- ಗೋ ರಕ್ಷಣೆಯ ಹೆಸರಿನಲ್ಲಿ ಅಧಿಕಾರ ಹಿಡಿದ ಸರ್ಕಾರ
- ವೈದ್ಯಾಧಿಕಾರಿಗಳ ಸಹಾಯಕ ಸಿಬ್ಬಂದಿಗಳಿಗೆ ಭದ್ರತೆ ಇಲ್ಲ
- ಪಶು ಇಲಾಖೆಯಲ್ಲಿ ಭಾರೀ ಗೋಲ್ ಮಾಲ್..!?
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 17 ಜನ ಹಾಗೂ ರಾಜ್ಯದ್ಯಂತ ಸಾವಿರಾರು ಜನ ಪಶು ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದದ್ದು ಅವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಪಶು ಇಲಾಖೆಯಲ್ಲಿ ವರ್ಷಕ್ಕೆ ಎರಡು ಬಾರಿ ಕಾಲುಬಾಯಿ ರೋಗಕ್ಕೆ ವ್ಯಾಕ್ಸಿನೇಷನ್, ಮೂರು ತಿಂಗಳಿಗೆ ಒಮ್ಮೆ ಬ್ರುಸೊಲ್ಲಾ ವ್ಯಾಕ್ಸಿನೇಷನ್, ಚರ್ಮ ಗಂಟು ರೋಗಕ್ಕೆ ವ್ಯಾಕ್ಸಿನೇಷನ್ ತುರ್ತು ಚಿಕಿತ್ಸೆಗಳು ಈ ರೀತಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ವ್ಯಾಕ್ಸಿನೇಷನ್ ಮಾಡುವಂತ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೆ ಓಡಾಡಲು ಕನಿಷ್ಠ ವರ್ಷಕ್ಕೆ ಒಂದು ಲಕ್ಷ ರೂ ಗಳು ಪೆಟ್ರೋಲ್ ಗೆ ಖರ್ಚಾಗುತ್ತದೆ ಎನ್ನುವುದು ಸಂಬಂಧಪಟ್ಟ ನೌಕರರಿಂದ ಮಾಹಿತಿ ಇದೆ. ಹಾಗೆಯೇ ವರ್ಷಕ್ಕೆ ಬೆಂಗಳೂರಿನಲ್ಲಿ ಇರುವಂತಹ ಕೇಂದ್ರ ಕಚೇರಿಗೆ ಸುಮಾರು 15 ಸಾವಿರ ರೂಗಳು ಲಂಚವನ್ನು ನೀಡದಿದ್ದರೆ ಈವೇತನವೂ ಕೂಡ ಕಾಲಕಾಲಕ್ಕೆ ಸರಿಯಾಗಿ ಸಿಗುವುದಿಲ್ಲ ಎನ್ನುವುದು ನೌಕರರ ಅಳಲಾಗಿದೆ. ಅಷ್ಟಕ್ಕೂ ಈ ಸಿಬ್ಬಂದಿಗಳಿಗೆ ಮಾಸಿಕವಾಗಿ ನೀಡುತ್ತಿರುವುದು ಬರಿ 12500 ರೂ ಗಳು ಭಾನುವಾರವೂ ಕೂಡ ಕೆಲಸ ಮಾಡಬೇಕಾಗುತ್ತದೆ ಇವರ ಕಷ್ಟಗಳನ್ನು ಮೇಲಾಧಿಕಾರಿಗಳೊಂದಿಗೆ ಹೇಳಿಕೊಂಡರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎನ್ನುವುದು ಸಿಬ್ಬಂದಿಗಳ ಅಳಲಾಗಿದೆ.
ಗೋವುಗಳ ಹೆಸರಿನಲ್ಲಿ ಅಧಿಕಾರ ಹಿಡಿದಂತಹ ಈ ಸರ್ಕಾರದಲ್ಲಿ ಗೋರಕ್ಷಕರಿಗೆ ರಕ್ಷಣೆ ಇಲ್ಲವಾಗಿದೆ, ಗೋವುಗಳ ಆಹಾರವು ಕೂಡ ಗಗನಕ್ಕೇರಿದೆ, ಎಷ್ಟೋ ಜನ ಸಿಬ್ಬಂದಿಗಳು ಇಂದು ನಾಳೆ ಸಂಬಳ ಜಾಸ್ತಿ ಆಗುತ್ತದೆ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಆರು ತಿಂಗಳ ವೇತನವನ್ನು ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ ಆದ್ದರಿಂದ ಸರ್ಕಾರವು ಕೂಡಲೇ ನೀಡುತ್ತಿರುವಂತಹ ಗೌರವಧನವನ್ನು ಬಿಡುಗಡೆಗೊಳಿಸುವುದರ ಜೊತೆಗೆ ಕನಿಷ್ಠ ಮಾಸಿಕವಾಗಿ 20,000 ರೂಗಳ ವೇತನವನ್ನು ಮತ್ತು ಪಶುಗಳಿಗೆ ಚುಚ್ಚುಮದ್ದು ನೀಡುವಂತಹ ಸಂದರ್ಭದಲ್ಲಿ ತಗಲುವ ಓಡಾಟದ ಭತ್ಯೆಯನ್ನು ನೀಡಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.