– ಶಿರಾಳಕೊಪ್ಪ: 200 ಎಟಿಎಂ ಕಾರ್ಡು ಪಡೆದು ಗ್ರಾಹಕರಿಗೆ ವಂಚನೆ!
NAMMUR EXPREES NEWS
ಶಿವಮೊಗ್ಗ : ಮಲೆನಾಡು ಭಾಗವಾದ ಶಿವಮೊಗ್ಗದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರ ಬೆಳೆ ನಾಶವಾಗಿದೆ. ಎರಡು ಕಾಡಾನೆಗಳ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಕೇಂದ್ರದಿಂದ 9 ಕಿಮೀ ದೂರ ಇರುವ ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ ಎಂಬುವರ ತೋಟ ಹಾಗೂ ಹೊಲಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿವೆ. ಜೋಳ ಹಾಗೂ ಕಬ್ಬನ್ನು ಸಹ ಕಾಡಾನೆಗಳು ನಾಶ ಮಾಡಿದ್ದಾವೆ.
ಆನೆಗಳ ಬಗ್ಗೆ ಮಾಹಿತಿ ನೀಡಿದ್ರೂ ಸಹ ಸೂಕ್ತ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ರಸ್ತೆಯ ಸುತ್ತಲೂ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾರೆ ಎಂದು ಆಕ್ರೋಶದ ಜೊತೆಗೆ ಆನೆ ದಾಳಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯ ಮಾಡಿದ್ದಾರೆ.
– ಶಿಕಾರಿಪುರ: ಭೀಕರ ಅಪಘಾತ, ತೀರ್ಥಹಳ್ಳಿ ಮೂಲದ ವ್ಯಕ್ತಿ ಸಾವು
ಶಿಕಾರಿಪುರ : ಲಾರಿ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ ಮಾಡುತ್ತಿರುವ ವೇಳೆ ಬೈಕ್ ಒಂದು ಗುದ್ದಿದ ಪರಿಣಾಮ ರಸ್ತೆಯಲ್ಲಿ ಲಾರಿ ಚಾಲಕ ದುರ್ಮರಣ ಹೊಂದಿದ ಘಟನೆ ನಡೆದಿದೆ.
ತೀರ್ಥಹಳ್ಳಿಯ ಯಡೇಹಳ್ಳಿಕೆರೆಯ ರಮೇಶ್ (54 ವರ್ಷ ) ಮೃತ ದುರ್ದೈವಿ. ಶಿಕಾರಿಪುರ ಸಮೀಪದ ಕೆಂಗಟ್ಟಿ ಮತ್ತು ಸಿದ್ದನ್ನುರ ಗ್ರಾಮದ ಮುಖ್ಯ ರಸ್ತೆಯ ಬಳಿ ಲಾರಿ ಪಂಚರ್ ಆಗಿದ್ದಕ್ಕಾಗಿ ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡು ಟಯರ ಬದಲಾವಣೆ ಮಾಡುತ್ತಿರುವಾಗ ಶಿಕಾರಿಪುರದಿಂದ ಹೊನ್ನಳ್ಳಿ ಹೋಗುವ ಬೈಕ್ ಸವಾರ ಬಸವರಾಜ್ ಗುದ್ದಿದ ಪರಿಣಾಮವಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯಿಂದ ಕೆಲಸದ ಮೇಲೆ ಲಾರಿಯನ್ನು ತೆಗೆದುಕೊಂಡು ರಮೇಶ್ ಶಿಕಾರಿಪುರಕ್ಕೆ ತೆರಳಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.
– ಹೊಸನಗರ : ಕಸಾಪ ಹಿರಿಯ ಸದಸ್ಯ ಎಚ್ ಆರ್ ಪ್ರಕಾಶ್ ಇನ್ನಿಲ್ಲ
ಹೊಸನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ ಹೆಚ್ಆರ್ ಪ್ರಕಾಶ್ ಅವರ ಸ್ವಗೃಹ ದಲ್ಲಿ ನಿಧನರಾದರು. ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಸುದ್ದಿ ತಿಳಿದ ಕೂಡಲೇ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ. ಹಾಗೂ ಡಾ. ಮಾರ್ಷಲ್ ಶರಾಮ್ . ಕೆ.ಜಿ ನಾಗೇಶ್ ಮತ್ತು ಕ.ಸಾ.ಪ. ಸದಸ್ಯರುಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಮೃತರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು
– ಶಿರಾಳಕೊಪ್ಪ: 200 ಎಟಿಎಂ ಕಾರ್ಡು ಪಡೆದು ಗ್ರಾಹಕರಿಗೆ ವಂಚನೆ
ಶಿರಾಳಕೊಪ್ಪ: ಬಂಕಾಪುರ ಕಾಲೋನಿಯ ಮಹಿಳೆ ಒಬ್ಬಳು ಎಟಿಎಂ ಗ್ರಾಹಕರನ್ನು ವಂಚಿಸಿ ಅವರ ಖಾತೆಯಿಂದ ಹಣ ಎಗರಿಸುತ್ತಿದ್ದ ಘಟನೆಯನ್ನು ಶಿರಸಿ ಪೊಲೀಸರು ಪತ್ತೆ ಮಾಡಿ ಆಕೆಯನ್ನು ಬಂಧಿಸಿದ್ದಾರೆ. ಆಕೆಯಿಂದ ಸುಮಾರು ಎರಡು ನೂರು ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿರಸಿ ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳೆಯ ಹೆಸರು ಕೌಸರ್ ಬಾನು ಎಂದಾಗಿದ್ದು, ಐವರು ಮಕ್ಕಳೊಂದಿಗೆ ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದಳು. ಸದಾ ಎಟಿಎಂ ಸುತ್ತಮುತ್ತ ಸುಳಿದಾಡುತ್ತಿದ್ದ ಈಕೆ ಅಲ್ಲಿ ಹಣ ತೆಗೆಯಲು ಬರುವ ಗ್ರಾಮೀಣ ಜನರ ಮತ್ತು ವಯೋವೃದ್ಧರನ್ನು ಗುರಿ ಮಾಡಿಕೊಂಡು – ಅವರನ್ನು ಮೋಸಗೊಳಿಸಿ ನಂತರ ಅವರ ಎಟಿಎಂ ಕಾರ್ಡಿಂದ ಹಣ ತೆಗೆದುಕೊಡುವ ನಾಟಕ ಮಾಡುತ್ತಿದ್ದಳು. ನಿಮ್ಮ ಕಾರ್ಡಿನಿಂದ ಹಣ ಬರುತ್ತಿಲ್ಲ ಎಂದು ನಂಬಿಸುತ್ತಿದ್ದಳು. ಈ ವೇಳೆ ಅವರಿಗೆ ಕಾರ್ಡನ್ನು ಗೊತ್ತಾಗದಂತೆ ಬದಲಿಸುತ್ತಿದ್ದಳು. ಅವರು ಹೋದ ನಂತರ ಅವರ ಕಾರ್ಡಿನಿಂದ ಹಣ ತೆಗೆಯುತ್ತಿದ್ದಳು. ಇದೇ ರೀತಿ ಸುಮಾರು ಜನರು ಹಣ ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬ್ಯಾಂಕುಗಳ ಎಟಿಎಂ ಸುತ್ತಮುತ್ತ ಮಾರು ವೇಷದಲ್ಲಿ ನಿಂತು ಮತ್ತು ಸಿ ಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಈಕೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಎಲ್ಲಾ ಘಟನೆಗಳಲ್ಲೂ ಈಕೆ ಒಬ್ಬಳೇ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ ಈಕೆಯನ್ನು ಇನ್ನಷ್ಟು ವಿಚಾರಣೆ ಮಾಡಬೇಕಾಗಿದೆ.