ಸಾಲ ಬಾಧೆ : ರೈತ ಆತ್ಮಹತ್ಯೆ ಸಿಂದಗಿ ತಾಲೂಕಿನ ಅಂತರಗಂಗಿ ಗ್ರಾಮದ ರೈತ
– ಒಕ್ಕಲುತನ ಮಾಡುತ್ತಿದ್ದ ರೈತ ಉತ್ತಮ ಬೆಳೆ ನೀರಿಕ್ಷೆಯಲ್ಲಿದ್ದ
– ತಕ್ಕ ಮಟ್ಟಿಗೆ ಬೆಳೆ ಬರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಿಂದಗಿ : ಬೆಳೆ ನಂಬಿಕೊಂಡ ರೈತನಿಗೆ ಸರಿಯಾದ ಇಳುವರಿ ಸಿಗದ ಹಿನ್ನಲೆ ಫಸಲಿನ ಮೇಲೆ ಹೂಡಿಕೆ ಮಾಡಿದ ಹಣ ಸಾಲವಾಗಿ ಪರಿವರ್ತನೆಗೊಂಡಿದೆ. ಕಾರಣ ಸಿಂದಗಿ ತಾಲೂಕಿನ ಅಂತರಗಂಗಿ ಗ್ರಾಮದ ರೈತನೋರ್ವ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ . ಸಂಜಯಕುಮಾರ ಭವಾನೆಪ್ಪ ಮಾಶ್ಯಾಳ (34) ಮೃತ ದುರ್ದೈವಿ ಅಂತರಗಂಗಿ ಗ್ರಾಮದಲ್ಲಿ 3 ಎಕರೆ 12 ಗುಂಟೆ ಜಮೀನಿನಲ್ಲಿ ಒಕ್ಕಲುತನವನ್ನು ನೆಚ್ಚಿಕೊಂಡ ಸಂಜಯಕುಮತ ರೈತಾಪಿ ಜೀವನ ನಡೆಸುತ್ತಿದ್ದ ಮಾಡಬಾಳ ಗ್ರಾಮದಲ್ಲಿರುವ ಪಿ.ಕೆ.ಪಿ.ಎಸ್ ಬ್ಯಾಂಕನಲ್ಲಿ ಎರಡು ಲಕ್ಷ ರೂ ಹಾಗೂ 2021ರಲ್ಲಿ ಅದೇ ಬ್ಯಾಂಕಿನಲ್ಲಿ ಮೂರು ಲಕ್ಷ ಐವತ್ತು ಸಾವಿರ ರೂ ಗಳ ಸಾಲ ಮಾಡಿ ಸುಮಾರು ನಾಲ್ಕು ಕೊಳವೆಬಾವಿ ಕೋರಿಸಿದ್ದನು.
ಆದರೆ ಒಂದರಲ್ಲಿಯು ನೀರು ಬಾರದ ಕಾರಣ ತಕ್ಕ ಮಟ್ಟಿಗೆ ಫಸಲು ಕೈಗೆ ಬರಲಿಲ್ಲ ಆದ್ದರಿಂದ ಮನನೊಂದು ತೋಟದ ಮನೆಯ ಪಡಸಾಲೆಯಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗಿನ ಸಮಯದಲ್ಲಿ ಘಟನೆ ನಡೆದಿರಬಹುದೆಂದು ಎಂಬ ಮಾಹಿತಿ ಲಭ್ಯವಾಗಿದೆ. ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023