ತಾಲೂಕು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ವಿಜಯಪುರ ಲೋಕಾಯುಕ್ತ ಡಿ.ವೈ.ಎಸ್.ಪಿ ಅರುಣ ನಾಯಕ
– ಸಿಂದಗಿ ತಾಲ್ಲೂಕಿನಿಂದಲೇ ಅತಿ ಹೆಚ್ಚು ದೂರು
– ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಲು ಸೂಚನೆ
– ಅಧಿಕಾರಿಗಳ ಸಭೆ ನಡೆಸಿದ ವಿಜಯಪುರ ಲೋಕಾಯುಕ್ತ ತಂಡ
ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ದೂರುಗಳು ಬರುವುದು ತಾಲೂಕು ಎಂದರೇ ಅದು ಸಿಂದಗಿ. ತಾಲೂಕಿನ ಜನತೆಯ ಜೊತೆ ಇಲ್ಲಿನ ಅಧಿಕಾರಿಗಳ ಸ್ಪಂದನೆ ಸರಿಯಾಗಿ ಇರುವುದಿಲ್ಲ ಎಂದು ಲೋಕಾಯುಕ್ತ ಡಿ.ವೈ.ಎಸ್.ಪಿ ಅರುಣ ನಾಯಕ ಹೇಳಿದರು.
ಪಟ್ಟಣದ ತಾಲೂಕು ಸಭಾಂಗಣದಲ್ಲಿ ಹಮ್ಮಿಕೊಂಡ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮತ್ತು ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ವಿವಿಧ ಇಲಾಖೆಗಳ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ಷರ ದಾಸೋಹದ ಆಹಾರ ಧಾನ್ಯಗಳು ವಾಹನ ಸಂಚಾರ ಬಿಸಿಯೂಟಕ್ಕೆ ತಲುಪಬೇಕಾದ ಶಾಲೆ ಬಿಟ್ಟು ಎಲ್ಲಲ್ಲೋ ತಿರುಗುತ್ತಿರುತ್ತವೆ ಅದನ್ನು ಹಿಡಿದು ದೂರು ದಾಖಲು ಮಾಡಿ ಎಂದು ಪಿ.ಎಸ್.ಆಯ್ ಸೊಮೇಶ ಗೆಜ್ಜಿ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆ: ಅಧಿಕಾರಿ ಎಚ್.ವಾಯ್.ಸಿಂಗೆಗೋಳ ಮಾಹಿತಿ ನೀಡುತ್ತಿದಂತೆ ವಿಷಕಾರಿ ರಾಸಾಯನಿಕ ಹಾಗೂ ರಸಗೊಬ್ಬರ ಸಿಕ್ಕರೆ ಕೇವಲ ಸಿಕ್ಕಿರುವ ದಾಸ್ತಾನು ಮೇಲೆ ದೂರು ಮಾಡುವುದರ ಜೊತೆಗೆ ಅದನ್ನು ತಯಾರಿಸಿದವರ ಮೇಲೆ ಕ್ರಮಕ್ಕೆ ಸಂಬAಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ ಮತ್ತು ಕೇವಲ ಇಲ್ಲಿರುವವರ ಮೇಲೆ ದೂರು ದಾಖಲು ಮಾಡಿದರೆ ತಯಾರಕರಿಗೆ ಯಾವುದೇ ಭಯ ಇರುವುದಿಲ್ಲ ಎಂದು ತಿಳಿಸಿದರು.
ಅಬಕಾರಿ: ನಗರದಲ್ಲಿ ವೈನ್ ಅಂಗಡಿಗಳು ಸಮಯ ಮೀರಿ ಚಾಲು ಇರುತ್ತವೆ. ಅಂತವರ ವಿರುದ್ದ ಕೇಸ್ ದಾಖಲು ಮಾಡಿ. ರಾತ್ರಿ ಹೋತ್ತು ನೀವು ಗಸ್ತು ತಿರಾಗಾಡಬೇಕು ನನ್ನ ಗಮನಕ್ಕೆ ಸಮಯಮೀರಿ ಒಂದು ನಿಮಿಷವು ವೈನ್ ಶಾಪ್ ಪ್ರಾರಂಭಯಿರುವುದು ಕಂಡು ಬಂದರೆ ಸರಿ ಇರಲ್ಲ. ಎಲ್ಲವೂ ಪೊಲೀಸರೇ ಮಾಡಲಿ ಎನ್ನುವುದು ಬೀಡಿ ಎಂದು ಅಬಕಾರಿ ಸಿ.ಪಿ.ಐ ಆರತಿ ಖೈನೂರ ಅವರಿಗೆ ಎಚ್ಚರಿಕೆ ನೀಡಿದರು.
ಉಪನೊಂದಣಾಧಿಕಾರಿಗಳ ಕಛೇರಿಯಿಂದ ಪ್ರತಿನಿತ್ಯ 1 ರಿಂದ 2 ದೂರುಗಳು ಕಡ್ಡಾಯವಾಗಿ ಬರುತ್ತವೆ. ನಿಮ್ಮ ಮತ್ತು ಜನರ ಮದ್ಯ ಏಜೆಂಟರೇ ಇರುವುದಾದರೇ ಹೇಗೆ? ನಿಮ್ಮ ಕಾರ್ಯಾಲಯದಲ್ಲಿರುವ ಪರವಾನಗಿ ಹೊಂದಿದ ಏಜೆಂಟ್ ರನ್ನು ಎಚ್ಚರಿಕೆಯಿಂದಿರಲು ತಿಳಿಸಿ. ಇಲ್ಲವೇ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಮಾನಗಳಲ್ಲಿ ಮಳೆಯಾಗದೇ ಇದ್ದರೆ ಅಕಸ್ಮಾತಾಗಿ ನೀರಿನ ಅಭಾವ ಉಂಟಾದರೇ ಅದಕ್ಕೆ ತೆಗೆದುಕೋಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಯೋಜನೆ ರೂಪಿಸಿಕೋಳ್ಳಿ. ಹೆಚ್ಚು ಪರಿಸರ ಸಂರಕ್ಷಣೆ ಮಾಡಿ. ರಸ್ತೆ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಆಲದ ಮರಗಳನ್ನು ಹಚ್ಚಿದ್ದೀರಿ ಆದರೆ ಮುಂದಿನ ಎರಡು ವರ್ಷಕ್ಕೆ ಪಕ್ಕದಲ್ಲಿರುವ ಆಲದ ಮರಗಳು ಕುಡಿ ಬಿಡುತ್ತವೆ ಹೀಗಾಗ ಬಾರದು ಮುನ್ನೇಚರಿಕೆ ವಹಿಸಿ. ರೈತರಿಗೆ ಪರಿಹಾರ ಒದಗಿಸುವ ಬದಲು ಅವರ ಬೆಳೆ ಪಲವತ್ತತೆಯಿಂದ ಬರುವ ಹಾಗೆ ಅವರ ದುಡಿಮೆಗೆ ಸೂಕ್ತ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಆಡಳಿತ ನಡೆಸಬೇಕು. ನಾವು ಯಾವುದೇ ಅಧಿಕಾರಿಗಳ ಮನೆಗೆ ಬರಲ್ಲು ಇಚ್ಚಿಸುವುದಿಲ್ಲ, ನೀಮ್ಮ ಮನೆಗೆ ಬರುವ ಹಾಗೆ ಮಾಡಬೇಡಿ ಬಂದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿಯೇ ಹೆಚ್ಚು ದೂರುಗಳು ಸಿಂದಗಿಯಿಂದ ದಾಖಲಾಗುತ್ತಿದ್ದು ಸಿಂದಗಿಯಲ್ಲಿಯೇ ಎರಡು ತಿಂಗಳು ಕ್ಯಾಂಪ್ ಮಾಡುವಂತೆ ಮಾಡಬೇಡಿ ಎಂದು ಲೋಕಾಯುಕ್ತ ಡಿ.ವಾಯ್.ಎಸ್.ಪಿ ಅರುಣ ನಾಯಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ವಿಧ್ಯಾರ್ಥಿ ವಸತಿ ನಿಲಯಗಳಲ್ಲಿ ಸಿಗರೇಟ್ ತುಂಡುಗಳು, ಗುಟಕಾ ಕಂಡು ಬಂದಿದ್ದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಗಂಬೀರವಾಗಿ ಪರಿಗಣ ಗಸಿ ಇಂತಹ ಅಹಿತಕರ ಘಟನೆ ಇನ್ನೊಮ್ಮೆ ಜರುಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯಲ್ಲಿರುವಂತೆ ಊಟ ಮತ್ತು ಉಪಹಾರದ ವ್ಯೆವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕ ಅಹವಾಲು: ತಾಲೂಕಿನ ರಾಂಪುರ ಪಿ ಎ ಗ್ರಾಮ ಪಂಚಾಯತನಲ್ಲಿ ಒಂದು ಮನೆ ಹಾಕಿಸಿಕೊಳ್ಳಲು ಸತತ ಹತ್ತು ವರ್ಷದಿಂದ ಒಡಾಡುತ್ತಿದ್ದೇನೆ ಚುನಾಯಿತ ಪ್ರತಿನಿಧಿಯಿಂದ ವಿಧಾನಸೌದದವರೆಗೆ ತಿರುಗಾಡಿದ್ದೇನೆ. ಐವತ್ತು ಸಾವಿರ ನೀಡಿದರೆ ಮನೆ ಹಾಕುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಲಂಚ ಕೋಟ್ಟು ಮನೆ ಹಾಕಿಸಿಕೊಳ್ಳುವುದು ನನ್ನಗೆ ಇಷ್ಟ ಇಲ್ಲ. ನನಗೆ ನ್ಯಾಯಯುತವಾಗಿ ಮನೆ ಹಾಕಿಸಿ ಕೋಡಿ ನನಗೆ ನ್ಯಾಯ ಕೊಡಿಸಿ ಎಂದು ಗಣ ಹಾರ ಗ್ರಾಮದ ಜಗದೇವಪ್ಪ ಮಾಳಪ್ಪ ಪೂಜಾರಿ ತನ್ನ ಹತ್ತು ವರ್ಷದ ಗೋಳಾಟವನ್ನು ಲೋಕಾಯುಕ್ತರ ಮುಂದೆ ತೊಂಡಿಕೊಂಡರು.
ಒಬ್ಬ ಪಿ.ಡಿ.ಓ ನನ್ನು ಮೂರು ಮೂರು ಪಂಚಾಯತಗೆ ಅಧಿಕಾರಿ ನೀಡಿದ್ದಾರೆ, ಕೆಲವು ಪಿ.ಡಿ.ಓಗಳನ್ನು ತಾ.ಪಂ ನಲ್ಲಿ ಸುಮನ್ನೆ ಕುಳಿಸಿದ್ದಾರೆ. ಅವರಿಗೆ ಪಂಚಾಯತ ಅಧಿಕಾರ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಕೆಲ ದಾಖಲೆಯೊಂದಿಗೆ ದೇವೇಂದ್ರ ಕುರಿಮನಿ ತಾಲೂಕು ಪಂಚಾಯತ ಅಧಿಕಾರಿಗಳ ವಿರುದ್ದ ಅರ್ಜಿ ನೀಡಿದರು.
ಒಟ್ಟು ಐದು ಅರ್ಜಿಗಳು ಬಂದಿದ್ದು ತನಿಖೆ ನಡೆಸುವುದಾಗಿ ಲೋಕಾಯುಕ್ತ ಸಿ.ಪಿ.ಆಯ್ ಆನಂದ ಡೋಣ ತಿಳಿಸಿದರು. ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ವೇದಿಕೆ ಮೇಲಿದ್ದರು. ಲೋಕಾಯುಕ್ತ ಸಿಬ್ಬಂದಿಗಳಾದ ಗುರು ಹಡಪದ, ಆನಂದ ಪಡಶೇಟ್ಟಿ, ಎಂ.ಎಸ್.ಸಲಗೊಂಡ, ಸಂತೋಷ ಚವ್ಹಾಣ ಸೇರಿದಂತೆ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸಿ ಆರೋಪ ರಹಿತವಾದ ಆಡಳಿತ ನಡೆಸಿ ಎಂದು ಹೇಳಿದರು.
ಈ ವೇಳೆ ಲೋಕಾಯುಕ್ತ ಸಿಪಿಐ ಆನಂದ ಡೋಣ , ಸಿಬ್ಬಂದಿಗಳಾದ ಆನಂದ ಪಡಶೆಟ್ಟಿ, ಸಂತೋಷ ಅಮರಖೇಡ, ಗುರು ಹಡಪದ, ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಿದ್ದರು.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023