ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು : ಶಾಸಕ ಅಶೋಕ ಮನಗೂಳಿ
– ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವತಂತ್ರ ದಿನಾಚರಣೆ
– ನಾವು ಜಾತಿ , ದ್ವೇಷ ರಾಜಕಾರಣ ಮಾಡಿಲ್ಲ
– ನುಡಿದಂತೆ ನಡೆದ ಕಾಂಗ್ರೆಸ್
ಸಿಂದಗಿ: ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು. ಸಂವಿಧಾನದಿಂದ ಭಾರತ ಬದಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 77ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ರವರು ಬರೆದಿರುವ ಸಂವಿಧಾನ ಎಂದರು. ಇಂದು ನಾವೆಲ್ಲರೂ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಭರವಸೆ ನೀಡದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಸಿಂದಗಿ ಮತಕ್ಷೇತ್ರವನ್ನು ಮಾದರಿ ಅಭಿವೃದ್ದಿಯ ಪಥದಲ್ಲಿ ನಡೆಸುವ ಭರವಸೆ ನೀಡುವೇ ತೋಟಗಾರಿಕೆ ಇಲಾಖೆ, ಕಡಣ ಬ್ರಿಡ್ಜ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ನೀರಾವರಿ ಯೋಜನೆನ್ನು ಅನುಷ್ಠಾನಕ್ಕೆ ತರುವ ಕಾರ್ಯವನ್ನು ಮಾಡುವೆ ಎಂದು ಭರವಸೆ ನೀಡಿದರು.
ತಾಲೂಕು ದಂಡಾಧಿಕಾರಿ ಪ್ರದೀಪ ಹಿರೇಮಠ ಮಾತನಾಡಿದರು. 80ವರ್ಷಕ್ಕೂ ಮೇಲ್ಪಟ್ಟು ಸರ್ಕಾರಿ ಪಿಂಚಣ ಪಡೆಯುತ್ತಿರುವ ಹಿರಿಯ ನಾಗರಿಕ ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮಾಡಲಾಯಿತು.
ಪಟ್ಟಣದ ವಿವಿಧ ಶಾಲೆಯ ಮಕ್ಕಳು ಛದ್ಮ ವೇಷ ಧರಿಸಿದ್ದರು. ಕಲಾ ನೃತ್ಯ ತಂಡಗಳಿAದ ಮನೋರಂಜನೆ ಕಾರ್ಯಕ್ರಮ ನೀಡಲಾಯಿತು. ಈ ವೇಳೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಬಾಬೂ ರಾಠೋಡ, ಸಿ.ಪಿ,ಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆಯ್.ಎಸ್.ಟಕ್ಕೆ ಇದ್ದರು. ದೈ.ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು. ನಾವು ದ್ವೇಷ ರಾಜಕಾರಣ ಮಾಡಲ್ಲ, ಜಾತಿ ರಾಜಕಾರಣ ಮಾಡಲ್ಲ, ಮತಕ್ಷೇತ್ರವನ್ನು ಅಭಿವೃದ್ದಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಗುರಿ. ಅಶೋಕ ಮನಗೂಳಿ ಶಾಸಕರು ಸಿಂದಗಿ
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023