ದೇಶ ಎಂದರೆ ನಾನು, ನಾನು ಎಂದರೆ ದೇಶ : ಶಿವಾನಂದ ಶಿವಾಚಾರ್ಯರು
– ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಶ್ರೀಗಳು
– ವಿಧ್ಯಾರ್ಥಿ ಜೀವನದಲ್ಲಿ ಗುರುವಿನ ಸ್ಥಾನ ಮಹತ್ವದ್ದು
ಸಿಂದಗಿ : ದೇಶ ಎಂದರೆ ನಾನು, ನಾನು ಎಂದರೆ ದೇಶ ಎಂಬ ಮನೋಭಾವನೆ ಎಲ್ಲರಲ್ಲಿ ಇರಬೇಕು ಎಂದು ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯರು ಹೇಳಿದರು.ಆಗಸ್ಟ್ 15ರಂದು 76ನೇಯ ಸ್ವಾಂತಂತ್ರ್ಯ ದಿನಾಚರಣೆ ಪ್ರಯುಕ್ತ ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಜಾತಿ , ಧರ್ಮ , ಭೇದ ಭಾವವಿಲ್ಲದೆ ಜ್ಞಾನಾರ್ಜನೆ ನೀಡುವ ಜ್ಞಾನ ದೇವಾಲಯದಲ್ಲಿ ಗುರುವಿನ ಪಾತ್ರ ಮಹತ್ವದ್ದು. ಗುರುವಿಗೆ ಗೌರವ ಕೊಡುವುದು ನಮ್ಮ ದೇಶದ ಸಂಸ್ಕೃತಿ, ದೇಶ ಭಕ್ತಿಯನ್ನು ವಿದ್ಯಾರ್ಥಿಗಳ ಮನಸಲ್ಲಿ ಬಿತ್ತುವುದು ಗುರುವಿನ ಕರ್ತವ್ಯ ಎಂದರು.
ಈ ವೇಳೆ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿಧ್ಯಾರ್ಥಿ ಶ್ರೇಯಸ್ ಹೊಸಮನಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ , ನಿರ್ದೇಶಕರಾದ ಮಹಾದೇವಿ ಹಿರೇಮಠ , ಮಲ್ಲಿಕಾರ್ಜುನ ಕೂಬಾಳ, ಪಂಪನಗೌಡ ಪಾಟೀಲ, ರವಿ ಪೂಜಾರಿ, ಪತ್ರಕರ್ತ ಗುರುರಾಜ ಮಠ, ಗುಂಡು ಕುಲಕರ್ಣಿ, ಶಾಂತವೀರ ಹಿರೇಮಠ ಇದ್ದರು. ಜಗನ್ನಾಥ ಪಾಟೀಲ ನಿರೂಪಿಸಿ ವಂದಿಸಿದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023