ಕನ್ನಡ ಸಾಹಿತ್ಯ ಲೋಕಕ್ಕೆ ವಿಸ್ಮಯ ಪ್ರಪಂಚ ಕವನ ಸಂಕಲನದ ಲೋಕಾರ್ಪಣೆ!
– ಕೊಪ್ಪದ ಕನ್ನಡ ಶಿಕ್ಷಕಿ ಸುನೀತ ನೆಲೆಗದ್ದೆ ಅವರು ರಚಿಸಿರುವ ಮಕ್ಕಳ ಸಾಹಿತ್ಯ
– ಯಶಸ್ವಿಯಾಗಿ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮ, ಸುಗಮ ಸಂಗೀತ!
NAMMUR EXPRESS NEWS
ಶಿವಮೊಗ್ಗ: ಕಥಾಬಿಂದು ಪ್ರಕಾಶನದ ರೂವಾರಿ ಶ್ರೀ ಪ್ರದೀಪ್ ಕುಮಾರ್ ಸಾರಥ್ಯದೊಂದಿಗೆ ಹಾಗೆಯೇ ಇತರ ಸಾಹಿತಿ ಗಣ್ಯ ಮಿತ್ರರೊಂದಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಕ್ಕಿಮನೆ ಅಂಚೆ ನೆಲಗದ್ದೆ ವಾಸಿ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹರಂದೂರು ಕೊಪ್ಪದ ಕನ್ನಡ ಶಿಕ್ಷಕಿ ಆಗಿರುವ ಸುನೀತ ನೆಲೆಗದ್ದೆ ಇವರು ರಚಿಸಿರುವ ಮಕ್ಕಳ ಸಾಹಿತ್ಯ ವಿಸ್ಮಯ ಪ್ರಪಂಚ ಎಂಬ ಕವನ ಸಂಕಲನವು ಡಿ.15 ರಂದು ಲೋಕಾರ್ಪಣೆಗೊಂಡಿದೆ. ಮೊದಲ ಕವನ ಸಂಕಲನ ದರ್ಪಣ ಇದು ಎರಡನೆಯ ಕವನ ಸಂಕಲನವಾಗಿದ್ದು, ಈ ಕವನ ಸಂಕಲನಕ್ಕೆ ಸ್ವಾಮಿ ಸಹಾಯಕ ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ಮುನ್ನುಡಿ ಬರೆದಿದ್ದಾರೆ. ಇವರಿಗೆ ಖ್ಯಾತ ಕವಿಗಳು ಪ್ರೊ. ಎಸ್. ಜಿ ಸಿದ್ದರಾಮಯ್ಯ, ಖ್ಯಾತ ಸಾಹಿತಿಗಳು , ಡಾ. ಅಮರೇಶ ನುಗಡೋಣಿ ಡಾ, ಅಧ್ಯಕ್ಷರು ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಕಡಿದಾಳು ಪ್ರಕಾಶ್, ಅಧ್ಯಕ್ಷರು ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜೆಎಂ ಶ್ರೀ ಹರ್ಷ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹರಂದೂರು ಕೊಪ್ಪ ರಜನಿವೈ, ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಂಗಳೂರು ಪದ್ಮ ಟಿ. ಚಿನ್ಮಯ್, ಮಾಸ್ತಿ ಕೋಲಾರ ಜಿಲ್ಲೆ ನಾರಾಯಣಸ್ವಾಮಿ (ನಾನಿ), ನಿವೃತ್ತ ಬ್ಯಾಂಕ್ ಅಧಿಕಾರಿ ಕೊಪ್ಪಳ ಜಿಲ್ಲೆ ಅಮರೇಗೌಡ ಪಾಟೀಲ್ ಜಾಲಿಹಾಳ ವಕೀಲರು ಬಂಗಾರಪೇಟೆ ರಘುಪತೀ ಎ, ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರ.ದ ಕಾಲೇಜು ಜಿ. ಎನ್. ಧನಂಜಯಮೂರ್ತಿ ಹೊನ್ನಾಳಿ, ಶುಭ ಸಂದೇಶ ನೀಡಿದರು. ಈ ಕಾರ್ಯಕ್ರಮದಲ್ಲಿ ಸುನೀತರವರ ತಂದೆ ಜಾಣು ನಾಯ್ಕ ತಾಯಿ ಅಕ್ಕಯ್ಯ ಪತಿ ರವಿಕುಮಾರ್ ಹಾಗೂ ಪುತ್ರ ಸ್ವರೂಪ್ ಹಾಜರಿದ್ದರು. ಹಾಗೆಯೇ ಹಲವಾರು ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುನೀತ ನೆಲೆಗದ್ದೆ ಇವರ ಸುಗಮ ಸಂಗೀತವು ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನೆರವೇರಿತು.