- ದೇಶದಲ್ಲಿ ಸರಾಸರಿ 29.5 ಡಿಗ್ರಿ ತಾಪ ದಾಖಲು
- ಬೇಸಿಗೆಯಲ್ಲಿ ಬಾರಿ ಬಿಸಿ ವಾತಾವರಣ ಸಂಭವ
NAMMUR EXPRESS NEWS
ನವದೆಹಲಿ : ಈ ವರ್ಷ ಫೆಬ್ರವರಿಯಲ್ಲಿ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದು, ಇದು ಕಳೆದ 146 ವರ್ಷಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಎನಿಸಿಕೊಂಡಿದೆ. ಹಾಗಾಗಿ ಈ ವರ್ಷ ಬೇಸಿಗೆ ಮತ್ತಷ್ಟು ಬಿಸಿಯಿಂದ ಕೂಡಿರಲಿದ್ದು, ಜನರ ಸಂಕಷ್ಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 1877ರ ಬಳಿಕ 2023ರ ಫೆಬ್ರವರಿಯಲ್ಲಿ ಅತಿ ಅಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಇದೆ ವೇಳೆ 1901ರ ಬಳಿಕ ಫೆಬ್ರವರಿಯಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ 5ನೇ ಅತಿ ಹೆಚ್ಚಿನ ಕನಿಷ್ಠ ತಾಪಮಾನ ಎನಿಸಿಕೊಂಡಿದೆ. ಫೆಬ್ರವರಿಯಲ್ಲಿ ಈ ಸ್ಥಿತಿ ಇರುವ ಕಾರಣ ಈ ವರ್ಷ ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಹಗಲು ಮತ್ತು ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಎಂದು ಹವಮಾನ ಇಲಾಖೆ ಅಂದಾಜಿಸಿದೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಈ ಬಾರಿ ಬೇಸಿಗೆ ತಾಪ ಹೆಚ್ಚಾಗಿರಲಿದೆ.