ನಮ್ಮೂರ್ ಸಾಧಕರು
ಪ್ರತಿ ಕ್ಷಣವು ನೋವಲ್ಲಿ ಬೆಂದರೂ ಭಾರತದ ಕೀರ್ತಿ ಪತಾಕೆ ಹಾರಿಸಿದರು!
– ಕರಾವಳಿಯ ಮಾಲತಿ ಹೊಳ್ಳ ಎಂಬ ಮಹಾನ್ ಸಾಧಕಿ
– ಪೋಲಿಯೋದಲ್ಲಿ ಕಾಲು ಕಳೆದುಕೊಂಡರೂ ದೇಶದ ಹಿರಿಮೆ ಹೆಚ್ಚಿಸಿದರು!
– 32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ
ಬಂಗಾರ ಸಿದ್ಧವಾಗುವ ಮೊದಲು ಬ ಬೆಂದಿರುತ್ತದೆ. ಹಾಗೆಯೇ ಕೆಲವೊಮ್ಮೆ ಬೇಯುವ ಬಯಕೆ ಇಲ್ಲದೆ ಹೋದರೂ ಅನಿವಾರ್ಯ ಪರಿಸ್ಥಿತಿಗಳು ಕೆಂಡಕ್ಕೆ ನೂಕಿರುತ್ತವೆ. ಅದಾಗಿಯೂ ಛಲ ಎಂಬುದೊಂದು ಅಂತಹ ಸಮಯದಲ್ಲಿ ಮತ್ತು ಎಂತದ್ದೇ ಸಂದರ್ಭದಲ್ಲೂ ಬದುಕಿಸಿಬಿಡುತ್ತದೆ. ಹಾಗೊಬ್ಬ ಸಾಧಕಿಯೇ ಮಾಲತಿ ಹೊಳ್ಳ ಕ್ರೀಡಾ ಲೋಕದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆ ಮಾಡಿದ ಈಕೆಯ ಏಳು ಬೀಳಿನ ಹಾದಿ ನಿಜಕ್ಕೂ ರೋಚಕ.
ಪೋಲಿಯೋದಲ್ಲಿ ಕಾಲು ಸ್ವಾಧೀನ ಹೋಯ್ತು…
ಮಾಲತಿ ಹೊಳ್ಳ ಮೂಲತಃ ಉಡುಪಿ ಜಿಲ್ಲೆಯ ಮಣ್ಣೂರು ಗ್ರಾಮದವರು. ತಂದೆ ಕೃಷ್ಣಮೂರ್ತಿ ಹೊಳ್ಳ, ತಾಯಿ ಪದ್ಮಾವತಿ. ಜುಲೈ 6, 1958 ರಲ್ಲಿ ಜನಿಸಿದರು. ಈಕೆ ಒಂದು ವರ್ಷದ ಮಗುವಾಗಿದ್ದಾಗಲೇ ಪೋಲಿಯೋ ಎಂಬ ಭಯಂಕರ ವ್ಯಾಧಿಗೆ ತುತ್ತಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಇವರನ್ನು ಚೆನ್ನೈನ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆ ಗಾಗಿ ಸೇರಿಸಲಾಗಿ ಅಲ್ಲಿಯೇ ಆಕೆಯ ಬಾಲ್ಯದ ಬಹುಭಾಗ ಕಳೆಯುವಂತಾಯಿತು.
32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ
ಈಕೆಗೆ ಇದ್ದದ್ದು ದೇಹದ ನರಗಳೆಲ್ಲ ಚೆಂಡಿನಂತೆ ಒಂದು ಗೂಡುವ ಕಾಯಿಲೆ. ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿತ್ತು. ಇಂತಹ 32 ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಯಿತು. ಆದರೂ ಪ್ರತೀ ಪರೀಕ್ಷೆಯಲ್ಲಿ ಮಾಲತಿ ತರಗತಿಗೆ ಮೊದಲಿಗರು. ಇವರು 1975 ರಲ್ಲಿ ಬೆಂಗಳೂರಿಗೆ ಹಿಂತಿರುಗಿ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತಂದೆಯ ಪ್ರೋತ್ಸಾಹ ಅವರಲ್ಲಿ ಹೆಚ್ಚು ಧೈರ್ಯ ತುಂಬಿತ್ತು. ಅದೇ ವರ್ಷ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಮಾಲತಿ ಹೊಳ್ಳ ಕ್ರೀಡೆಯಲ್ಲಿ ಅವರ ಒಲವನ್ನು ಹೆಚ್ಚಿಸಿಕೊಂಡು ಅಹಮದಾಬಾದ್ ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅವರ ಜೊತೆ ಸ್ಪರ್ಧಿಸಲು ಮಹಿಳೆಯರೇ ಇಲ್ಲದ ಕಾರಣ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಅವರೆಲ್ಲ ಆಗಲೇ ಹೆಸರು ಮಾಡಿದವರು. ಆದರೆ ಅಲ್ಲಿಯೂ ಮಾಲತಿಯೇ ಗೆದ್ದರು. ಕೊರಿಯಾ, ಡೆನ್ಮಾರ್ಕ್, ಬೀಜಿಂಗ್, ಬ್ಯಾಂಕಾಕ, ಬೆಲ್ಲಿಯಂ, ಬಮಿರ್ಂಗ್ ಹ್ಯಾಂ, ಮ್ಯಾಂಚೆಸರುಗಳಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಷಿಯಾಡ್ ಕ್ರೀಡಾ ಕೂಟಗಳಲ್ಲಿ ಗಾಲಿ ಪಚಕ್ ಓಟ, ಗುಂಡು ಎಸೆತ, ತಟ್ಟೆ ಎಸೆತ, ಈಟಿ ಎಸೆದ ಸ್ಪರ್ಧೆಗಳಲ್ಲಿ ಮಾಲತಿ ಹೊಳ್ಳ ಭಾಗವಹಿಸಿ, ವಿಜಯಿಯಾದಾಗ ಇಡೀ ವಿಶ್ವವೇ ಅವರತ್ತ ತಿರುಗಿತು. ಬಮಿರ್ಂಗ್ಯಾಂಗೆ ಹೋದಾಗ, ಬಸ್ಸಿನಿಂದ ಬಿದ್ದು ಮೂಳೆ ಮುರಿದರೂ ಅವರ ಉತ್ಸಾಹ ಮಾತ್ರ ತಗ್ಗಲಿಲ್ಲ. ಇದು ಅವರಿಗೆ 17ನೇ ಮೂಳೆ ಮುರಿತ !
ದೇಶ, ವಿದೇಶದ ಪ್ರಶಸ್ತಿ, ಗೌರವ
ಕ್ರೀಡಾ ಜಗತ್ತಿನಲ್ಲಿ ಮಾಲತಿ ಹೊಳ್ಳರ ಸಾಧನೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅರ್ಜುನ ಪ್ರಶಸ್ತಿ (1995), ಪದ್ಮಶ್ರೀ ಪ್ರಶಸ್ತಿ (2001) ನೀಡಿ ಗೌರವಿಸಿತು. ಕೆ.ಕೆ. ಬಿರ್ಲಾ ಪ್ರಶಸ್ತಿ, ಅಮೆರಿಕನ ಬಯೋಗ್ರಾಫಿಕಲ್ ಇನ್ಸಿಟ್ಯೂಟ್ಸ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತಾರಾಷ್ಟ್ರೀಯ ಬಯೋಗ್ರಾಫಿಕಲ್ ಕೇಂದ್ರದ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ, ಮುಂತಾದ 30 ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಾಲತಿ ಹೊಳ್ಳ ಭಾಜನರಾಗಿದ್ದಾರೆ.
ಅಭಿನಯ ಜಗತ್ತಿಗೂ ಎಂಟ್ರಿ: ಡಾ. ರಾಜ್ ಜತೆ ನಟನೆ
ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾ. ರಾಜ್ ಕುಮಾರ್ ಅವರೊಡ ‘ಕಾಮನಬಿಲ್ಲು’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ. ವಿಶ್ವ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧವೊಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ವಿಕಲಚೇತನರ ಸೇವೆಗಾಗಿ ಈ ಸೇವಾ ಸಂಸ್ಥೆ ಸ್ಥಾಪನೆ
ತಮ್ಮಂತೆಯೇ ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲುವಾಗಿ ‘ಮಾತೃ ಫೌಂಡೇಶನ್’ ಎಂಬ ಸೇವಾ ಸಂಸ್ಥೆಯ ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು. (ಕೀಳರಿಮೆಗಿಂತ ಮಿಗಿಲ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎನ್ನುವುದು ಅವರ ಸಿದ್ಧಾಂತ) ಮಾಲತಿ ಹೊಳ್ಳರ ಜೀವನ ವಿಶೇಷ ಚೇತನರಿಗೆ (ವಿಭಿನ್ನ ಸಾಮರ್ಥ್ಯವುಳ್ಳವರು) ಮಾತ್ರವ ಎಲ್ಲ ಮಹಿಳೆಯರಿಗೂ ಸ್ಫೂರ್ತಿದಾಯಕ. ಛಲಗಾತಿ ಮಾಲತಿ ವಿಶೇಷ ಚೇತನರ ಕ್ರೀಡಾಪ್ರಪಂಚ ಹಲವು ದಾಖಲೆಗಳನ್ನು ನಿರ್ಮಿಸಿ, ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
– ಸಂಗ್ರಹ (ಪುಸ್ತಕ ಮತ್ತು ಇಂಟರ್ನೆಟ್)